ಲಾಕ್‌ಡೌನ್ ಕಾರಣ ಕುಡುಕರು, ಹಾಗೂ ಎಣ್ಣೆ ಪ್ರಿಯರಿಗೆ ಮರಭೂಮಿಯಲ್ಲಿ ಸಾವಿರ ಕಿಲೋಮೀಟರ ನಡೆದು ನೀರು ಸಿಗದ ಅನುಭವವಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಕಾನೂನು ಉಲ್ಲಂಘಿಸಿ, ಲಾಕ್‌ಡೌನ್ ಆದೇಶ ಮೀರಿ ಎಣ್ಣೆ ಸಪ್ಲೈ ಮಾಡುತ್ತಿದ್ದಾರೆ. ಅದು ಕೂಡ ದುಪ್ಪಟ್ಟು ಬೆಲೆಗೆ. ಆನ್‌ಲೈನ್ ಅಲ್ಲ, ಸಾಮಾಜಿಕ ಜಾಲತಾಣದ ಮೂಲಕ ಎಣ್ಣೆ ಸಪ್ಲೈ ಮಾಡಿದವ ಇದೀಗ ಪೊಲೀಸರಿಗೆ ಲಾಕ್ ಆಗಿದ್ದಾನೆ.
ಬೆಂಗಳೂರು(ಏ.11): ಕೊರೋನಾ ವೈರಸ್ ಹರಡುತ್ತಿರುವ ಕಾರಣ ಇದೀಗ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಸಿಎಂ ಯಡಿಯೂರಪ್ಪ ಇದೀಗ ಕರ್ನಾಟಕದಲ್ಲಿ 15 ದಿನ ಲಾಕ್‌ಡೌನ್ ವಿಸ್ತರಿಸಲು ಮುಂದಾಗಿದ್ದಾರೆ. ಇದೇ ಲಾಕ್‌ಡೌನ್ ಸಮಯವನ್ನು ಬಂಡವಾಳವಾಗಿಸಿಕೊಂಡ ಹಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ದಿನಸಿ ವಸ್ತುಗಳು, ತರಕಾರಿ ಸೇರಿದಂತೆ ಹಲವು ವಸ್ತುಗಳು ಬೆಲೆಯನ್ನ ಏರಿಕೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರ ನಡುವೆ ಕೆಲವರು ನಿಯಮ ಉಲ್ಲಂಘಿಸಿ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗೆ ಕಳ್ಳ ದಾರಿ ಹಿಡಿದ ಯುವಕನೋರ್ವ ಇದೀಗ ವರ್ಷಪೂರ್ತಿ ಪೊಲೀಸರ ಲಾಕ್‌ಡೌನ್‌ಗೆ ಒಳಗಾಗಿದ್ದಾನೆ.
ಲಾಕ್‌ಡೌನ್: ಮದ್ಯ ಸಿಗದೆ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
undefined
ಕಿರಣ್ ಅನ್ನೋ ಯುವಕ ತನ್ನ ಇನ್‌ಸ್ಟಾಗ್ರಾಂ ಮೂಲಕ ಬ್ರಾಂಡೆಡ್ ಮದ್ಯದ ಸೇಲ್ ಇದೆ ಎಂದು ಜಾಹೀರಾತು ಪೋಸ್ಟ್ ಹಾಕಿದ್ದಾನೆ. ಬಳಿಕ ತನ್ನ ವ್ಯಾಟ್ಸಾಪ್ ನಂಬರ್ ಕೂಡ ನೀಡಿದ್ದಾನೆ. ಹೀಗೆ ಲಾಕ್‌ಡೌನ್ ಆರಂಭವಾದಗಿನಿಂದ ಕಿರಣ್ ಸಾಮಾಜಿಕ ಜಾಲತಾಣದಲ್ಲಿ ದುಪ್ಪಟ್ಟು ಬೆಲೆಗೆ ಮದ್ಯ ವಿತರಣೆ ಆರಂಭಿಸಿದ್ದಾನೆ. ಎಣ್ಣೆ ಬೇಕಾದವರು ಕರೆ ಅಥವಾ ಮೆಸೇಜ್ ಮಾಡಿದಾಗ ತನ್ನ ಗೂಗಲ್ ಪೇ, ಫೋನ್ ಪೇ ಖಾತೆಗಳನ್ನು ನೀಡಿದ್ದಾರೆ. ಗ್ರಾಹಕರು ಹಣ ಪಾವತಿಸಿದ ಬಳಿಕ ಈತ, ವಿಜಯನಗರದ ಕೆಲ ಪ್ರದೇಶದಲ್ಲಿ ಮದ್ಯದ ಬಾಟಲಿಯನ್ನು ಅಡಗಿಸಿಟ್ಟು ಬರುತ್ತಿದ್ದ.
ಲಾಕ್‌ಡೌನ್: ಮದ್ದೂರಿನಲ್ಲಿ 25,920 ಲೀಟರ್ ಮದ್ಯ ವಶ...
ಮದ್ಯ ಖರೀದಿಸಿದ ಗ್ರಾಹಕರಿಗೆ ಬಾಟಲಿ ಇಟ್ಟ ಸ್ಥಳದ ಮಾಹಿತಿ ಹಾಗೂ ಫೋಟೋ ಸೇರದಂತೆ ಇತರ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ. ಇತ್ತ ಗ್ರಾಹಕರು ಕಿರಣ್ ನೀಡಿದ ಮಾಹಿತಿ ಆಧರಿ ವಿಜಯನಗರದ ಬಳಿಕ ಜಾಲಾಡಿ ಮದ್ಯ ತೆಗೆದುಕೊಂಡು ಹೋಗುತ್ತಿದ್ದರು. ಈತ ಕಳೆದ 2 ವಾರಗಳಲ್ಲಿ ಖಾಯಂ ಗ್ರಾಹಕರನ್ನು ಹೊಂದಿದ್ದ. ಈ ಕುರಿತು ಮಾಹಿತಿ ಪಡೆದ ಪೊಲೀಸರು ಕಿರಣ್‌ಗೆ ಬಲೆ ಬೀಸಿದ್ದಾರೆ. ಆದರೆ ಆತ ಎಸ್ಕೇಪ್ ಆಗಿದ್ದಾನೆ.
ಲಾಕ್‌ಡೌನ್: ಅಬಕಾರಿ ಅಧಿಕಾರಿಗಳ ದಾಳಿ, ಅಕ್ರಮ ಮದ್ಯ ವಶ
ಪೊಲೀಸರಿಂದ ತಪ್ಪಿಸಿಕೊಂಡ ಕಿರಣ್ ಆತ್ಮವಿಶ್ವಾಸ ಹೆಚ್ಚಾಗಿದೆ. ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸೇಲ್ ಆರಂಭಿಸಿದ್ದಾನೆ. ಈ ಬಾರಿ ಪೊಲೀಸರು ಕೊಂಚ ಪ್ಲಾನ್ ಮಾಡಿ ಕಿರಣ್ ಹಿಡಿಯಲು ಮುಂದಾಗಿದ್ದಾರೆ. ಪೊಲೀಸರು ಕಿರಣ್‌ಗೆ ಕರೆ ಮಾಡಿ ಉರ್ದು ಭಾಷೆಯಲ್ಲಿ ಮಾತನಾಡಿದ್ದಾರೆ. ತನಗೆ ಮದ್ಯ ನೀಡುವಂತೆ ಹೇಳಿದ್ದಾರೆ. ಒಂದೆರೆಡು ಬಾರಿ ಕಿರಣ ಉರ್ದು ಗ್ರಾಹಕನನ್ನು ಪರೀಕ್ಷಿಸಿದ್ದಾನೆ. ಬಳಿಕ ಈತ ನಿಜವಾದ ಗ್ರಾಹಕ ಎಂದು ತಿಳಿದ ವಿಜಯನಗರ ಬಳಿಕ ಬಾಟಲಿ ಅಡಗಿಸಿಡಲು ಬಂದಿದ್ದಾನೆ.
ಬಾಟಲಿ ಅಡಗಿಸಿಡಲು ತನ್ನ ಹೊಂಡಾ ಅಕ್ಟೀವಾ ಸ್ಕೂಟರ್ ನಿಲ್ಲಿಸುತ್ತಿದ್ದಂತೆ ಪೊಲೀಸರ ವಾಸನೆ ಬಡಿದಿದೆ. ತಕ್ಷಣವೇ ಸ್ಕೂಟರ್ ಸ್ಟಾರ್ಟ್ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ಎಲ್ಲದಕ್ಕೂ ಸಜ್ಜಾಗಿದ್ದ ಪೊಲೀಸ್ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕಿರಣ್‌ನನ್ನು ಅರೆಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಈತನ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.