ಬೀದರ್: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷ!

By Gowthami K  |  First Published Jul 1, 2024, 1:15 PM IST

ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷವಾದ ಆಶ್ಚರ್ಯಕರ ಘಟನೆ ಬೀದರ್‌ನಲ್ಲಿ ನಡೆದಿದೆ.


ಬೀದರ್ (ಜು.1): ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷವಾದ ಆಶ್ಚರ್ಯಕರ ಘಟನೆ ಬೀದರ್‌ನಲ್ಲಿ ನಡೆದಿದೆ. ಅನಾರೋಗ್ಯದಿಂದ ಮೃತಪಟ್ಟಿದ್ದ ಮಗುವನ್ನ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ ಮರುದಿನ  ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ ಮರದ ಮೇಲೆ ಪತ್ತೆಯಾಗಿತ್ತು. ಮಗುವನ್ನ ಹೊರ ತೆಗೆದು ಕಪ್ಪು ಬಟ್ಟೆಯಲ್ಲಿ ಮರಕ್ಕೆ ಕಟ್ಟಿ ಜೋಳಿಗೆಯಲ್ಲಿ ನೇತು ಹಾಕಲಾಗಿತ್ತು. ಮಾಟ ಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. 

ಪರಪ್ಪನ ಅಗ್ರಹಾರದಲ್ಲಿ ನಿಯಮ ಉಲ್ಲಂಘನೆ, ದರ್ಶನ್ ನೋಡಲು ಬಂದ ತಾಯಿ, ತಮ್ಮ ಕುಟುಂಬಕ್ಕೆ ರಾಜಾತಿಥ್ಯ!

Tap to resize

Latest Videos

undefined

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ  ಗ್ರಾಮದ ಅಂಬಯ್ಯ ಸ್ವಾಮಿ ಎಂಬವರ ಒಂದೂವರೆ ವರ್ಷದ ಮಗು ಮೃತಪಟ್ಟಿತ್ತು. ಹೀಗಾಗಿ ಮಗುವನ್ನು ದಫನ ಮಾಡಲಾಗಿತ್ತು.

 ದೂರು ಕೊಡಲು ಬಂದ ಪತ್ನಿಗೆ ಹಾಸನ ಎಸ್‌ಪಿ ಕಛೇರಿ ಎದುರೇ ಚಾಕು ಹಾಕಿ ಕೊಂದ ಪೊಲೀಸ್ ಕಾನ್ಸ್ ಟೇಬಲ್!

ದಫನ ಮಾಡಿದ ಮಗುವನ್ನು ಮತ್ತೆ ತೆಗೆದು ಪ್ರಯೋಗ ಬಳಸಿ ಈ ರೀತಿ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಊಹನೆ. ಸ್ಯ ಮರಕ್ಕೆ ಕಟ್ಟಿದ್ದ ಮಗುವಿನ ಮೃತದೇಹವನ್ನು ಮತ್ತೆ ಅದೇ ಸ್ಥಳದಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರ ಮಾಡಿದ್ದಾರೆ.

click me!