
ಗಜಿಯಾಬಾದ್ (ಸೆ. 07) 500 ಕ್ಕೂ ಅಧಿಕ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ 22 ವರ್ಷದ ಅಸಾಮಿಯೊಬ್ಬನ ಬಂಧನವಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾದಂತಹ ಮಹಾನಗರದ ಮಹಿಳೆಯರಿಗೆ ಚಾಲಾಕಿ ಬ್ಲ್ಯಾಕ್ ಮೇಲ್ ಅಸ್ತ್ರ ಬಳಸುತ್ತಿದ್ದ.
ಕಳೆದ ಎರಡು ವರ್ಷಗಳಿಂದ ಬ್ಲ್ಯಾಕ್ ಮೇಲ್ ಮಾಡುವುದನ್ನೆ ಕುಲಕಸಬು ಮಾಡಿಕೊಂಡಿದ್ದ ದೀಪಕ್ ಕುಮಾರ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹರಿಯಾಣದ ರೋಹ್ಟಕ್ ನಿವಾಸಿ ದೀಪಕ್ ಮಹಿಳೆಯರಿಗೆ ವಿಡಿಯೋ ಕಾಲ್ ಮಾಡುತ್ತಿದ್ದ. ವಿಡಿಯೋ ಕಾಲ್ ಮಾಡಿ ತಾನು ಬಟ್ಟೆ ಕಳಚಿ ಬೆತ್ತಲಾಗುತ್ತಿದ್ದ. ಈ ವೇಳೆ ಕಾಲ್ ಡಿಸ್ ಕನೆಕ್ಟ್ ಆಗುವುದಕ್ಕಿಂತ ಮುಂಚೆ ಸ್ಕ್ರೀನ್ ಶಾಟ್ ತೆಗೆದುಕೊಳ್ಳುತ್ತಿದ್ದ. ಇದೇ ಇಮೇಜ್ ಇಟ್ಟುಕೊಂಡು ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.
ಐದನೇ ತರಗತಿಯಲ್ಲೇ ಶಾಲೆ ತೊರೆದಿದ್ದ ದೀಪಕ್ ಮೊಬೈಲ್ ರಿಪೇರಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕರೆ ಮಾಡುವ ವ್ಯಕ್ತಿ ಯಾರು ಎಂಬುದು ಗೊತ್ತಾಗದ ರೀತಿಯ ಅನೇಕ ಅಪ್ಲಿಕೇಶನ್ ಗಳ ಜ್ಞಾನ ಈತನಿಗಿದ್ದು ತನ್ನ ಗುರುತು ಮರೆ ಮಾಚುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಕ್ಸ್ಟಿಂಗ್ ಚಾಳಿ ಹುಟ್ಟಿಕೊಳ್ಳುವುದು ಹೇಗೆ?
ಇಂಥ ಅಪ್ಲಿಕೇಶನ್ ಬಳಸಿ ಕಂಟ್ರಿ ಕೋಡ್ ಸಹ ಬದಲಾಯಿಸುತ್ತಿದ್ದ. ನಂಬರ್ ಒಂದಕ್ಕೆ ಕರೆ ಮಾಡಿ ಅದು ಮಹಿಳೆಯರದ್ದಾ? ಎಂಬುದನ್ನು ಗೊತ್ತು ಮಾಡಿಕೊಂಡು ನಂತರ ವಿಡಿಯೋ ಕಾಲ್ ಮಾಡಿ ಬೆತ್ತಲಾಗುತ್ತಿದ್ದ.
ಸ್ಕೀನ್ ಶಾಟ್ ಪಡೆದುಕೊಂಡು ಮಹಿಳೆಗೆ ಬೆದರಿಕೆ ಹಾಕಿ ನನ್ನ ಜತೆ ನಿಮಗೆ ಅಕ್ರಮ ಸಂಬಂಧವಿದೆ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಲ್ಲದೇ ಸೆಕ್ಸ್ ಚಾಟ್ ಮಾಡಿ ಎಂದು ಹೇಳುತ್ತ ಬೆತ್ತಲೇ ಪೋಟೋ ಶೇರ್ ಮಾಡುತ್ತಿದ್ದ.
ಇಂಥದ್ದೆ ಕೆಲಸ ಮಾಡಿಕೊಂಡಿದವ ಗಜಿಯಾಬಾದ್ ನ ಮಹಿಳಾ ಲಾಯರ್ ಒಬ್ಬರಿಗೆ ಕಾಲ್ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ವಕೀಲೆ ಪೊಲೀಸರ ಮೊರೆ ಹೋಗಿದ್ದು ಸೈಬರ್ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಆರೋಪಿ ಮೊಬೈಲ್ ನಲ್ಲಿ 500 ಕ್ಕೂ ಹೆಚ್ಚು ಮಹಿಳೆಯರ ನಂಬರ್ ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ