Cover Story : ಬರೀ ಪೇಪರ್ ನಲ್ಲಿ ಉಳಿದ ಗೋಹತ್ಯೆ ನಿಷೇಧ ಕಾಯ್ದೆ?

ಗೋಹತ್ಯೆ ನಿಷೇಧ ಕಾಯ್ದೆಗೆ ಇಲ್ಲಿ ಬೆಲೆಯೇ ಇಲ್ಲ
ಚಾಮರಾಜನಗರದಲ್ಲಿ ನಿರಂತರವಾಗಿ ನಡೆಯುತ್ತಿದೆ ಗೋಹತ್ಯೆ
ಒಂದೇ ಕಾಲೋನಿಯಲ್ಲಿ 20ಕ್ಕೂ ಅಧಿಕ ಕಸಾಯಿಖಾನೆಗಳು

First Published Jan 22, 2022, 6:26 PM IST | Last Updated Jan 22, 2022, 6:26 PM IST

ಚಾಮರಾಜನಗರ (ಜ. 22): ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಈಗಾಗಲೇ ಜಾರಿಯಾಗಿದೆ. ಆದರೆ, ಇದು ಹಲ್ಲಿಲ್ಲದ ಹಾವಿನಂತಾಗಿದೆ ಎನ್ನುವ ಅನುಮಾನ ಜನರನ್ನು ಕಾಡಿದೆ. ಗೋಹತ್ಯೆ ನಿಷೇಧ ಕಾನೂನು ಅಂದಾಜು 1 ವರ್ಷ ಸಮೀಪಿಸುತ್ತಿದ್ದರೂ, ರಾಜ್ಯದ ಕೆಲವೆಡೆ ಅವ್ಯಾಹತವಾಗಿ ಇನ್ನೂ ಗೋಹತ್ಯೆಗಳು ನಡೆಯುತ್ತಿವೆ. ಆ ಕುರಿತಾಗಿ ಸ್ಪೆಷಲ್ ಕವರ್ ಸ್ಟೋರಿ ರಿಪೋರ್ಟ್.

Cover Story: ಭೋವಿ ನಿಗಮದ ಕರ್ಮಕಾಂಡ, ಇನ್ನೂ ಸೇವೆಯಲ್ಲಿದ್ದಾರೆ ಅಮಾನತ್ತಾಗಿರುವ ಅಧಿಕಾರಿಗಳು
ಚಾಮರಾಜನಗರದ ಕೊಳ್ಳೆಗಾಲದಲ್ಲಿ ದಿನನಿತ್ಯವೂ ಭೀಕರವಾಗಿ ಗೋಹತ್ಯೆಗಳು ಆಗುತ್ತಿವೆ. ಆನಂದಜ್ಯೋತಿ ಕಾಲೋನಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ ಮಾಹಿತಿಯ ಇಂಚಿಂಚೂ ವರದಿ ಇಲ್ಲಿದೆ. ಇಲ್ಲಿ ಬೀದಿಬೀದಿಗಳಲ್ಲಿ ಗೋಹತ್ಯೆ ಕುರುಹು ಕಾಣಸಿಗುತ್ತದೆ. ಅಂದಾಜು 20ಕ್ಕೂ ಅಧಿಕ ಕಸಾಯಿಖಾನೆಗಳು ಇಲ್ಲಿ ಕಾಣಸಿಕ್ಕಿವೆ. ಇನ್ನು ನಗರಸಭೆ ನೀಡಿರುವ ಸೂಚನೆಗೂ ಅಲ್ಲಿನ ಜನ ಕ್ಯಾರೇ ಅಂದಿಲ್ಲ.

Video Top Stories