
ಭುವನೇಶ್ವರ(ಅ. 23) ಮದ್ಯದ (alcohol)ಅಮಲು ಏರಿಸಿಕೊಂಡ ಗುಂಪೊಂದು ಮಹಿಳೆಯರನ್ನು(molested) ಚುಡಾಯಿಸಿದೆ. ಈ ಸುದ್ದಿ ಗ್ರಾಮದ ಮುಖಂಡರಿಗೆ ಗೊತ್ತಾಗಿದೆ. ಇದಾದ ಮೇಲೆ ಗ್ರಾಮ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಒಡಿಶಾ (Bhubaneswar) ನುವಾಪಾಡಾ ಜಿಲ್ಲೆಯ ಸದರ್ ಬ್ಲಾಕ್‌ನಲ್ಲಿರುವ ಧರಂಬಂಧಾ ಗ್ರಾಮದಲ್ಲಿ ಮದ್ಯಕ್ಕೆ ಗ್ರಾಮಸ್ಥರೇ ನಿಷೇಧ ಹೇರಿದ್ದಾರೆ. ಹಳ್ಳಿಯ ಕಾಲುವೆಯೊಂದರಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯರನ್ನು ಮದ್ಯ ಏರಿಸಿಕೊಂಡ ಪುರುಷರ ತಂಡ ಚುಡಾಯಿಸಿತ್ತು.
ತನ್ನ ಹುಡುಕುವ ಕಾರ್ಯಾಚರಣೆಯಲ್ಲಿ ತಾನೇ ತೊಡಗಿಕೊಂಡ ಕುಡುಕ
ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತ ದೂರು ದಾಖಲಾಗಿಲ್ಲವಾದರೂ, ಹಳ್ಳಿಯ ಯುವಕರಿಗೆ ಇನ್ನು ಮುಂದೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಮದ್ಯವನ್ನೇ ನಿಷೇಧಿಸಲಾಗಿದೆ. ಯುವಕರೇ ಮುಂದಾಗಿ ಮದ್ಯ ನಿಷೇಧ ಮಾಡಿರುವುದು ವಿಶೇಷ.
ಇಷ್ಟೇ ಅಲ್ಲದೆ ಮದ್ಯಕ್ಕೆ ದಾಸರಾಗಿರುವವರನ್ನು ಸರಿದಾರಿಗೆ ತರಲು ಧರಂಬಂಧದಲ್ಲಿ ಮದ್ಯ ವ್ಯಸನದಿಂದ ಹೊರಬರುವ ಕೇಂದ್ರ ಆರಂಭಿಸಲಾಗಿದೆ.ಗ್ರಾಮಸ್ಥೆ ಪದ್ಮಾ ದೇವಾಂಗನ್ ಮಾತನಾಡಿ, ‘ಕಾಲುವೆ ಬಳಿ ನಡೆದ ಕಿರುಕುಳದ ಸಂದರ್ಭದಲ್ಲಿ ನಾನು ಅಲ್ಲಿಯೇ ಇದ್ದೆ, ಅಲ್ಲಿ ಮದ್ಯ ಮಾರಾಟ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದೇವು. ಆದರೆ ಆಗ ಯಾರೂ ಒಪ್ಪಿಕೊಂಡಿರಲಿಲ್ಲ. ಈ ಘಟನೆಯ ನಂತರ ಮತ್ತೆ ಮಹಿಳೆಯರು ದನಿ ಎತ್ತಿದರು ಎಂದು ತಿಳಿಸಿದ್ದಾರೆ.
5,100 ರೂ. ದಂಡ; ಯಾರಾದರೂ ಮದ್ಯ ಮಾರಾಟ ಮಾಡಿದರೆ 51, 000 ರೂ. ಸೇವನೆ ಕಂಡುಬಂದರೆ 5,100 ರೂ. ದಂಡ ಪಾವತಿಸಬೇಕಾಗುತ್ತದೆ ಎಂಬ ಕಾನೂನನ್ನು ಗ್ರಾಮಸ್ಥರೆ ಜಾರಿ ಮಾಡಿಕೊಂಡಿದ್ದಾರೆ. ಜತೆಗೆ ಚಪ್ಪಲಿಗಳ ಹಾರ ಹಾಕಿ ಅಂತವರನ್ನು ಹಳ್ಳಿ ಸುತ್ತಲೂ ಮೆರವಣಿಗೆ ಮಾಡಲಾಗುತ್ತದೆ.
ಸರ್ಕಾರದ ಬೊಕ್ಕಸಕ್ಕೆ ಅತಿ ದೊಡ್ಡ ಆದಾಯ ತಂದುಕೊಡುವುದು ಅಬಕಾರಿ ಇಲಾಖೆ ಎನ್ನುವುದು ಗೊತ್ತೇ ಇದೆ. ಸರ್ಕಾರಗಳು ಇದೇ ಕಾರಣಕ್ಕೆ ಸಂಪೂರ್ಣ ಮದ್ಯ ನಿಷೇಧಕ್ಕೆ ಮುಂದೆ ಬರುವುದಿಲ್ಲ. ಈ ರೀತಿ ಗ್ರಾಮಸ್ಥರೇ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಮದ್ಯ ಮುಕ್ತ ಸಮಾಜ ನಿರ್ಮಾಣ ಅಲ್ಲಿಂದಲೇ ಆರಂಭವಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ