ಕಾಲೇಜು ಫೆಸ್ಟ್‌ನಲ್ಲಿ ಗಲಾಟೆ: ನಮಾಜ್ ಮುಗಿಸಿ ಕಾಲೇಜಿಗೆ ಬಂದವನ ಕೊಲೆ

By Suvarna News  |  First Published Aug 12, 2022, 8:04 PM IST

 ಕಾಲೇಜು ಫೆಸ್ಟ್ ನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


ಬೆಂಗಳೂರು, (ಆಗಸ್ಟ್.12) : ವಿದ್ಯಾರ್ಥಿಯೊಬ್ಬನನ್ನ ತಾನು ವ್ಯಾಸಾಂಗ ಮಾಡ್ತಿದ್ದ ಕಾಲೇಜಿನ 50 ಮೀಟರ್ ಅಂತರದಲ್ಲೇ ಕೊಲೆ ಮಾಡಿರೋ ಘಟನೆ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

18 ವರ್ಷದ ಅರ್ಬಜ್ ಎಂಬ ವಿದ್ಯಾರ್ಥಿಯನ್ನ ಚಾಕು ಇರಿದು ಹತ್ಯೆ ಮಾಡಲಾಗಿದೆ.. ಇಂದು(ಶುಕ್ರವಾರ) ಮಧ್ಯಾಹ್ನ 2.30ರ ಸುಮಾರಿಗೆ ಇದೇ ಕಾಲೇಜಿನಿಂದ ಕೆಳಗೆ ಬಂದಿದ್ದ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಚಾಕು ಇರಿತದಿಂದ ರಕ್ತ ಸ್ರಾವವಾಗಿ ಒದ್ದಾಡ್ತಿದ್ದ.. ಆತನನ್ನ ನೋಡಿದ್ದ ಸ್ಥಳೀಯರು   ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗೋವಷ್ಟರಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ..

Tap to resize

Latest Videos

ಚಾಕುವಿನಿಂದ ಇರಿದು 25 ವರ್ಷದ ಯುವಕನ ಬರ್ಬರ ಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಅಂದ್ಹಾಗೇ ಇದೇ ಕಾಲೇಜಿನಲ್ಲಿ ಮೃತ ಅರ್ಬಜ್ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡ್ತಿದ್ದ. ಕಳೆದ ಎರಡು ದಿನಗಳಿಂದ ಈ ಕಾಲೇಜ್ ನಲ್ಲಿ ಕಲ್ಚರಲ್ ಕಾರ್ಯಕ್ರಮಗಳು ನಡೀತಿದ್ವು. ಖುಷಿಯಾಗಿ ಎಲ್ಲರೂ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ರು. ಆದ್ರೆ ನಿನ್ನ ಕ್ಷುಲ್ಲಕ ವಿಚಾರಕ್ಕೆ ಅರ್ಬಜ್ , ಅರ್ಬಜ್ ಸ್ನೇಹಿತರು ಮತ್ತು ಬೇರೆ ಸ್ಟೂಡೆಂಟ್ಸ್ ಮಧ್ಯೆ ಜಗಳವಾಗಿದೆ.

ಆದ್ರೆ ನಿನ್ನೆ(ಗುರುವಾರ) ಜಗಳ ಹೇಗೋ ಜಗಳಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಎಂದಿನಂತೆ ಇಂದು ಮತ್ತೆ ಕಾಲೇಜಿಗೆ ಬಂದಿದ್ದ ಅರ್ಬಜ್ ಮಧ್ಯಾಹ್ನದ ನಮಾಜ್ ಮುಗಿಸಿಕೊಂಡು ಕಾಲೇಜ್ ನ ಮೂರನೇ ಫ್ಲೋರ್ ನಲ್ಲಿದ್ದಾನೆ. ಈ ವೇಳೆ ಕರೆ ಮಾಡಿ ಕೆಳಗೆ ಕರೆದಿದ್ದ ಹಂತಕರು ಇಲ್ಲಿಂದ 50 ಮೀಟರ್ ದೂರ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಎಸ್ಕೇಪ್‌ ಆಗಿದ್ದಾರೆ. ಪರಿಣಾಮ ಅರ್ಬಜ್ ಸಾವನ್ನಪ್ಪಿದ್ದಾನೆ..

 ಸದ್ಯ ಘಟನಾ ಸ್ಥಳಕ್ಕೆ ಕೆ.ಜಿ ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಜಗಳ ತೆಗೆದುಕೊಂಡಿದ್ದವರು ಕೊಲೆ ಮಾಡಿದ್ರಾ? ಅಥವಾ ಬೇರೆ ಯಾರಾದ್ರು ಕರೆದು ಕೊಲೆ‌ ಮಾಡಿದ್ದಾರಾ ಅನ್ನೋದು ಪ್ರಶ್ನೆಯಾಗಿದ್ದು, ಈ ಬಗ್ಗೆ  ತನಿಖೆ ಮುಂದುವರೆದಿದ್ದು ತನಿಖೆ‌ ನಂತರವೇ ಅಸಲಿ ಸತ್ಯ ಬಯಲಾಗಲಿದೆ.

click me!