ಕನಕಗಿರಿಯಲ್ಲಿ ಮತ್ತೆ ಅಶ್ಲೀಲ ಗೋಡೆ ಬರಹ; ಪೊಲೀಸ್ ಇಲಾಖೆಗೆ ತಲೆನೋವು

Published : Jul 07, 2023, 11:18 AM IST
ಕನಕಗಿರಿಯಲ್ಲಿ ಮತ್ತೆ ಅಶ್ಲೀಲ ಗೋಡೆ ಬರಹ; ಪೊಲೀಸ್ ಇಲಾಖೆಗೆ ತಲೆನೋವು

ಸಾರಾಂಶ

ಕಳೆದ ವರ್ಷದ ಹಿಂದೆ ಆರಂಭವಾದ ಅಶ್ಲೀಲ ಬರವಣಿಗೆ ಈಗಲೂ ಮುಂದುವರೆದಿದ್ದು,ಈ ಪ್ರಕರಣ ಪೊಲೀಸ್‌ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಕನಕಗಿರಿ (ಜು.7) : ಕಳೆದ ವರ್ಷದ ಹಿಂದೆ ಆರಂಭವಾದ ಅಶ್ಲೀಲ ಬರವಣಿಗೆ ಈಗಲೂ ಮುಂದುವರೆದಿದ್ದು,ಈ ಪ್ರಕರಣ ಪೊಲೀಸ್‌ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ವರ್ಷದ ಹಿಂದೆ ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆ, ಚೆನ್ನಶ್ರೀ ರುದ್ರ ಪಿಯು ಕಾಲೇಜು,ಈಚೆಗೆ ಶಿವಯೋಗಿ ಚನ್ನಮಲ್ಲ ಹಾಗೂ ಎಪಿಎಂಸಿ ವ್ಯಾಪ್ತಿಯ ಸಮುದಾಯ ಭವನದ ಕಾಂಪೌಂಡ್‌ ಗೋಡೆಗೆ ಕೆಲ ವಿದ್ಯಾರ್ಥಿನಿಯರನ್ನು ಟಾರ್ಗೆಟ್‌ ಮಾಡಿರುವ ಆರೋಪಿತರು, ಬಾಲಕಿಯರನ್ನು ಅವಾಚ್ಯವಾಗಿ ನಿಂದಿಸಿ,ಅಶ್ಲೀಲ ಚಿತ್ರವನ್ನು ಬಿಡಿಸಿ ಅವಮಾನಿಸಿದ್ದಲ್ಲದೇ ಧಮ್ಕಿಯೂ ಹಾಕಿದ್ದಾರೆ.

 

Koppal News: ವಿದ್ಯಾರ್ಥಿನಿ ಹೆಸರು ಶಾಲಾ ಗೋಡೆಗೆ ಅಶ್ಲೀಲವಾಗಿ ಬರೆದು ವಿಕೃತಿ

ಅಶ್ಲೀಲ ಬರಹ, ಚಿತ್ರವನ್ನು ಶಾಲೆ-ಕಾಲೇಜಿಗೆ ಹೋಗುವ ರಸ್ತೆಯ ಕಾಂಪೌಂಡ್‌ಗೆ ಬರೆದಿದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮುಜುಗರ ಉಂಟು ಮಾಡಿತ್ತು.ಸದರಿ ಬರಹವನ್ನು ಪಾಲಕರು ಬಣ್ಣದಿಂದ ಅಳಿಸಿದ್ದರು.ಇದೀಗ ಮತ್ತೆ ಅಶ್ಲೀಲ ಬರವಣಿಗೆ ಮುಂದುವರೆದಿದ್ದು,ಪಟ್ಟಣದ ಅಗಸಿ ಹನುಮಪ್ಪ ದೇವಸ್ಥಾನ ಮುಂದುಗಡೆ ಇರುವ ಮಸೀದಿಯ ಪಕ್ಕದ ಗೋಡೆಗೆ ಜು. 5ರ ರಾತ್ರಿ ಸಮಯದಲ್ಲಿ ಅಶ್ಲೀಲ,ಅವಾಚ್ಯವಾಗಿ ಬರೆದಿದ್ದು, ತಕ್ಷಣ ಪಾಲಕರು ಇದಕ್ಕೆ ಸುಣ್ಣ ಬಳಿದಿದ್ದಾರೆ.ಹೀಗೆ ಎಲ್ಲೆಲ್ಲಿ ಅಶ್ಲೀಲ ಬರಹ ಬರೆಯಲಾಗಿರುತ್ತದೆ ಅಲ್ಲಲ್ಲಿ ಸುಣ್ಣದಿಂದ ಅಳುಕಿಸುವ ತಮ್ಮ ಮಾನ ಉಳಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಸದರಿ ಕೃತ್ಯದ ಕುರಿತು ಪೊಲೀಸರಿಗಷ್ಟೇ ಅಲ್ಲ ಬಾಲಕಿಯರ ಪೋಷಕರಿಗೂ ಚಿಂತೆಯಾಗಿದೆ.ಜು.5ರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ ಪಾಲಕರು ಕೊಪ್ಪಳಕ್ಕೆ ತೆರಳಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ,ಪ್ರಕರಣದ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಗಳು ಬರುವ ಮೊದಲೇ ಕುಡಿದು ಮಲಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಅಮಾನತ್ತು

ಕನಕಗಿರಿಯಲ್ಲಿ ಅಶ್ಲೀಲ ಬರಹ ಮತ್ತೇ ಮುಂದುವರೆದಿರುವುದು ಗಮನಕ್ಕಿದ್ದು,ಈಗಾಗಲೇ ನಿಯೋಜನೆಗೊಂಡಿರುವ ನಮ್ಮ ತಂಡವು ಪ್ರಕರಣದ ಕುರಿತಂತೆ ತನಿಖೆ ನಡೆಸುತ್ತಿದೆ.ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.

ಜಗದೀಶ ಕೆ.ಜೆ ಪಿಐ ಕನಕಗಿರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!