ಬೆಂಗಳೂರು: ಪೂಜೆ ಮಾಡಲು ಪಾಟ್‌ನಲ್ಲಿ ಗಾಂಜಾ ಗಿಡ ಬೆಳೆಸಿದ್ದ ಪೇಯಿಂಟರ್‌ ಜೈಲಿಗೆ..!

By Kannadaprabha NewsFirst Published Oct 26, 2023, 5:24 AM IST
Highlights

ಬೈರತಿ ನಿವಾಸಿ ರಾಮ್ ಆಶೀಶ್ ಬಂಧಿತನಾಗಿದ್ದು, ಆರೋಪಿಯಿಂದ 6 ಅಡಿ ಎತ್ತರದ ಗಾಂಜಾ ಗಿಡ ಜಪ್ತಿ ಮಾಡಲಾಗಿದೆ. ಕಾನೂನು ಬಾಹಿರವಾಗಿ ಮನೆಯಲ್ಲಿ ರಾಮ್‌ ಗಾಂಜಾ ಗಿಡವನ್ನು ಬೆಳೆಸಿರುವ ಮಾಹಿತಿ ಅನ್ವಯ ಆತನ ಮನೆಗೆ ತೆರಳಿ ಪರಿಶೀಲಿಸಿದಾಗ ಹೊರಾವರಣದಲ್ಲಿ ಗಾಂಜಾ ಗಿಡ ಪತ್ತೆ. 

ಬೆಂಗಳೂರು(ಅ.26): ಮನೆ ಹೊರ ಆವರಣದಲ್ಲಿ ಬಕೆಟ್‌ನಲ್ಲಿ ಮಣ್ಣು ತುಂಬಿ ಪೂಜೆ ಸಲುವಾಗಿ ಗಾಂಜಾ ಗಿಡವನ್ನು ಬೆಳೆಸಿದ ತಪ್ಪಿಗೆ ಈಗ ಪೇಯಿಂಟರ್‌ ವೊಬ್ಬ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಬೈರತಿ ನಿವಾಸಿ ರಾಮ್ ಆಶೀಶ್ ಬಂಧಿತನಾಗಿದ್ದು, ಆರೋಪಿಯಿಂದ 6 ಅಡಿ ಎತ್ತರದ ಗಾಂಜಾ ಗಿಡ ಜಪ್ತಿ ಮಾಡಲಾಗಿದೆ. ಕಾನೂನು ಬಾಹಿರವಾಗಿ ಮನೆಯಲ್ಲಿ ರಾಮ್‌ ಗಾಂಜಾ ಗಿಡವನ್ನು ಬೆಳೆಸಿರುವ ಮಾಹಿತಿ ಅನ್ವಯ ಆತನ ಮನೆಗೆ ತೆರಳಿ ಪರಿಶೀಲಿಸಿದಾಗ ಹೊರಾವರಣದಲ್ಲಿ ಗಾಂಜಾ ಗಿಡ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದವರ ಬಂಧನ: 47 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಉತ್ತರಪ್ರದೇಶ ಮೂಲದ ರಾಮ್‌, ನಗರದಲ್ಲಿ ಪೇಯಿಂಟರ್ ಆಗಿ ಕೆಲಸ ಮಾಡುತ್ತಿದ್ದ. ಉತ್ತರ ಭಾರತೀಯರು ಗಾಂಜಾ ಗಿಡವನ್ನು ಮನೆಯಲ್ಲಿ ಪೂಜೆ ಸಲುವಾಗಿ ಬೆಳೆಸುತ್ತಾರೆ. ಅಂತೆಯೇ ತಾನು ಸಹ ಪೂಜೆ ಸಲುವಾಗಿ ಗಾಂಜಾ ಬೆಳೆಸಿದ್ದೆ ವಿನಃ ಮಾರಾಟ ಮಾಡುವುದಕ್ಕಲ್ಲ ಎಂದು ವಿಚಾರಣೆ ಆರೋಪಿ ರಾಮ್ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

click me!