
ಬೆಂಗಳೂರು: ಔಷಧಿ ಸಾಗಣೆ ಮಾಡಲು ಬಳಸಿದ ಮುಚ್ಚಿದ ಕಂಟೇನರ್ ಟ್ರಕ್‌ನಿಂದ 4.9 ಲಕ್ಷ ರೂ. ಮೌಲ್ಯದ ನೋವು ನಿವಾರಕ ಮಾತ್ರೆಗಳನ್ನು ಕಳ್ಳತನ ಮಾಡಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಈಗ ಪೊಲೀಸರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮೇ 9 ರಿಂದ ಮೇ 12 ರ ನಡುವೆ ಈ ಘಟನೆ ನಡೆದಿದೆ. ಈ ಸಂಬಂಧ ಸಾರಿಗೆ ಕಂಪನಿಯ (ಸೂರತ್ ಗೂಡ್ಸ್ ಟ್ರಾನ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್) ವ್ಯವಸ್ಥಾಪಕ ಬಸವರಾಜ್ (53)ಪೊಲೀಸರಿಗೆ ದೂರು ನೀಡಿದ್ದಾರೆ.
‘ಸೂರತ್ ಗೂಡ್ಸ್ ಟ್ರಾನ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್’ ಎಂಬ ಖಾಸಗಿ ಸಾರಿಗೆ ಸಂಸ್ಥೆಗೆ ಸೇರಿದ ಟ್ರಕ್‌ನಲ್ಲಿ, ಪ್ರಸಿದ್ಧ ಔಷಧ ಕಂಪನಿ ಅಬಾಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಬ್ರೂಫೆನ್ (Brufen) 400 ಮಿಗ್ರಾಂ ಮಾತ್ರೆಗಳ ಬಾಕ್ಸ್‌ಗಳೂ ಸೇರಿದಂತೆ 567 ಔಷಧಿ ಪೆಟ್ಟಿಗೆಗಳನ್ನು ಗೋವಾದಿಂದ ಬೆಂಗಳೂರಿಗೆ ತರಲಾಗುತ್ತಿತ್ತು. ಶಾಹಿ ಕುಮಾರ್ ಟ್ರಕ್ ಅನ್ನು ಚಲಾಯಿಸುತ್ತಿದ್ದರು. ಮೇ 12 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಟ್ರಕ್ ಅನ್ನು ಬೆಂಗಳೂರಿನ ನಾಯಂಡಹಳ್ಳಿ ಶಾಖೆಗೆ ತಂದು ನಿಲ್ಲಿಸಿದಾಗ ಈ ಕಳ್ಳತನ ಬೆಳಕಿಗೆ ಬಂತು. ಶಾಖೆಯ ಸಿಬ್ಬಂದಿ ಪೆಟ್ಟಿಗೆಗಳನ್ನು ಲೆಕ್ಕಹಾಕಿದಾಗ, ಕೇವಲ 517 ಬಾಕ್ಸ್‌ಗಳು ಮಾತ್ರ ಟ್ರಕ್‌ನಲ್ಲಿ ಕಂಡು ಬಂದಿತ್ತು. 50 ಪೆಟ್ಟಿಗೆಗಳು ಕಾಣೆಯಾಗಿದ್ದವು.
ಬಸವರಾಜ್, ಟ್ರಕ್ ಚಾಲಕ ಶಾಹಿ ಕುಮಾರ್ ಅನ್ನು ವಿಚಾರಣೆ ಮಾಡಿದಾಗ, ಪ್ರಕಾರ ಮೇ 10ರಂದು ಬೆಳಗಿನ ಜಾವ 3 ಗಂಟೆಗೆ, ಹಾವೇರಿಯ ಬನಕಾಪುರ ಟೋಲ್ ಬಳಿ ಟ್ರಕ್ ನಿಲ್ಲಿಸಿ, ಬೆಳಿಗ್ಗೆ 7 ಗಂಟೆ ಮಲಗಿದ್ದಾಗಿ ಹೇಳಿದ್ದಾನೆ. ಅದೇ ದಿನ ಸಂಜೆ ಬೆಂಗಳೂರಿಗೆ ತಲುಪಿದ ನಂತರ, ತಮ್ಮ ಮನೆಯ ಬಳಿ (ನೆಲಮಂಗಲದ ಬೊಮ್ಮನಹಳ್ಳಿ) ಟ್ರಕ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದನಂತೆ. ಮೇ 11 ಭಾನುವಾರ ಕಂಪನಿ ಮುಚ್ಚಿದ್ದ ಕಾರಣ ಮನೆಲ್ಲೇ ವಿಶ್ರಾಂತಿ ಪಡೆದರು. ಮೇ 12 ರಂದು ಶಾಖೆಗೆ ಟ್ರಕ್ ತಂದು ನೀಡಿದರು. ಆದರೆ, ಪೆಟ್ಟಿಗೆಗಳು ಯಾವಾಗ ಕಳುವಾದವು ಎಂಬುದು ಚಾಲಕನಿಗೆ ತಿಳಿಯದ ಕಾರಣ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಮಾತ್ರವಲ್ಲ ಟ್ರಕ್‌ನ ಲಾಕ್ ಕೂಡ ತೆರೆಯದೆ ಹಾಗೆಯೇ ಇತ್ತು. ಇದರಿಂದಾಗಿ, ಇದೊಂದು ನಿಖರವಾಗಿ ಯೋಜಿತ ಕೃತ್ಯವಾಗಿರಬಹುದು ಎಂಬ ಅನುಮಾನಗಳು ಮೂಡಿವೆ.
ಕಂಪನಿಯ ವ್ಯವಸ್ಥಾಪಕ ಬಸವರಾಜ್ ನೀಡಿದ ದೂರಿನಲ್ಲಿ, ಎರಡು ಪ್ರಮುಖ ಸ್ಥಳಗಳಾದ ಬನಕಾಪುರ ಟೋಲ್ ಹಾಗೂ ಬೊಮ್ಮನಹಳ್ಳಿ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆದರೆ ಅಲ್ಲಿ ಯಾವುದೇ ಅನುಮಾನಾಸ್ಪದ ಚಲನೆ ಕಂಡುಬಂದಿಲ್ಲ. ಇದರಿಂದಾಗಿ ದೂರು ದಾಖಲಿಸಲು ಕೆಲ ದಿನಗಳ ಕಾಲ ವಿಳಂಬವಾಯಿತು. ಆದರೆ ಔಷಧಿಗಳ ಬೆಲೆ ಹೆಚ್ಚು ಇರುವುದು, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯವಾಗಿರುವುದರಿಂದ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ.
ಕಳವಾದ 50 ಪೆಟ್ಟಿಗೆಗಳಲ್ಲಿ ಪ್ರತಿಯೊಂದರ ಮೌಲ್ಯ ₹9,800 ಅಂದರೆ ಒಟ್ಟು ನಷ್ಟ: ₹4,90,000 ರೂಪಾಯಿಗಳಷ್ಟು. ಮೇ 20 ರಂದು ಈ ಕುರಿತು ಅಧಿಕೃತ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, “ವಿವಿಧ ಹಂತದಲ್ಲಿ ತನಿಖೆ ನಡೆಯುತ್ತಿದೆ. ಚಾಲಕನ ವಿರುದ್ಧವೂ ಶಂಕೆ ಇದೆ” ಎಂದು ಹೇಳಲಾಗುತ್ತಿದೆ. ಈ ಘಟನೆ ಬಳಿಕ ಲಾಜಿಸ್ಟಿಕ್ಸ್ ಹಾಗೂ ಔಷಧ ಸಾಗಣೆಗೆ ಸಂಬಂಧಿಸಿದ ಸುರಕ್ಷತೆಯ ಕುರಿತಾಗಿ ಹೊಸ ಚರ್ಚೆಗಳು ಆರಂಭವಾಗಿವೆ. ಯಾವಾಗಲೂ ಬೆಲೆಬಾಳುವ ವಸ್ತುಗಳ ಸಾಗಣೆಗೆ GPS, ಲಾಕ್ ಅಲರ್ಟ್ ವ್ಯವಸ್ಥೆಗಳು, 24x7 ನಿಗಾ ಇವೆಯೆಂಬುದು ಖಚಿತಪಡಿಸಿಕೊಳ್ಳಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಪ್ರಕರಣವು ಔಷಧ ಸಾಗಣೆ ಕ್ಷೇತ್ರದಲ್ಲಿ ಹೆಚ್ಚಿನ ನಿಗಾ ಮತ್ತು ಪಾರದರ್ಶಕತೆಯ ಅಗತ್ಯವಿದೆ ಎಂಬ ಎಚ್ಚರಿಕೆಯನ್ನು ನೀಡುತ್ತದೆ. ನೊಂದ ಕಂಪನಿಗೆ ಹಣದ ನಷ್ಟವಾಗಿರುವುದರಿಂದ ಹೊರತು, ಜನರ ಜೀವದ ಜೊತೆಗೆ ಜೂಜಾಟ ಆಡಿರುವಂತಾಗಿದೆ ಈ ಕಳ್ಳತನ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿ, ಚಾಲಕನ ನಡೆ, ಲಾಕ್ ಸ್ಥಿತಿಯ ಮಾಹಿತಿಗಳನ್ನು ಆಧರಿಸಿ ಕಳ್ಳರನ್ನು ಪತ್ತೆಹಚ್ಚುವಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ