ಯೋಗ ಕಲಿಸುತ್ತೇನೆ ಎಂದು ಮಂಚಕ್ಕೆ ಕರೆದ! ಬಯಲಾಯ್ತು ಕಪಟ ಯೋಗ ಗುರುವಿನ ಕಾಮಪುರಾಣ!

By Suvarna News  |  First Published Sep 4, 2024, 3:48 PM IST

ಚಿಕ್ಕಮಗಳೂರಿನ ಕಪಟ ಯೋಗ ಗುರುವಿನ ಮುಖವಾಡ ಕಳಚಿಬಿದ್ದಿದೆ. ವಿದೇಶಿ ವೈದ್ಯೆಯೊಬ್ಬರ ನೀಡಿದ ದೂರಿನ ಮೇಲೆ ಈ ಯೋಗಗುರು ಪೊಲೀಸರ ಅತಿಥಿಯಾಗಿದ್ದಾನೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಅವಳು ದೂರದ ಅಮೇರಿಕಾದವಳು. ನಮ್ಮ ದೇಶದ ಯೋಗಕ್ಕೆ ಆಕರ್ಷಿತಳಾಗಿ ಅದನ್ನ ಕಲೆಯಲು ಭಾರತಕ್ಕೆ ಬಂದಿದ್ಲು. ಇಂಟರ್ನೆಟ್​​​ನಲ್ಲಿ ಸರ್ಚ್‌ ಮಾಡಿ ಅದೊಂದು ಯೋಗ ಶಿಬಿರಕ್ಕೂ ಸೇರಿಕೊಂಡಳು. ಆದ್ರೆ ಅಲ್ಲಿದ್ದ ಯೋಗ ಗುರು ಮಾಡಿದ್ದೇ ಬೇರೆ. ಯೋಗದ ಹೆಸರಲ್ಲಿ ಅವಳನ್ನ ಇನ್ನಿಲ್ಲದಂತೆ ದೋಚಿಬಿಟ್ಟ. ಲಕ್ಷ ಲಕ್ಷ ಫೀಸ್​​​ ಪಡೆದು ನಂತರ ಅವಳ ಮಾನಭಂಗಕ್ಕೂ ನಿಂತುಬಿಟ್ಟ. ಇವತ್ತು ತಾನು ಮಾಡಿದ ತಪ್ಪಿಗೆ ಕಂಬಿ ಹಿಂದೆ ಹೋಗಿದ್ದಾನೆ. ಹೀಗೆ ವಿದೇಶಿ ಮಹಿಳೆಯನ್ನ ವಂಚಿಸಿ, ಲೈಂಗಿಕ ದೌರ್ಜನ್ಯವೆಸಗಿದ ಮನೆಹಾಳ್​​​​ ಯೋಗ ಗುರುವಿನ ಕಥೆಯೇ ನಾವಿಂದು ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

ವಿದೇಶಿಗರು ಭಾರತೀಯ ಸಂಸ್ಕೃತಿಗೆ ಮಾರು ಹೋಗೋದು ಹೊಸತೇನೂ ಅಲ್ಲ. ಇಲ್ಲಿನ ಮಣ್ಣೇ ಹಾಗೆ. ಯಂಥವರನ್ನಾದ್ರೂ ಬಹುಬೇಗ ಆಕರ್ಷಿಸಿಬಿಡುತ್ತೆ. ಹಾಗೆ ಯೋಗ ಕಲಿಯಬೇಕು ಅಂತ ನಿರ್ಧರಿಸಿದ ಅಮೇರಿಕಾ ಮೂಲದ ವೈದ್ಯೆಗೆ ತನ್ನ ಭಾರತದ ಗೆಳತಿ ಒಳ್ಳೆಯ ಗುರುವಿಗಾಗಿ ಹುಡುಕಾಡಿದ್ಲು. ಇನ್ನೂ ಈಕೆ ಮೂಲತಹ ಅಮೇರಿಕಾದ ಕ್ಯಾಲಿಫಾರ್ನೀಯದವಳು. ಆದ್ರೆ ಯೋಗವನ್ನ ಕಲಿಯಲು ಭಾರತಕ್ಕೆ ಬರಲು ರೆಡಿಯಾದಳು.

Tap to resize

Latest Videos

undefined

ಯೋಗ ಗುರುವಿಗಾಗಿ ಹುಡುಕುತ್ತಿದ್ದ ಈ ವೈದ್ಯೆಗೆ ತನ್ನ ಭಾರತೀಯ ಮೂಲದ ಗೆಳತಿ ಮೂಲಕ ಒಬ್ಬ ಗುರು ಸಿಕ್ಕೇಬಿಡ್ತಾನೆ. ಆತನ ಯೋಗಾಶ್ರಮದ ಲಿಂಕ್​ ಕಳಿಸಿ ಇಲ್ಲೇ ನೀನು ಯೋಗ ಕಲಿಯಬಹುದು ಅಂತ ಹೇಳ್ತಾಳೆ. ಆಗ ವೈದ್ಯೆಗೆ ಸಿಕ್ಕಿದ್ದೇ ಈ ಕೇವಲ ಫೌಂಡೇಷನ್. ಹೆಸರು ಮಾತ್ರ ಕೇವಲ. ಆದ್ರೆ ನೋಡೋದಕ್ಕೆ ಇದೊಂದು ವಿಶಾಲವಾದ ರೆಸಾರ್ಟ್​ ಇದ್ದಾಗೆ ಇದೆ. ಇದೇ ಕೇವಲ ಫೌಂಡೇಷನ್​ ಬಗ್ಗೆ ವೈದ್ಯೆಗೆ ಮಾಹಿತಿ ಸಿಗುತ್ತೆ. ಯೋಗ ಕೇಂದ್ರದ ಬಗ್ಗೆ ಮಾಹಿತಿ ಪಡೆದು, ಸ್ವಲ್ಪ ಹಣ ನೀಡಿ ಆನ್‍ಲೈನ್ ಮೂಲಕ ಯೋಗಾಭ್ಯಾಸಕ್ಕೆ ಸೇರಿಕೊಳ್ತಾಳೆ. 

ಆ್ಯಕ್ಸಿಡೆಂಟ್​​ನಲ್ಲಿ ಸತ್ತ ಗಂಡನನ್ನ ಮಣ್ಣು ಮಾಡಿದಳು! ಆದರೇ..? ಸಿನಿಮಾವನ್ನೇ ಮೀರಿಸುತ್ತೆ ಈ ಮರ್ಡರ್ ಸ್ಟೋರಿ!

ಯೋಗಕ್ಕೆ ಹೆಚ್ಚು ಆಕರ್ಷಿತರಾಗುತ್ತಿರುವ ವಿದೇಶಿಗರು ಹಿಂದೆ ಮುಂದೆ ನೋಡದೇ ಗುರುಗಳು ಅಂತ ಅವರು ಕೇಳಿದಷ್ಟು ಹಣ ಕೊಟ್ಟು. ಹೇಳಿದಂತೆ ಕೇಳಿಬಿಡ್ತಾರೆ. ಈ ರೀತಿ ಮಾಡಿರೋದ್ರಲ್ಲಿ ಈ ವೈದ್ಯೆ ಮೊದಲಿನವಳೇನೂ ಅಲ್ಲ. ಇನ್ನು ಈ ಯೋಗ ಕೇಂದ್ರದ ಗುರು ಪ್ರದೀಪ್​ ಉಲ್ಲಾಳ್. ಈ ಯೋಗ ಕೇಂದ್ರ ಇರುವುದು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ.  ಈ ಪ್ರದೀಪ್ ಮೂಲತಃ ಬಂಟ್ವಾಳ ಮೂಲದವನು.  ಇನ್ನೂ ಈ ಯೋಗ ಕೇಂದ್ರಕ್ಕೆ ಹೆಚ್ಚು ಜನ ಬರೋದೇ ವಿದೇಶಿ ಶಿಷ್ಯರು

ಮೊದಲಿಗೆ ಆನ್‌ಲೈನ್ ಯೋಗ ತರಬೇತಿ ಪಡೆದ ವೈದ್ಯೆಗೆ ಕೆಲವೊಂದು ಯೋಗ ಕಲಿಯಲು ಭಾರತಕ್ಕೆ ಬರಬೇಕು ಎಂದು ಪ್ರದೀಪ್ ಆಹ್ವಾನ ನೀಡುತ್ತಾನೆ. ಆತನ ಆಹ್ವಾನದ ಮೇರೆಗೆ 2020ರಲ್ಲಿ ಭಾರತಕ್ಕೆ ಬಂದ ವೈದ್ಯೆ, ಯೋಗ ಕಲಿಯುತ್ತಾಳೆ. ಆದರೆ ಇದಾಗಿ 4 ವರ್ಷಗಳ ಬಳಿಕ ಯೋಗ ಕಲಿಸಿದ ಗುರುವಿನ ಮೇಲೆ ವೈದ್ಯೆ ಅತ್ಯಾಚಾರ ಮಾಡಿದ್ದಾಗಿ ಪೊಲೀಸರಿಗೆ ದೂರು ನೀಡುತ್ತಾಳೆ. ಪ್ರದೀಪ್ ಉಲ್ಲಾಳ್ ಮೇಲೆ ದೂರು ಬರುತ್ತಿದ್ದಂತೆಯೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಾರೆ.

ಯೋಗ ಕಲಿಯಲು ಬಂದ ವೈದ್ಯೆಯ ಜೊತೆ ಆತ ಕ್ಲೋಸ್​ ಆಗಿದ್ದ. ಕೇವಲ ಯೋಗ ಕಲೆಯೋದಷ್ಟೇ ಅಲ್ಲದೇ ಪ್ರೇಮ ಪಾಟವನ್ನ ಮಾಡೋದಕ್ಕೆ ಶುರು ಮಾಡಿದ್ದ. ಆಕೆಯ ಮೇಲೆ  ಲೈಂಗಿಕ ದೌರ್ಜನ್ಯ ಕೂಡ ಮಾಡಿದ್ದನಂತೆ. ಇನ್ನೂ ಆತನನ್ನ ಸಂಪೂರ್ಣವಾಗಿ ನಂಬಿದ ಮಹಿಳೆ ಆತ ಕೇಳಿದಾಗಲ್ಲೆಲ್ಲಾ ದುಡ್ಡು ಕೂಡ ಕೊಟ್ಟಿದ್ಲು. ಆದ್ರೆ ಯಾವಾಗ ಈತ ಯೋಗ ಕಲೆಯಲು ಬರೋ ಎಲ್ಲರ ಬಳಿಯೂ ಅಸಭ್ಯವಾಗಿ ವರ್ತಿಸುತ್ತಾನೆ ಅನ್ನೋದು ಗೊತ್ತಾಯ್ತೋ ಸೀದಾ ಪೊಲೀಸ್​​ ಠಾಣೆಗೆ ಹೋಗಿ ಕೂತುಬಿಟ್ಟಳು.

ತುಮಕೂರು: ತಂದೆಯಿಂದಲೇ ನಿರಂತರ ಅತ್ಯಾಚಾರ, ಗರ್ಭ ಧರಿಸಿದ 14 ವರ್ಷದ ಮಗಳು..!

ಇನ್ನೂ ಕೇವಲ ಲೈಂಗಿಕ ದೌರ್ಜನ್ಯವಷ್ಟೇ ಅಲ್ಲ. ಈಕೆಯ ಬಳಿ ಈ ಪ್ರದೀಪ ಲಕ್ಷ ಲಕ್ಷ ಹಣ ಪೀಕಿದ್ದಾನಂತೆ. ಆ ಯೋಗಕ್ಕೆ ಇಷ್ಟು ಫೀಸ್​​. ಈ ಯೋಗಕ್ಕೆ ಅಷ್ಟು ಫೀಸ್​​ ಅಂತ ಕಥೆ ಕಟ್ಟಿ ನಾಲಕ್ಕು ವರ್ಷದಲ್ಲಿ ಆತ 20 ಲಕ್ಷದವರೆಗೆ ಹಣ ಪಡೆದಿದ್ದಾನಂತೆ.

ನಮ್ಮ ದೇಶದಲ್ಲಿ ಎಂಥೆಂಥ ಗುರುಗಳಿದ್ದಾರೆ. ಯೋಗ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ ದೇಶ ವಿದೇಶಗಳಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಆದ್ರೆ ಇಂಥವರಿಂದ ಉಳಿದ ಗುರುಗಳನ್ನೂ ಅನುಮಾನಿಸುವ ಹಾಗಿದೆ. ಇಂತವರಿಗೆ ತಕ್ಕ ಶಿಕ್ಷೆಯಾಗಲೆಬೇಕು. ಪಾಠ ಮಾಡ್ತೀನಿ ಅಂತ ಮಾಡಬಾರದನ್ನ ಮಾಡುವ ಈ ಮನೆಹಾಳರಿಗೆ ಪಾಠ ಕಲಿಸಬೇಕು. ಆಗ ಮಾತ್ರ ಭಾರತಕ್ಕೆ ಬರುವ ವಿದೇಶಿಗರಿಗೆ ಇಲ್ಲಿನ ಗುರುಗಳ ಮೇಲೆ ನಂಬಿಕೆ ಬರುತ್ತೆ.

click me!