ಬರೋಬ್ಬರಿ 150 ಕಡೆ ಕಳ್ಳತನ, ಐದು ಜಿಲ್ಲೆ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕಳ್ಳತನ ಬಂಧನ

Published : Nov 06, 2025, 09:32 AM IST
notorious thief Syed Aslam Pasha arrested in Bengaluru

ಸಾರಾಂಶ

ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ 150ಕ್ಕೂ ಹೆಚ್ಚು ಕಳ್ಳತನ ನಡೆಸಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಕಳ್ಳ ಸೈಯ್ಯದ್ ಅಸ್ಲಾಂ ಪಾಷಾನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಹಗಲಿನಲ್ಲಿ ಐಷಾರಾಮಿ ಮನೆ ಗುರುತಿಸಿ, ರಾತ್ರಿ ಕಳ್ಳತನ ಮಾಡುತ್ತಿದ್ದ 

ಬೆಂಗಳೂರು (ನ.6): ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ನಟೋರಿಯಸ್ ಕಳ್ಳನನ್ನ ವಿದ್ಯಾರಣ್ಯಪುರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಸೈಯ್ಯದ್ ಅಸ್ಲಾಂ ಪಾಷಾ, ಬಂಧಿತ ಆರೋಪಿ. ಇದುವರೆಗೂ ಕಳ್ಳತನದ ಕೆರಿಯರ್‌ನಲ್ಲಿ 150 ಕಳ್ಳತನ ಕೇಸ್‌ಗಳಲ್ಲಿ ಆರೋಪಿ. ಕಳ್ಳತನದ ತಂತ್ರಗಳು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಹಗಲಲ್ಲಿ ಐಷಾರಾಮಿಗಳ ಮನೆಗಳ ರೆಕ್ಕಿ, ಕತ್ತಲಲ್ಲಿ ಕೈಚಳ:

ಆರೋಪಿ ವೃತ್ತಿಪರ ಖತರ್ನಾಕ್ ಕಳ್ಳನಾಗಿದ್ದು ಹಗಲೆಲ್ಲ ಐಷಾರಾಮಿ ಮನೆಗಳನ್ನ ರೆಕ್ಕಿ ಮಾಡುತ್ತಿದ್ದ. ರಾತ್ರಿಯಾಗುತ್ತಿದ್ದಂತೆ ಕೈಚಳಕ ತೋರಿಸುತ್ತಿದ್ದ ಖದೀಮ. ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದ್ದರೆ ಕುತ್ತಿಗೆಯಲ್ಲಿರುವ ಸರಗಳನ್ನು ಎಗರಿಸಿ ಎಸ್ಕೇಪ್ ಯಾರದು ಎನ್ನುವಷ್ಟರಲ್ಲೆ ಎಸ್ಕೇಪ್ ಆಗಿಬಿಡುತ್ತಿದ್ದ. ಇನ್ನು ಕಿಟಕಿ ಪಕ್ಕದಲ್ಲಿ ಮೇನ್ ಡೋರ್ ಇದ್ದರೆ, ಕಿಟಕಿ ಗ್ಲಾಸ್ ಒಡೆದು ಡೋರ್ ಓಪನ್ ಮಾಡುತ್ತಿದ್ದ ಆರೋಪಿ.

ಮನೆಗಳನ್ನ ಹೇಗೆ ಗುರುತಿಸುತ್ತಿದ್ದ ಗೊತ್ತಾ?

ಹಾಲು, ಪೇಪರ್ ಮನೆ ಬಳಿ ಹಾಗೆ ಬಿದ್ದಿದ್ದರೆ, ಮೇನ್ ಡೋರ್ ಲಾಕ್ ಆಗಿದ್ದರೆ ಅದನ್ನು ಟಾರ್ಗೆಟ್. ಇನ್ನು ಮನೆಯಲ್ಲಿನ ಎಲ್ಲ ಲೈಟ್‌ಗಳು ಆಫ್ ಆಗಿರುವುದು, ಮನೆಯ ಗೇಟ್ ಹೊರಗಿನಿಂದ ಲಾಕ್ ಆಗಿರುವುದು ಎಂದರೆ ಕಳ್ಳತನಕ್ಕೆ ಸೂಕ್ತ ಸ್ಥಳ ಎಂದು ಗುರುತಿಸಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ ಆರೋಪಿ.

ರಾತ್ರಿ ಕಳ್ಳತನ, ಹಗಲು ಮೋಜುಮಸ್ತಿ

ಒಂದು ಏರಿಯಾ ಒಂದು ವರ್ಷಕಳ್ಳತನದಿಂದ ಬಂದ ಹಣದಲ್ಲಿ ಮೋಜುಮಸ್ತಿ ಮಾಡಿ ಹಣವನ್ನು ಖಾಲಿ ಮಾಡುತ್ತಿದ್ದ ಅಸ್ಲಾಂ ಪಾಷಾ, ಒಂದು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದರೆ ಆ ಕೇಸ್ ಹಳೇದಾಗುವವರೆಗೂ (ಕನಿಷ್ಟ ಒಂದು ವರ್ಷ) ಮತ್ತೆ ಆ ಏರಿಯಾಗೆ ಕಾಲಿಡದಂತೆ ತಂತ್ರ ರೂಪಿಸಿದ್ದ. ಇದರಿಂದಾಗಿ ಐದು ಜಿಲ್ಲೆಗಳಲ್ಲಿ ಅವನ ಕಳ್ಳತನಗಳು ನಿರಂತರವಾಗಿ ಮುಂದುವರಿದಿದ್ದವು.ಸದ್ಯ ವಿದ್ಯಾರಣ್ಯಪುರ ಪೊಲೀಸ್‌ರಿಂದ ಖರ್ತನಾಕ್ ಕಳ್ಳನ ವಿಚಾರಣೆ ನಡೆಯುತ್ತಿದ್ದು, ಇನ್ನಷ್ಟು ಕಳ್ಳತನ ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ ಇವೆ. ಕುಖ್ಯಾತ ಕಳ್ಳನ ಬಂಧನವು ಈ ಪ್ರದೇಶದ ನಿವಾಸಿಗಳಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ