ಡ್ರಗ್ಸ್‌ ದಂಧೆಕೋರ ಕುಖ್ಯಾತ ಹ್ಯಾಕರ್ ಬಂಧನ..!

By Kannadaprabha News  |  First Published Nov 19, 2020, 7:47 AM IST

ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನ ಡ್ರಗ್ಸ್‌ ಪಾರ್ಟನರ್‌, ಹ್ಯಾಕರ್‌ ಸೆರೆ| ಸರ್ಕಾರಿ, ಖಾಸಗಿ ವೆಬ್‌ಸೈಟ್‌ಗಳ ಹ್ಯಾಕ್‌ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಶ್ರೀಕಿ, ಇದರ ಜತೆ ಡ್ರಗ್ಸ್‌ ದಂಧೆಯಲ್ಲೂ ತೊಡಗಿದ್ದ ಕಂಪ್ಯೂಟರ್‌ ಸೈನ್ಸ್‌ ಪದವೀಧರ| ದರ್ಶನ್‌ ಲಮಾಣಿ ಸ್ನೇಹಿತರ ಜತೆಗೂಡಿ ಡಾರ್ಕ್ ನೆಟ್‌, ಬಿಟ್‌ ಕಾಯಿನ್‌ ಬಳಸಿ ವಿದೇಶಗಳಲ್ಲಿ ಡ್ರಗ್ಸ್‌ ಖರೀದಿ| 


ಬೆಂಗಳೂರು(ನ.19): ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಹಾಗೂ ಆತನ ಸ್ನೇಹಿತರ ವಿರುದ್ಧ ಡ್ರಗ್ಸ್‌ ಪ್ರಕರಣದ ಬೆನ್ನಹತ್ತಿರುವ ಸಿಸಿಬಿ, ಈಗ ಆ ತಂಡದೊಂದಿಗೆ ನಂಟು ಹೊಂದಿದ್ದ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್‌ವೊಬ್ಬನನ್ನು ಸೆರೆ ಹಿಡಿದಿದೆ.

ಜಯನಗರದ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ (25) ಬಂಧಿತನಾಗಿದ್ದು, ದೇಶ ಹಾಗೂ ವಿದೇಶದ ಸರ್ಕಾರಿ ಮತ್ತು ಖಾಸಗಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಬೆದರಿಸಿ ಆತ ಸುಲಿಗೆ ಮಾಡುತ್ತಿದ್ದ. ಇತ್ತೀಚಿನ ಡಾರ್ಕ್ ನೆಟ್‌ ಡ್ರಗ್ಸ್‌ ಪ್ರಕರಣದ ಆರೋಪಿಗಳ ವಿಚಾರಣೆ ವೇಳೆ ಹ್ಯಾಕರ್‌ ಶ್ರೀಕಿ ಕುರಿತು ಮಾಹಿತಿ ಸಿಕ್ಕಿತು. ಹ್ಯಾಕಿಂಗ್‌ ಮಾತ್ರವಲ್ಲದೆ ಡ್ರಗ್ಸ್‌ ದಂಧೆಯಲ್ಲಿ ಸಹ ಆರೋಪಿ ಸಕ್ರಿಯವಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Latest Videos

undefined

ನ.4ರಂದು ಚಾಮರಾಜ ಪೇಟೆಯ ಅಂಚೆ ಕಚೇರಿಯಲ್ಲಿ ವಿದೇಶದಿಂದ ಅಂಚೆ ಮೂಲಕ ಬಂದ ಡ್ರಗ್ಸ್‌ ಸ್ವೀಕರಿಸಲು ಬಂದಾಗ ಸುಜಯ್‌ ಸಿಸಿಬಿ ಬಲೆಗೆ ಬಿದ್ದಿದ್ದ. ಬಳಿಕ ಆತನ ಸ್ನೇಹಿತರಾದ ಹೇಮಂತ್‌ ಮುದ್ದಪ್ಪ, ಸೋದರ ಸಂಬಂಧಿಗಳಾದ ಸುನೀಶ್‌ ಹೆಗ್ಡೆ ಹಾಗೂ ಪ್ರಸಿದ್‌್ದ ಶೆಟ್ಟಿಸೇರಿ 7 ಮಂದಿ ಆರೋಪಿಗಳು ಸೆರೆಯಾಗಿದ್ದರು. ಈ ಆರೋಪಿಗಳ ಜತೆ ಸ್ನೇಹ ಹೊಂದಿದ್ದ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌, ಗೋವಾದಲ್ಲಿ ಗೆಳೆಯರಿಗೆ ಆಶ್ರಯ ನೀಡಿದ ಆರೋಪ ಹೊತ್ತು ಪೊಲೀಸರಿಂದ ಬಂಧಿತನಾಗಿದ್ದಾನೆ. ಈ ಆರೋಪಿಗಳ ಪೈಕಿ ಸುನೀಷ್‌ ಹಾಗೂ ಪ್ರಸಿದ್‌ದ ಶೆಟ್ಟಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಿಸಿದಾಗ ಕೆಲವು ಮಹತ್ವದ ಸಂಗತಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ದೀಪಾವಳಿ ಹೊಸ ಬಟ್ಟೆಗಾಗಿ ಜೈಲಿನಲ್ಲಿ ರಾಗಿಣಿ, ಸಂಜನಾ ರಂಪಾಟ..!

ಡಾರ್ಕ್ವೆಬ್‌ನಲ್ಲಿ ವಿದೇಶಿ ಪೆಡ್ಲರ್‌ಗಳನ್ನು ಸಂಪರ್ಕಿಸಿ ಹೈಡ್ರೋ ಗಾಂಜಾವನ್ನು ಪ್ರಸಿದ್‌್ದ ಶೆಟ್ಟಿಬುಕ್‌ ಮಾಡುತ್ತಿದ್ದ. ಆನಂತರ ಹ್ಯಾಕರ್‌ ಶ್ರೀಕೃಷ್ಣ, ಬಿಟ್‌ಕಾಯಿನ್‌ ಖರೀದಿಸಿ ವಿದೇಶಿ ಪೆಡ್ಲರ್‌ಗಳಿಗೆ ಬಿಟ್‌-ಕಾಯಿನ್‌ ಮೂಲಕ ಹಣ ಪಾವತಿಸುತ್ತಿದ್ದ. ವಿದೇಶದಿಂದ ಪಾರ್ಸೆಲ್‌ನಲ್ಲಿ ಚಾಮರಾಜಪೇಟೆ ಅಂಚೆ ಕಚೇರಿಗೆ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದರು. ಕೋರಿಯರ್‌ ಟ್ರ್ಯಾಕರ್‌ ನಂಬರ್‌ ಮೇಲೆ ನಿಗಾವಹಿಸಿ ಅಂಚೆ ಕಚೇರಿಗೆ ನೇರವಾಗಿ ತೆರಳಿ ಹೇಮಂತ್‌ ಪಾರ್ಸಲ್‌ ಸ್ವೀಕರಿಸುತ್ತಿದ್ದ. ಬಳಿಕ ಸುನೀಶ್‌ ಸೇರಿದ ಸಂಜಯನಗರದ ಫ್ಲ್ಯಾಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಅಲ್ಲದೆ, ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಡ್ರಗ್ಸ್‌ ಮಾರಾಟ ಸಹ ಮಾಡುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನಲಪಾಡ್‌ ಜತೆ ಜೈಲು ಸೇರಿದ್ದ!

ಜಯನಗರದ ಶ್ರೀಕೃಷ್ಣ, ನೆದರ್‌ಲ್ಯಾಂಡ್‌ನಲ್ಲಿ ಬಿಎಸ್ಸಿ ಕಂಪ್ಯೂಟರ್‌ ಸೈನ್ಸ್‌ ಪದವಿ ಮುಗಿಸಿ ಬೆಂಗಳೂರಿಗೆ ಮರಳಿದ್ದ. ಕಂಪ್ಯೂಟರ್‌, ಇಂಟರ್‌ನೆಟ್‌ ಬಳಕೆ ಮತ್ತು ಪೋ›ಗ್ರಾಮಿಂಗ್‌ನಲ್ಲಿ ಚಾಣಾಕ್ಷನಾಗಿದ್ದ. ಮೊದಲ ಬಾರಿಗೆ ರನ್‌ಸ್ಕೆ$ೖಪ್‌ ಎಂಬ ಆನ್‌ಲೈನ್‌ ಗೇಮ್‌ನ್ನು ಹ್ಯಾಕ್‌ ಮಾಡಿದ್ದ ಆತ, ನಂತರ ಇಂಡಿಯನ್‌ ಪೋಕರ್‌ ವೆಬ್‌ಸೈಟ್‌, ಆನ್‌ಲೈನ್‌ ಬಿಟ್‌ಕಾಯಿನ್‌ ಮತ್ತು ಇತರೆ ವೆಬ್‌ಸೈಟ್‌ಗಳಿಗೆ ಕನ್ನ ಹಾಕಿದ್ದ.

2019ರಲ್ಲಿ ರಾಜ್ಯ ಸರ್ಕಾರದ ಇ-ಪೋ›ಕ್ಯೂರ್‌ಮೆಂಟ್‌ ವೆಬ್‌ಸೈಟನ್ನು ಹ್ಯಾಕ್‌ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಿಐಡಿ ಸೈಬರ್‌ ಕ್ರೈಂ ವಿಭಾಗ ತನಿಖೆ ಕೈಗೊಂಡಿದೆ. 2019ರಲ್ಲಿ ಶ್ರೀಕೃಷ್ಣ ಮುಖಾಂತರ ವಿವಿಧ ಆನ್‌ಲೈನ್‌ ಗ್ಯಾಂಬ್ಲಿಗ್‌ ವೆಬ್‌ಸೈಟ್‌ಗಳ ಹ್ಯಾಕ್‌ ಮಾಡಿಸಿ ಆಟಗಾರರ ಕಾರ್ಡ್‌ ನೋಡಿಕೊಂಡು ಮಾಹಿತಿ ಸೋರಿಕೆ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಆನ್‌ಲೈನ್‌ ಗೇಮ್‌ಗಳ ಡೇಟಾಗಳನ್ನು ಹ್ಯಾಕ್‌ ಮಾಡಿ ಡೇಟಾ ಸ್ಥಗಿತಗೊಳಿಸಿ ನಂತರ ಮಾಲೀಕರಿಗೆ ಕರೆ ಮಾಡಿ ಸುಲಿಗೆ ಮಾಡುತ್ತಿದ್ದ. ಆನ್‌ಲೈನ್‌ನಲ್ಲಿ ಬಿಟ್‌ ಕಾಯಿನ್‌ಗಳ ವರ್ಗಾವಣೆ ಹ್ಯಾಕ್‌ ಮಾಡಿ ಬಿಟ್‌ಕಾಯಿನ್‌ಗಳನ್ನು ಕದಿಯುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಂತಿನಗರದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಸ್‌.ಎ.ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ ಸ್ನೇಹಿತನಾಗಿರುವ ಶ್ರೀಕಿ, 2018ರಲ್ಲಿ ಉದ್ಯಮಿ ಪುತ್ರ ವಿದ್ವತ್‌ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ನಲಪಾಡ್‌ ಜತೆ ಜೈಲು ಸಹ ಸೇರಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾ ಕಂಪನಿಯಿಂದ ಸುಲಿಗೆಗೆ ಸ್ಕೆಚ್‌

ಚೀನಾ ಮೂಲದ ಜಿಜಿ ಪೋಕರ್‌ ಕಂಪನಿ ವೆಬ್‌ಸೈಟ್‌ ಅನ್ನು ಹ್ಯಾಕ್‌ ಮಾಡಿ, ಬಳಿಕ ಆ ಕಂಪನಿಗೆ ಬೆದರಿಸಿ ದೊಡ್ಡ ಮಟ್ಟದ ಹಣ ಸುಲಿಗೆಗೆ ಶ್ರೀಕಿ ಗ್ಯಾಂಗ್‌ ಸಂಚು ರೂಪಿಸಿದ್ದರು. ಇದಕ್ಕಾಗಿ ಚಿಕ್ಕಮಗಳೂರು ಮತ್ತು ಕಬಿನಿಯ ರೆಸಾರ್ಟ್‌ಗಳು, ಬೆಂಗಳೂರಿನ ಪಂಚತಾರಾ ಹೋಟೆಲ್‌ ಹಾಗೂ ದೇವನಹಳ್ಳಿ ಹತ್ತಿರದ ಪ್ರಸಿದ್‌ ಶೆಟ್ಟಿ ಫಾರ್ಮ್‌ ಹೌಸ್‌, ಸಂಜಯ ನಗರದ ಫ್ಲಾಟ್‌ಗಳಲ್ಲಿ ವಾಸ್ತವ್ಯ ಹೂಡಲು ಹ್ಯಾಕರ್‌ ತಂಡ ಸಿದ್ದವಾಗಿತ್ತು. ಪೋಕರ್‌ ವೆಬ್‌ಸೈಟ್‌ನ್ನು ಹ್ಯಾಕ್‌ ಮಾಡುವ ಯತ್ನದಲ್ಲಿದ್ದಾಗಲೇ ಶ್ರೀಕಿ ಸಿಸಿಬಿಗೆ ಸಿಕ್ಕಿಬಿದ್ದಿದ್ದಾನೆ.
 

click me!