ವಿಜಯಪುರದಲ್ಲಿ ಮಕ್ಕಳ ಮಾರಾಟ ದಂಧೆ: ನರ್ಸ್‌ ಬಂಧನ

By Kannadaprabha News  |  First Published May 26, 2022, 11:19 AM IST

*  ಐವರು ಮಕ್ಕಳ ರಕ್ಷಣೆ
*  ಸೊಲ್ಲಾಪುರದ ಕುಟುಂಬವೊಂದಕ್ಕೆ ಮಗು ಮಾರಿದ್ದ ನರ್ಸ್‌
*  ಈ ಸಂಬಂಧ ವಿಜಯಪುರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು  
 


ವಿಜಯಪುರ(ಮೇ.26):  ಅನಧಿಕೃತವಾಗಿ ಮಕ್ಕಳ ಮಾರಾಟ ಹಾಗೂ ಸಾಕಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಡಚಣ ತಾಲೂಕಿನ ಜಿಗಜಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ ಒಬ್ಬಳನ್ನು ಪೊಲೀಸರು ಬಂಧಿಸಿ, ಐದು ಮಕ್ಕಳನ್ನು ರಕ್ಷಿಸಿದ್ದಾರೆ. ಜಿಗಜಿಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಸ್ಟಾಫ್‌ ನರ್ಸ್‌ ಜಯಮಾಲಾ ಬಿಜಾಪುರ (ಪಾಟೀಲ) ಬಂಧಿತ ಆರೋಪಿ.

ವಿಜಯಪುರ ನಗರದ ಅಥಣಿ ಗಲ್ಲಿಯ ನಿವಾಸಿ ಸ್ಟಾಫ್‌ ನರ್ಸ್‌ ಐದು ಮಕ್ಕಳ ಮಾರಾಟ ಹಾಗೂ ಸಾಕಣೆ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ವಿಜಯಪುರ ಮಹಿಳಾ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಹಾಗೂ ಮಕ್ಕಳ ಸಹಾಯವಾಣಿ ನಿರ್ದೇಶಕಿ ಸುನಂದಾ ತೋಳಬಂದಿ ಮತ್ತು ಅವರ ತಂಡದವರು ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಸ್ಟಾಫ್‌ ನರ್ಸ್‌ ಜಯಮಾಲಾ ಮನೆಯಲ್ಲಿ 5 ವರ್ಷದ ಗಂಡು ಮಗು ಹಾಗೂ 3 ವರ್ಷದ ಒಂದು ಹೆಣ್ಣು ಮಗು, ನಗರದ ದರಬಾರ ಗಲ್ಲಿಯ ಶಾಂತಮ್ಮ ಹೆರಕಲ್‌ ಬಳಿ 3 ವಷÜರ್‍ದ ಒಂದು ಹೆಣ್ಣು ಮಗು, ಅಥಣಿ ಗಲ್ಲಿಯ ಚಂದ್ರಮ್ಮ ಮಾದರ ಬಳಿ 11 ತಿಂಗಳ ಹೆಣ್ಣು ಮಗುವನ್ನು ನರ್ಸ್‌ ಜಯಮಾಲಾ ಬಿಟ್ಟಿದ್ದಳು.

Latest Videos

undefined

Davanagere: ಕದಿಯಲು ಬಂದ ಕಳ್ಳ ಆಯ ತಪ್ಪಿ ಬಿದ್ದು ಸಾವು!

ಐದು ವರ್ಷದ ಹೆಣ್ಣು ಮಗುವನ್ನು ಮಹಾರಾಷ್ಟ್ರದ ಸೊಲ್ಲಾಪುರ ಕುಟುಂಬವೊಂದಕ್ಕೆ ಸಾಗಾಟ ಮಾಡಲಾಗಿತ್ತು. ಒಂದು ಗಂಡು ಮಗು ಸೇರಿದಂತೆ ಒಟ್ಟು ಐವರು ಮಕ್ಕಳನ್ನು ರಕ್ಷಿಸಿ ನರ್ಸ್‌ ಜಯಮಾಲಾ ಎಂಬುವಳನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ರಕ್ಷಣೆ ಮಾಡಿದ ಐವರು ಮಕ್ಕಳನ್ನು ಸಿದ್ದೇಶ್ವರ ದತ್ತು ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಮಹಿಳಾ ಪೊಲೀಸ್‌ ಠಾಣೆ ಸಿಪಿಐ ಸಿ.ಬಿ.ಬಾಗೇವಾಡಿ ನೇತೃತ್ವದಲ್ಲಿ ಮಹಿಳಾ ಪೊಲೀಸ್‌ ಠಾಣೆ ಪಿಎಸ್‌ಐ ಎಂ.ಎಂ. ಚೌರ, ಪಿಎಸ್‌ಐ ಬನಸೋಡೆ, ಮಹಿಳಾ ಪೊಲೀಸ್‌ ಪೇದೆಗಳಾದ ರೇಣುಕಾ ವಾಲೀಕಾರ, ಕಟ್ಟಿಮನಿ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು. ವಿಜಯಪುರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!