ಅತ್ಯಾಚಾರ ಪ್ರಕರಣವೊಂದರ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುವ ಭರದಲ್ಲಿ ಸೆಕ್ಯೂರಿಟಿ ಗಾರ್ಡ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾ: ಅತ್ಯಾಚಾರ ಪ್ರಕರಣವೊಂದರ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುವ ಭರದಲ್ಲಿ ಸೆಕ್ಯೂರಿಟಿ ಗಾರ್ಡ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಅವಘಡದಲ್ಲಿ ಸೆಕ್ಯೂರಿಟಿ ಗಾರ್ಡ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಆಘಾತಕಾರಿ ಘಟನೆಯ ದೃಶ್ಯಗಳು ಸ್ಥಳೀಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ನೋಯ್ಡಾದ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ನೀರಜ್ ಸಿಂಗ್ ವಿರುದ್ಧ ಆತನ ಸಹೋದ್ಯೋಗಿ ಅತ್ಯಾಚಾರದ ಆರೋಪ ಮಾಡಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಾದಂದಿನಿಂದಲೂ ಸಿಂಗ್ ತಲೆಮರೆಸಿಕೊಂಡಿದ್ದ. ಈ ಮಧ್ಯೆ ಆತ ಹೌಸಿಂಗ್ ಸೊಸೈಟಿಯಲ್ಲಿರುವ ವಿಚಾರ ತಿಳಿದು ಪೊಲೀಸರು ನೀರಜ್ ಸಿಂಗ್ ಬಂಧನಕ್ಕೆ ಬಲೆ ಬೀಸಿ ಆತ ವಾಸವಿದ್ದ ಹೌಸಿಂಗ್ ಸೊಸೈಟಿ ಸಮೀಪ ಆಗಮಿಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಆತ ಹೌಸಿಂಗ್ ಸೊಸೈಟಿಯ ಭದ್ರತಾ ಸಿಬ್ಬಂದಿ ಅಶೋಕ್ ಮವಿ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದಾನೆ. ಇದರಿಂದ ಅಶೋಕ್ ಮವಿ ಅವರ ಭುಜ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ.
ಮುರುಘಾ ಶ್ರೀಯನ್ನು ಮೂರು ದಿನ ಕಸ್ಟಡಿಗೆ ಪಡೆದ ಪೊಲೀಸರು, ತನಿಖೆ ಚುರುಕುಗೊಳಿಸಿದ ಇಲಾಖೆ
ಮಂಗಳವಾರ ಸಂಜೆ ಆರೋಪಿ ನೀರಜ್ ಸಿಂಗ್(Neeraj Singh) , ಸೆಕ್ಟರ್ 120ರ (Sector 120) ಅಮ್ರಪಾಲಿ ಝೋಡಿಕ್ ಸೊಸೈಟಿಯಲ್ಲಿರುವ (Amrapali Zodiac society) ತನ್ನ ಮನೆಯಲ್ಲಿ ಇದ್ದಾನೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ಆಗಮಿಸಿದ್ದರು. ಆದರೆ ಪೋಲೀಸರ ಆಗಮನದ ಸುಳಿವು ಸಿಕ್ಕಿದ ಸಿಂಗ್ ಓಡಿಹೋಗಲು ಪ್ರಯತ್ನಿಸಿದ್ದ. ಸಿಸಿಟಿವಿ ದೃಶ್ಯಗಳಲ್ಲಿ, ಸಿಂಗ್ ಅವರ ಕಾರು ಕಟ್ಟಡದ ನೆಲಮಹಡಿಯಲ್ಲಿರುವ ಪಾರ್ಕಿಂಗ್ ಸ್ಥಳದಿಂದ ಹೊರ ಬಂದು ವೇಗವಾಗಿ ಚಲಿಸಿದೆ. ಈ ವೇಳೆ ಕಾರು ನಿಲ್ಲಿಸುವ ಸಲುವಾಗಿ ಅಡ್ಡ ಬಂದ ಸೆಕ್ಯೂರಿಟಿ ಗಾರ್ಡ್(security guard) ಮೇಲೆ ಆತ ಕಾರು ಹತ್ತಿಸಿ ಎಳೆದುಕೊಂಡುದ್ದಾನೆ. ಈ ವೇಳೆ ಇತರ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿ ಕಾರನ್ನು ಸುತ್ತುವರಿಯಲು ಯತ್ನಿಸಿದಾಗ ಆತ ಕಾರನ್ನು ನಿಧಾನಿಸಿದಂತೆ ಮಾಡಿ ವೇಗವಾಗಿ ಹೊರಟು ಹೋಗಿದ್ದು, ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಅಪ್ರಾಪ್ತ ಹೆಂಡತಿಯ ಮೇಲೆ ಅತ್ಯಾಚಾರ ಪ್ರಕರಣ: ಪೋಕ್ಸೊ ಕೇಸ್ ರದ್ದುಮಾಡಿದ ಕರ್ನಾಟಕ ಹೈಕೋರ್ಟ್
ಭದ್ರತಾ ಸಿಬ್ಬಂದಿ ಅಶೋಕ್ ಮವಿ (Ashok Mavi) ನೀಡಿದ ಅವರ ದೂರಿನ ಆಧಾರದ ಮೇರೆಗೆ ಆರೋಪಿ ಸಿಂಗ್ ವಿರುದ್ಧ ಬುಧವಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅತಿ ವೇಗದ ಚಾಲನೆ), 427 (ಹಾನಿ ಉಂಟುಮಾಡುವುದು) ಮತ್ತು 338 (ಘೋರವಾದ ಗಾಯ ಅಥವಾ ಜೀವಕ್ಕೆ ಅಪಾಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.