
ಬೆಂಗಳೂರು(ಡಿ.12): ಶೌಚಾಲಯದಲ್ಲಿ ಮೊಬೈಲ್ ಇಟ್ಟು ಸಹೋದ್ಯೋಗಿ ನರ್ಸ್‌ಗಳು ಸ್ನಾನ ಮಾಡುವುದು, ಬಟ್ಟೆ ಬದಲಿಸುವುದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ನರ್ಸ್‌ವೊಬ್ಬಳು ವೈಟ್‌ಫೀಲ್ಡ್ ಪೊಲೀಸರು ಬಲೆಗೆ ಬಿದ್ದಿದ್ದಾಳೆ.
ನರ್ಸ್ ಅಶ್ವಿನಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಕೃತ್ಯದಲ್ಲಿ ಹಲವು ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
"
ಅಶ್ವಿನಿ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆ ಆಡಳಿತ ಮಂಡಳಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುವ ನರ್ಸ್‌ಗಳಿಗೆ ವಸತಿ ಗೃಹದ ಸೌಲಭ್ಯ ಒದಗಿಸಿತ್ತು. ಅದರಲ್ಲಿ ಅಶ್ವಿನಿ ಸೇರಿದಂತೆ ಹಲವಾರು ನರ್ಸ್‌ಗಳು ವಸತಿಗೃಹದಲ್ಲಿ ನೆಲೆಸಿದ್ದರು.
ಮರಳಲ್ಲಿ ಮನುಷ್ಯನ ಕಾಲು : ಹೆಂಡ್ತಿ ಕುಡಿತ-ಅಕ್ರಮ ಸಂಬಂಧದಿಂದ ನೊಂದ ಗಂಡ - ಬಿಗ್ ಟ್ವಿಸ್ಟ್
ಡಿ.5ರ ಸಂಜೆ 6.45ರ ಸುಮಾರಿನಲ್ಲಿ ಸ್ನಾನ ಮಾಡಲು ನರ್ಸ್‌ವೊಬ್ಬರು ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಸಂತ್ರಸ್ತ ನರ್ಸ್ ಕಣ್ಣಿಗೆ ಶೌಚಾಲಯದಲ್ಲಿ ಮೊಬೈಲ್ ಬಚ್ಚಿಟ್ಟಿರುವುದು ಕಾಣಿಸಿದೆ. ಗಾಬರಿಗೊಂಡ ನರ್ಸ್, ತಕ್ಷಣ ಬಟ್ಟೆ ಧರಿಸಿಕೊಂಡು ಮೊಬೈಲ್ ತೆಗೆದುಕೊಂಡು ಪರಿಶೀಲನೆ ನಡೆಸಿದ್ದು, ವಿಡಿಯೋ ರೆಕಾರ್ಡ್ ಆನ್ ಆಗಿರುವುದು ಕಂಡುಬಂದಿದೆ. ಸಂತ್ರಸ್ತ ನರ್ಸ್, ಮೊಬೈಲ್‌ನಲ್ಲಿನ ಫೋಟೋ ಗ್ಯಾಲರಿಯಲ್ಲಿ ಪರಿಶೀಲನೆ ನಡೆಸಿದಾಗ ಹಲವು ಆಸ್ಪತ್ರೆ ಮಹಿಳಾ ಸಿಬ್ಬಂದಿಯ ಸ್ನಾನದ ದೃಶ್ಯಾವಳಿಗಳನ್ನು ಸೆರೆ ಹಿಡಿದಿರುವುದು ಪತ್ತೆಯಾಗಿದೆ. ಕೂಡಲೇ ವಸತಿ ಗೃಹದ ಮೇಲ್ವಿಚಾರಕಿಗೆ ಸಂತ್ರಸ್ತೆ ಮೊಬೈಲ್ ಒಪ್ಪಿಸಿ, ದೂರು ನೀಡಿದ್ದರು.
ಪರಿಶೀಲನೆ ನಡೆಸಿದಾಗ ಪತ್ತೆಯಾದ ಮೊಬೈಲ್ ಆರೋಪಿ ಅಶ್ವಿನಿಯದ್ದು ಎಂಬುದು ಗೊತ್ತಾಗಿದೆ. ಆಂತರಿಕ ತನಿಖೆ ನಡೆಸಿದ ವೇಳೆ ಸತ್ಯಾಂಶ ಹೊರ ಬಂದಿದೆ. ಅಶ್ವಿನಿ ಜತೆಗೆ ಇನ್ನು ಕೆಲವರು ಕೈ ಜೋಡಿಸಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ವಿಡಿಯೋಗಳನ್ನು ಪ್ರಿಯಕರನಿಗೆ ಕಳುಹಿಸುತ್ತಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ವೈಟ್‌ಫೀಲ್ಡ್ ಠಾಣೆ ಪೊಲೀಸರು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ