ಬಾಗಲಕೋಟೆ: ಕಾಯಿಲೆಯಿಂದ ಜಿಗುಪ್ಸೆ, ವೃದ್ಧ ದಂಪತಿ ಆತ್ಮಹತ್ಯೆ

By Kannadaprabha News  |  First Published Sep 9, 2023, 9:00 PM IST

ರಾತ್ರಿ 10ರಿಂದ 11.30ರ ಸಮಯದಲ್ಲಿ ಮಡ್ಡಿ ಲಕ್ಷ್ಮಿದೇವಿ ಗುಡಿ ಹತ್ತಿರದ ಬಾವಿಯಲ್ಲಿ ತಮ್ಮೆರಡೂ ಕೈಗಳನ್ನು ಕಟ್ಟಿಕೊಂಡು ಜಿಗಿದು ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ 


ಮಹಾಲಿಂಗಪುರ(ಸೆ.09): ತಮಗಿರುವ ಕಾಯಿಲೆಯಿಂದ ಜಿಗುಪ್ಸೆಗೊಂಡು ವೃದ್ಧ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀರಾಜಿ ಕಲಾಲ (72) ಮತ್ತು ಈತನ ಪತ್ನಿ ಸರಸ್ವತಿ ಕಲಾಲ (65) ತಮ್ಮ ಕೈಗಳಿಗೆ ಹಗ್ಗ ಕಟ್ಟಿಕೊಂಡು ಬಾವಿ ಹಾರಿ ಆತ್ಮಹತ್ಯೆ ಮಾಡಿಕೊಂಡವರು. 

ಈ ಕುರಿತ ಪಟ್ಟಣ ಠಾಣೆಯಲ್ಲಿ ಇವರ ಪುತ್ರ ವಿನೋದ ಕಲಾಲ ದೂರು ನೀಡಿದ್ದಾರೆ. 

Tap to resize

Latest Videos

undefined

ಕಲಬುರಗಿ: ಕೆಲಸದಿಂದ ತೆಗೆದು ಹಾಕಲು ಯತ್ನ, ಆತ್ಮಹತ್ಯೆಗೆ ದಿವ್ಯಾಂಗ ವ್ಯಕ್ತಿ ಪ್ರಯತ್ನ

ಬುಧವಾರ ರಾತ್ರಿ 10ರಿಂದ 11.30ರ ಸಮಯದಲ್ಲಿ ಮಡ್ಡಿ ಲಕ್ಷ್ಮಿದೇವಿ ಗುಡಿ ಹತ್ತಿರದ ಬಾವಿಯಲ್ಲಿ ತಮ್ಮೆರಡೂ ಕೈಗಳನ್ನು ಕಟ್ಟಿಕೊಂಡು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಮಹಾಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!