ಧಾರವಾಡ ಪೊಲೀಸರ ಭರ್ಜರಿ ಕಾರ್ಯಾಚರಣೆ: ಆಸ್ಪತ್ರೆಯಲ್ಲಿ ವೈದ್ಯರ Laptop ಕದ್ದಿದ್ದ ಖತರ್ನಾಕ್ ಕಳ್ಳನ ಬಂಧನ

Published : Nov 05, 2025, 09:33 AM IST
Dharwad Laptop Thief Arrested in Suburban Police Operation

ಸಾರಾಂಶ

Dharwad Laptop Thief Arrested in Suburban Police Operation: ಧಾರವಾಡ ಉಪನಗರ ಪೊಲೀಸರು ಲ್ಯಾಪ್‌ಟಾಪ್, ಮೊಬೈಲ್ ಕಳ್ಳತನದಲ್ಲಿ ತೊಡಗಿದ್ದ ಯುನೂಸ್ ಖಾಜಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.  ಸುಮಾರು 3.5 ಲಕ್ಷ ಮೌಲ್ಯದ 3 ಲ್ಯಾಪ್‌ಟಾಪ್‌ಗಳು ಮತ್ತು 7 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಧಾರವಾಡ, (ನ.5): ಧಾರವಾಡ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಕಳ್ಳತನದಲ್ಲಿ ತೊಡಗಿದ್ದ ಖತರ್ನಾಕ್ ಕಳ್ಳನ ಬಂಧಿಸಲಾಗಿದೆ.

ಯುನೂಸ್ ಖಾಜಿ ಬಂಧಿತ ಆರೋಪಿ. ಆರೋಪಿಯಿಂದ ಮೂರು ಲ್ಯಾಪ್‌ಟಾಪ್‌ಗಳು ಮತ್ತು ಏಳು ಮೊಬೈಲ್‌ಗಳು ಸೇರಿದಂತೆ ಸುಮಾರು 3.5 ಲಕ್ಷ ರೂಪಾಯಿಗಳ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣ ದಾಖಲಾಗಿದೆ.

ಕೊಪ್ಪಳದಲ್ಲಿ ನಡೆದ ಕಳ್ಳತನ ಬಾಯಿಬಿಟ್ಟ ಆರೋಪಿ

ಪೊಲೀಸ್ ಮೂಲಗಳ ಪ್ರಕಾರ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮೂಲದವನಾಗಿರುವ ಯುನೂಸ್ ಖಾಜಿ ಇತ್ತೀಚೆಗಷ್ಟೇ ಧಾರವಾಡದ ಡಿಮಾನ್ಸ್ (District Institute of Medical Sciences) ಆಸ್ಪತ್ರೆಯಲ್ಲಿ ವೈದ್ಯರ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದ ಇದರ ಜೊತೆಗೆ, ಕೊಪ್ಪಳ ಜಿಲ್ಲೆಯ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲೂ ಇದೇ ರೀತಿ ಲ್ಯಾಪ್‌ಟಾಪ್ ಕಳ್ಳತನ ನಡೆಸಿದ್ದಾನೆ. ಬಂಧನದ ನಂತರ ವಿಚಾರಣೆಯಲ್ಲಿ ಆರೋಪಿ ತನ್ನ ಕಳ್ಳತನದ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಕಳ್ಳತನ:

ಆರೋಪಿ ಮುಖ್ಯವಾಗಿ ಬಸ್ ನಿಲ್ದಾಣಗಳಲ್ಲಿ ಗದ್ದಲದಿಂದಾಗಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿ, ಧಾರವಾಡದಲ್ಲಿ ಹಲವು ಕಡೆ ಇದೇ ರೀತಿ ಕಳ್ಳತನಗಳು ನಡೆದಿದ್ದವು. ಇದರಿಂದಾಗಿ ಬೇಸತ್ತಿದ್ದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ ಬಳಿಕ ಕಾರ್ಯಾಚರಗೆ ಇಳಿಸಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಶ್ವಿಯಾಗಿದ್ದಾರೆ.

ಸದ್ಯ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿ ಇನ್ನಷ್ಟು ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ರಿಸ್‌ಮಸ್ ಹಬ್ಬದ ದಿನವೇ ಭೀಕರ ಅಪಘಾತ: ಎತ್ತಿನ ಬಂಡಿಗೆ ಬೈಕ್ ಡಿಕ್ಕಿ, ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ!
Rapido Bike ಬುಕ್ ಮಾಡುವ ಮುನ್ನ ಎಚ್ಚರ! ರೈಡರ್ ಎಡವಟ್ಟಿಗೆ ಹಿಂಬದಿ ಕುಳಿತ ಗ್ರಾಹಕನ ಮಂಡಿ ಚಿಪ್ಪು ಪುಡಿ ಪುಡಿ!