ಅನ್‌ನ್ಯಾಚುರಲ್ ಡೆತ್ ಎಂದು ಮುಚ್ಚಲಾಗಿದ್ದ ಕೇಸ್ | ಭರ್ತಿ ಒಂದು ವರ್ಷದ ನಂತ್ರ ಸಿಕ್ಕಿ ಬಿದ್ದ ಕೊಲೆಗಾರರು..! ನಾನಿಲ್ಲದಿದ್ದಾಗ ಪತ್ನಿ ಹತ್ರ ಮಾತಾಡ್ಬೇಡ ಎಂದು ಶುರುವಾಗಿತ್ತು ಗೆಳೆಯರ ಜಗಳ
ಬೆಂಗಳೂರು(ಫೆ.18): ವರ್ಷದ ಹಿಂದೆ ಅನ್‌ನ್ಯಾಚುರಲ್ ಡೆತ್ ಎಂದು ಕ್ಲೋಸ್ ಆಗಿದ್ದ ಕೇಸ್ ಮತ್ತೆ ರೀ ಓಪನ್ ಆಗಿದೆ. ಆಯತಪ್ಪಿ ಬಿದ್ದು ಸತ್ತಿರಬಹುದು ಎಂದು ಕೇಸ್ ಕ್ಲೋಸ್ ಆಗಿತ್ತು.
ಒಂದು ವರ್ಷದ ಬಳಿಕ ಬ್ಯಾಡರಹಳ್ಳಿ ಪೊಲೀಸರು ಈ ಕೇಸ್‌ಗೆ ಮರು ಜೀವ ನೀಡಿದದ್ದಾರೆ. ಎಣ್ಣೆ ಪಾರ್ಟಿಯಲ್ಲಿ ರಮ್ ಬಾಟಲ್ ನಿಂದ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ.
ಪ್ರೇಯಸಿಗೆ ಸಿಲಿಂಡರ್‌ನಿಂದ ಹೊಡೆದು ಪ್ರೇಮಿ ಆತ್ಮಹತ್ಯೆ.
ಕೊಲೆ ಮಾಡಿ ಆರೋಪಿಗಳು ಪೊಲೀಸರೊಂದಿಗೇ ಓಡಾಡಿಕೊಂಡಿದ್ದರು. ಅನುಮಾನದಿಂದ ಆರಂಭವಾದ ಜಗಳದಲ್ಲಿ ಜೊತೆಗಿದ್ದ ಸ್ನೇಹಿತನನ್ನೆ ಕೊಲೆ ಮಾಡಿದ್ದರು.
ಕಳೆದ ವರ್ಷ ಇದೇ ದಿನ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಕೊಲೆ ನಡೆದಿತ್ತು. ಮೃತ ವೆಂಕಟೇಶ ನ ಕುಟುಂಬಸ್ಥರಿಗೂ ಸಾವಿನ ಬಗ್ಗೆ ಯಾವುದೇ ಅನುಮಾನ ಬಂದಿರಲಿಲ್ಲ.
ಹಿಂದು ಅಪ್ರಾಪ್ತೆಯನ್ನು ಅಪಹರಿಸಿದ ಪಾಕ್ ಪೊಲೀಸ್: ಮತಾಂತರಕ್ಕೆ ಕಿರುಕುಳ
ಡಾಕ್ಟರ್ ಕೊಟ್ಟ ಪೋಸ್ಟ್ ಮಾರ್ಟಂ ರಿಪೋರ್ಟ್ ಮೇಲೆ ಬ್ಯಾಡರಹಳ್ಳಿ ಪೊಲೀಸರು ಕೇಸ್ ರೀಓಪನ್ ಮಾಡಿದ್ದಾರೆ. ಮೃತ ವೆಂಕಟೇಶ, ಆರೋಪಿ ಹರೀಶ್, ಹೊನ್ನಪ್ಪ ಮತ್ತಿಬ್ಬರು ಸ್ನೇಹಿತರು ಎಣ್ಣೆಪಾರ್ಟಿ ಮಾಡಿದ್ದರು.
ಪಾರ್ಟಿಯಲ್ಲಿ ಮೃತ ವೆಂಕಟೇಶ ಮತ್ತು ಆರೋಪಿ ಹರೀಶ್ ಮಧ್ಯೆ ಜಗಳ ಆರಂಭವಾಗಿತ್ತು. ನನ್ನ ಹೆಂಡತಿ ಜೊತೆ ಮಾತನಾಡಬೇಡ ಎಂದು ವೆಂಕಟೇಶ್ ಜೊತೆ ಹರೀಶ್ ಜಗಳ ಮಾಡಿದ್ದ.
ಅನೈತಿಕ ಸಂಬಂಧ ಶಂಕೆ: ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ
ಮನೆ ಬಳಿ ನಾನಿಲ್ಲದಾಗ ಬಂದು ಹೆಂಡತಿ ಜೊತೆ ಮಾತನಾಡ ಬೇಡ ಎಂದು ಜಗಳ ಮಾಡಿದ್ದ. ಇದೇ ವಿಚಾರವಾಗಿ ರಮ್ ಬಾಟಲ್‌ನಿಂದ ವೆಂಕಟೇಶ ತಲೆಗೆ ಹಲ್ಲೆ ಮಾಡಲಾಗಿತ್ತು.
ಹಲ್ಲೆ ನಂತರ ಇಡೀ ರಾತ್ರಿ ಪ್ರಜ್ಞೆ ತಪ್ಪಿದ್ದ ವೆಂಕಟೇಶ ಸಾವನ್ನಪ್ಪಿದ್ದ. ಕುಡಿಯುವಾಗ ಹಿಂಬದಿಗೆ ಬಿದ್ದು ಪ್ರಜ್ಞೆ ತಪ್ಪಿದ್ದಾಗಿ ಆರೋಪಿ ಹರೀಶ್ ಹೇಳಿಕೆ ನೀಡಿದ್ದ.
ಮೈಸೂರು: ಬಿಕ್ಷುಕಿ ಅತ್ಯಾಚಾರ ಮಾಡಿ ಕೊಂದ ದುಷ್ಟರು ಅಂದರ್
ಸದ್ಯ ಪೋಸ್ಟ್ ಮಾರ್ಟನ್ ರಿಪೋರ್ಟ್ ನಲ್ಲಿ ಆರೋಪಿಯ ಅಸಲಿಯತ್ತು ಬಯಲಾಗಿದೆ. ಕೊಲೆಯಾಗಿ ಸರಿಯಾಗಿ ಒಂದು ವರ್ಷಕ್ಕೆ ಆರೋಪಿಯನ್ನು ಬಂಧಿಸಲಾಗಿದೆ.