ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಜನರನ್ನು ನಂಬಿಸಿ ₹160 ಕೋಟಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

By Ravi Janekal  |  First Published Jan 30, 2024, 1:44 PM IST

ವರ್ಕ್ ಫ್ರಂ ಹೋಂ ಜಾಬ್ ಕೊಡಿಸೋದಾಗಿ ಜನರನ್ನು ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದ ಅಂತರರಾಜ್ಯದ ಖದೀಮರನ್ನು ಬೆಂಗಳೂರು ಸೈಬರ್ ಕ್ರೈಂ ಪೊಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುಮಾರು 160 ಕೋಟಿ ರೂ. ಅಧಿಕ ವಂಚನೆ ಮಾಡಿರುವ ಖದೀಮರು. 


ಬೆಂಗಳೂರು (ಜ.30) :ವರ್ಕ್‌ ಫ್ರಂ ಹೋಂ ಕೆಲಸ ನೀಡೋದಾಗಿ ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಮೇಲೆ ಸಿಸಿಬಿ ಡಿಸಿಪಿ ಅಬ್ದುಲ್ ಅಹಾದ್ ನೇತೃತ್ವದಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ದಾಳಿಯಲ್ಲಿ ತೆಲಂಗಾಣದ ಇಬ್ಬರು, ಹೈದರಾಬಾದನ ಮೂವರು ಮಹಾರಾಷ್ಟ್ರದ ಇಬ್ಬರು ಸೇರಿ ಒಟ್ಟು 11 ಮಂದಿ ಸೈಬರ್ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಖದೀಮರಿಂದ 11 ಮೊಬೈಲ್, 2 ಲ್ಯಾಪ್ ಟಾಪ್, 15 ಸಿಮ್ ಕಾರ್ಡ್, 3 ಬ್ಯಾಂಕ್ ಚೆಕ್ ಬುಕ್ ವಶಕ್ಕೆ ಪಡೆದುಕೊಂಡಿರುವ ಸೈಬರ್ ಕ್ರೈಂ ಪೊಲೀಸರು. ಇದುವರೆಗೂ 2143 ಅಕೌಂಟ್ ಗಳಿಂದ 158 ಕೋಟಿ 94 ಲಕ್ಷಕ್ಕೂ ಅಧಿಕ ಹಣ ಎಗರಿಸಿರುವ ಸೈಬರ್ ವಂಚಕರು. ಸದ್ಯ 30 ಅಕೌಂಟ್ ಫ್ರೀಜ್ ಮಾಡಿರುವ ಪೊಲೀಸರು, 62 ಲಕ್ಷದ 83 ಸಾವಿರ ರೂಪಾಯಿಗಳಷ್ಟು ಹಣವನ್ನು ಜಪ್ತಿ ಮಾಡಿದ್ದಾರೆ.

Tap to resize

Latest Videos

 

ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!

ವಂಚನೆ ಹೇಗೆ?

ಪಾರ್ಟ್‌ ಟೈಂ, ವರ್ಕ್ ಫ್ರಂ ಜಾಬ್ ಹುಡುಕು ಯುವಕ, ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು. ವರ್ಕ್ ಫ್ರಂ ಹೋಂ ಜಾಬ್ ಖಾಲಿ ಇದೆ ಎಂದು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದ ವಂಚಕರು ಕಾಲೇಜು, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ದಟ್ಟಣೆ ಇರುವೆಡೆ ವಾಲ್‌ಗಳಿಗೆ ಸ್ಟಿಕರ್ ಅಂಟಿಸುತ್ತಿದ್ದ ಖದೀಮರು. ಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿ ಗಳಿಸಿ ಎಂದು ಜನರನ್ನು ನಂಬಿಸುತ್ತಿದ್ದ ವಂಚಕರು. ಈ ವಂಚನೆಗೆಂದೇ ಸಾವಿರಾರು ಅಕೌಂಟ್ ಗಳ ಬಳಕೆ ಮಾಡುತ್ತಿದ್ದರು. ಮನೆಯಲ್ಲಿ ಕುಳಿತು ಹಣ ಗಳಿಸಬಹುದು ಎಂಬ ಆಸೆಯಿಂದ ಸಂಪರ್ಕಿಸುತ್ತಿದ್ದ ಯುವಕ, ಯುವತಿಯರಿಗೆ ಗಾಳ ಹಾಕುತ್ತಿದ್ದ ಖದೀಮರು. ಮೊದಲಿಗೆ ಇಂತಿಷ್ಟು ಹಣ ನೀಡುವಂತೆ ಪುಸಲಾಯಿಸುತ್ತಿದ್ದರು. ಇನ್ಸ್‌ಟಾಗ್ರಾಂ ಮೂಲಕ ಲಿಂಕ್ ಕಳಿಸಿ ಹಣ ಎಗರಿಸುತ್ತಿದ್ದ ವಂಚಕರು. ಇದೇ ರೀತಿ ಸಾವಿರಾರು ಜನರಿಗೆ ವಂಚನೆ ಮಾಡಿರುವ ಖತರ್ನಾಕ್ ಗ್ಯಾಂಗ್. ಈ ಬಾರಿ ಸೈಬರ್ ಕ್ರೈಂ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಪೊಲೀಸ್ ಆಯುಕ್ತರು ಹೇಳೋದೇನು?

ಹೊರರಾಜ್ಯದಿಂದ ಬಂದು ನಗರದಲ್ಲಿ ವಾಸವಾಗಿ ಸೈಬರ್ ವಂಚಕರು. ಆನ್‌ಲೈನ್ ಜಾಬ್ ಫ್ರಾಡ್ ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಜನರಿಗೆ ಕೆಲಸ ಕೊಡಿಸ್ತಿನಿ ಅಂತಾ ನಂಬಿಸಿ ಅವರಿಂದ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿ ವಂಚಕರನ್ನು ಬಂಧಿಸುವಲ್ಲಿ ಸಿಒಪಿ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು ಹನ್ನೊಂದು ಜನರನ್ನು ಬಂಧಿಸಲಾಗಿದೆ.

ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಾಪತ್ತೆ; ವಾರ ಕಳೆದರೂ ಪತ್ತೆಯಾಗಿಲ್ಲ!

ಬಂಧಿತರು ತೆಲಂಗಾಣ, ಮಹಾರಾಷ್ಟ್ರ, ಸೇರಿ ಹಲವು ರಾಜ್ಯಗಳಿಗೆ ಸೇರಿದವರಾಗಿದ್ದು, ಸುಮಾರು 2143ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. 160 ಕೋಟಿಯಷ್ಟು ಹಣ ಇವರ ಅಕೌಂಟ್‌ಗಳಿಗೆ ವರ್ಗಾವಣೆ ಆಗಿರೋದು ತನಿಖೆ ವೇಳೆ ಗೊತ್ತಾಗಿದೆ. ಬಹುತೇಕ ಹಣ ಜಪ್ತಿ ಮಾಡಲಾಗಿದ್ದು, ಇನ್ನೂ 60 ಲಕ್ಷ ಹಣ ಸೀಜ್ ಮಾಡೋದು ಬಾಕಿಯಿದೆ. ಆರೋಪಿಗಳು ವ್ಯವಹರಿಸಿದ್ದ ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

click me!