ಒನ್‌ಸೈಡ್ ಲವ್‌, ಯುವಕನ ವಿರುದ್ಧ ಸೇಡಿಗೆ ಹುಸಿ ಬಾಂಬ್ ಸಂದೇಶ: ಈಕೆ ಸಿಕ್ಕಿಬಿದ್ದಿದ್ದೆ ರೋಚಕ ಕಹಾನಿ

Published : Jun 24, 2025, 07:16 PM ISTUpdated : Jun 24, 2025, 07:17 PM IST
Woman Arrested for Sending Bomb Threats

ಸಾರಾಂಶ

ಪ್ರೀತಿ ನಿರಾಕರಿಸಿದ ಸಹೋದ್ಯೋಗಿಯ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು 11 ರಾಜ್ಯಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದಾಳೆ.

ಅಹ್ಮದಾಬಾದ್: ಪ್ರೀತಿ ನಿರಾಕರಿಸಿದ ಸಹೋದ್ಯೋಗಿಯ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು ಆತನ ಹೆಸರಿನಲ್ಲಿ ದೇಶದ 11 ರಾಜ್ಯಗಳ ಹಲವು ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ ಸಂದೇಶ ಕಳುಹಿಸಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಮೂಲದ 30ರ ಹರೆಯದ ರೊಬೊಟಿಕ್ ಇಂಜಿನಿಯರ್ ಜೊಶಿಲ್ಡಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಇದಕ್ಕಾಗಿ ಆಕೆ ತನ್ನ ಪ್ರೀತಿ ನಿರಾಕರಿಸಿದ ಯುವಕನ ಹೆಸರಿನಲ್ಲಿ ನಕಲಿ ಮೇಲ್ ಐಡಿಗಳನ್ನು ಸೃಷ್ಟಿಸಿದ್ದಳು. ಈ ಕೃತ್ಯಗಳನ್ನು ನಡೆಸಿ ಪೊಲೀಸರ ಕೈಗೆ ಸಿಗದಂತೆ ಪಾರಾಗಲು ಆಕೆ ತಿಂಗಳ ಕಾಲ ವಿಪಿಎನ್‌ (virtual private network) ಹಾಗೂ ನಕಲಿ ಮೇಲ್ ಐಡಿಗಳನ್ನು ಬಳಸಿದ್ದಳು. ಆದರೆ ಆಕೆ ಮಾಡಿದ ಒಂದೇ ಒಂದು ತಪ್ಪು ಪೊಲೀಸರು ಆಕೆಯ ಮನೆ ಮುಂದೆ ಆಕೆಗಾಗಿ ಕಾಯುವಂತೆ ಮಾಡಿತ್ತು.

ಪ್ರಾಜೆಕ್ಟ್ ವೇಳೆ ಪರಿಚಯವಾಗಿದ್ದ ಯುವಕನ ಮೇಲೆ ಪ್ರೀತಿ

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ರೆನೆ ಜೊಶಿಲ್ಡಾ ತನ್ನ ಇಂಜಿನೀಯರಿಂಗ್ ಪದವಿಯನ್ನು ಚೆನ್ನೈನಲ್ಲಿ ಮಾಡಿದ್ದು, ನಂತರ ರೋಬೋಟಿಲ್ ಕೋರ್ಸ್‌ ಮಾಡಿದ್ದರು. ನಂತರ ಚೆನ್ನೈನ ಡೆಲಾಯ್ಟ್‌ ಸಂಸ್ಥೆಯಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಇದಾದ ನಂತರ ಅವರು ಪ್ರಾಜೆಕ್ಟ್‌ವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಿವಿಜ್ ಪ್ರಭಾಕರನ್ ಎಂಬುವವರನ್ನು ಭೇಟಿಯಾಗಿದ್ದು, ಮೊದಲ ನೋಟದಲ್ಲಿಯೇ ಆಕೆಗೆ ಆತನ ಮೇಲೆ ಪ್ರೀತಿಯಾಗಿದೆ.

ರೆನೆ ಜೊಶಿಲ್ಡ್ ಪ್ರೀತಿ ನಿರಾಕರಿಸಿದ ದಿವಿಜ್

ಆದರೆ ಇದು ಏಕಮುಖ ಪ್ರೀತಿಯಾಗಿತ್ತು. ಇತ್ತ ದಿವಿಜ್‌ ಈಕೆಯ ಭಾವನೆಗಳಿಗೆ ಯಾವುದೇ ಮಣೆ ಹಾಕದೇ ಫೆಬ್ರವರಿಯಲ್ಲಿ ಬೇರೆ ಯುವತಿಯನ್ನು ಮದುವೆಯಾಗಿದ್ದ. ಇದು ರೆನೆ ಜೊಶಿಲ್ಡಾಳನ್ನು ಕೋಪದಿಂದ ಕುದಿಯುವಂತೆ ಮಾಡಿದ್ದು, ಆಕೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಇದಕ್ಕಾಗಿ ಆಕೆ ಹಲವು ನಕಲಿ ಇ ಮೇಲ್ ಐಡಿಗಳನ್ನು ಸಿದ್ಧಪಡಿಸಿದ್ದು, ಈ ಮೇಲ್‌ಗಳ ಮೂಲಕ ಆಕೆ 11 ರಾಜ್ಯಗಳ ಶಾಲೆ, ಕಾಲೇಜು, ಆಸ್ಪತ್ರೆ, ಕ್ರೀಡಾಕೇಂದ್ರಗಳಿಗೆ ಹುಸಿ ಬಾಂಬ್ ಸಂದೇಶಗಳನ್ನು ಕಳುಹಿಸಿದ್ದಾಳೆ.

11 ರಾಜ್ಯಗಳಿಗೆ ಹುಸಿ ಬಾಂಬ್ ಕರೆ

ರೆನೆ ಜೋಶಿಲ್ಡಾ ಅಹಮದಾಬಾದ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 21 ಸ್ಥಳಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಳು. ಇವುಗಳಲ್ಲಿ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣ, ಸರ್ಖೇಜ್‌ನಲ್ಲಿರುವ ಜಿನೀವಾ ಲಿಬರಲ್ ಶಾಲೆ (Geneva Liberal School)ಮತ್ತು ನಾಗರಿಕ ಆಸ್ಪತ್ರೆ ಸೇರಿವೆ ಎಂದು ಜಂಟಿ ಕಮಿಷನರ್ (ಅಪರಾಧ) ಅಹಮದಾಬಾದ್ ಶರದ್ ಸಿಂಘಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರ ಜೊತೆಗೆ ಆಕೆ ಸಾರ್ವಜನಿಕ ಮೆರವಣಿಗೆಗಳು ಮತ್ತು ವಿವಿಐಪಿ ಭೇಟಿಗಳಿಗೆ ಮುಂಚಿತವಾಗಿ 11 ರಾಜ್ಯಗಳಿಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಳು. ಈ ಬೆದರಿಕೆಗಳುಪೊಲೀಸರು ತುರ್ತಾಗಿ ಪಡೆಗಳನ್ನು ಸಜ್ಜುಗೊಳಿಸಲು ಪ್ರೇರೇಪಿಸಿದವು ನಂತರ ಇವು ಸುಳ್ಳು ಬಾಂಬ್ ಬೆದರಿಕೆ ಸಂದೇಶ ಎಂಬುದು ತಿಳಿದು ಬಂದಿತ್ತು. ಆಕೆ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ದೆಹಲಿ, ಕರ್ನಾಟಕ, ಕೇರಳ, ಬಿಹಾರ, ತೆಲಂಗಾಣ, ಪಂಜಾಬ್, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಗೆ ಹೀಗೆ ನಕಲಿ ಮೇಲ್‌ನಿಂದ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ.

ಅಹ್ಮದಾಬಾದ್ ವಿಮಾನ ದುರಂತ ತಾನೇ ಮಾಡಿದ್ದು ಎಂದು ಹೇಳಿಕೊಂಡಿದ್ದ ಜೊಶಿಲ್ಡಾ

ಜೂನ್ 12 ರಂದು ನಡೆದ 274 ಜನರನ್ನು ಬಲಿ ಪಡೆದ ಏರ್ ಇಂಡಿಯಾದ ಅಹಮದಾಬಾದ್-ಲಂಡನ್ ವಿಮಾನ (Ahmedabad-London flight crash) ದುರಂತದವನ್ನು ತಾನೇ ಮಾಡಿದ್ದು ಎನ್ನುವಂತೆ ಆಕೆ ಇಮೇಲ್ ಸಂದೇಶದಲ್ಲಿ ಹೇಳಿಕೊಂಡಿದ್ದಳು. ಅಹ್ಮದಾಬಾದ್‌ನ ಬಿಜೆ ವೈದ್ಯಕೀಯ ಕಾಲೇಜು (BJ Medical College)ಕಟ್ಟಡಕ್ಕೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದ ನಂತರ ಕಾಲೇಜು ಆಡಳಿತಕ್ಕೆ ಇಮೇಲ್ ಕಳುಹಿಸಿದ ಈಕೆ ಈಗ ನಿಮಗೆ ಶಕ್ತಿ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ನಾವು ನಿನ್ನೆ ನಿಮಗೆ ಮೇಲ್ ಕಳುಹಿಸಿದಂತೆ, ನಾವು ನಮ್ಮ ಮಾಜಿ ಸಿಎಂ ವಿಜಯ್ ರೂಪಾನಿ(CM (Vijay Rupani) ಜೊತೆಗೆ ಏರ್ ಇಂಡಿಯಾ ವಿಮಾನವನ್ನು ಅಪಘಾತಕ್ಕೀಡು ಮಾಡಿದ್ದೇವೆ. ವಿಮಾನ ಅಪಘಾತವು ನಕಲಿ ಎಂದು ಪೊಲೀಸರು ಭಾವಿಸಿ ಅದನ್ನು ನಿರ್ಲಕ್ಷಿಸಿದ್ದರು ಎಂದು ನಮಗೆ ತಿಳಿದಿದೆ. ನಮ್ಮ ಪೈಲಟ್‌ಗೆ ಶುಭವಾಗಲಿ. ಈಗ ನಾವು ಆಟವಾಡುತ್ತಿಲ್ಲ ಎಂದು ನಿಮಗೆ ತಿಳಿದಿದೆ ಎಂದು ಆಕೆ ಸಂದೇಶ ಕಳುಹಿಸಿದ್ದಳು. ಆದರೆ ಈ ಮೇಲ್ ಕಳುಹಿಸುವ ಮೊದಲು ಮಾಡಿದ ಎಡವಟ್ಟು ಆಕೆಯನ್ನು ಕಂಬಿ ಹಿಂದೆ ಕೂರುವಂತೆ ಮಾಡಿದೆ.

ಅತೀ ಬುದ್ಧಿವಂತೆ ಆದರೆ ಸಣ್ಣದೊಂದು ತಪ್ಪು ಮಾಡಿ ಸಿಕ್ಕಿಬಿದ್ದ ರೆನೆ

ಅಹಮದಾಬಾದ್ ಪೊಲೀಸರ ಪ್ರಕಾರ, ರೆನೆ ಜೊಶಿಲ್ಡಾ ಅವರ ತಾಂತ್ರಿಕ ಪರಿಣತಿಯಿಂದಾಗಿ(tech expertise) ಬೆದರಿಕೆಗಳನ್ನು ಕಳುಹಿಸುವಾಗ ಅದರ ಮೂಲಗಳನ್ನು ಯಶಸ್ವಿಯಾಗಿ ಆಖೆ ಮರೆ ಮಾಚಿದ್ದಳು. ಇಮೇಲ್ ಐಡಿಗಳನ್ನು ರಚಿಸಲು ಆಕೆ ಬಳಸುವ ಸಂಖ್ಯೆ ವರ್ಚುವಲ್ ಆಗಿರುತ್ತಿತ್ತು. ಆಕೆ ಟಾರ್ ಬ್ರೌಸರ್ (Tor browser) (ಅನಾಮಧೇಯ ಸಂವಹನಕ್ಕಾಗಿ ನೆಟ್‌ವರ್ಕ್) ಮತ್ತು ಡಾರ್ಕ್ ವೆಬ್(Dark Web) ಮೂಲಕ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಳು. ಹೀಗೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ತುಂಬಾ ಬುದ್ಧಿವಂತಿಕೆಯಿಂದ ಕೃತ್ಯ ಎಸಗಿದ್ದ ಆಕೆ ತನ್ನ ನೆಟ್‌ವರ್ಕ್ ವಿಳಾಸವನ್ನು ಪೊಲೀಸರು ಪತ್ತೆ ಮಾಡುವುದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಆಕೆ ಸಣ್ಣದೊಂದು ತಪ್ಪು ಮಾಡಿದ್ದಳು. ಇದರಿಂದ ನಮ್ಮ ಸೈಬರ್ ಅಪರಾಧ ವಿಭಾಗ (cyber crime wing) ಮತ್ತು ಅಪರಾಧ ವಿಭಾಗವು(crime branch) ಆಕೆ ಇದ್ದ ಸ್ಥಳವನ್ನು ಪತ್ತೆ ಮಾಡಿದೆ ಎಂದು ಶರದ್ ಸಿಂಘಾಲ್ ಹೇಳಿದ್ದಾರೆ.

ಐಪಿ ವಿಳಾಸ ಪತ್ತೆ ಮಾಡಿದ್ದು ಹೇಗೆ?

ಅಹಮದಾಬಾದ್ ಮಿರರ್ ವರದಿಯ ಪ್ರಕಾರ, ರೆನೆ ಜೋಶಿಲ್ಡಾ ಆರು ತಿಂಗಳ ಹಿಂದೆ ಒಂದು ತಪ್ಪು ಮಾಡಿದ್ದಳು. ಆ ಒಂದು ತಪ್ಪು ಹೆಜ್ಜೆ ತಪ್ಪು ಮಾಡಿಯೂ ಎಸ್ಕೇಪ್ ಆಗುತ್ತಿದ್ದ ಆಕೆಯನ್ನು ಕಂಬಿ ಹಿಂದೆ ಕೂರುವಂತೆ ಮಾಡಿದೆ. ಆಕೆ ತಾನು ಕೃತ್ಯ ಬಳಸಲು ಬಳಕೆ ಮಾಡುತ್ತಿದ್ದ ಸಾಧನದಿಂದಲೇ ಹಿಂದೊಮ್ಮೆ ಆಕೆ ತನ್ನ ಅಸಲಿ ಇಮೇಲ್‌ ಖಾತೆಯಿಂದ ಲಾಗಿನ್ ಆಗಿದ್ದಳು. ಇದು ಆಕೆಯ ಐಪಿ ವಿಳಾಸವನ್ನು(IP address) ಪತ್ತೆ ಮಾಡಲು ಪೊಲೀಸರಿಗೆ ಸಹಾಯ ಮಾಡಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!