ನವ ವಿವಾಹಿತೆ ಸಾವು, ಲವ್ ಮ್ಯಾರೇಜ್ ಸುಂದರ ಬದುಕಿನ ಕನಸು ಮೂರೇ ತಿಂಗಳಲ್ಲಿ ನುಚ್ಚು ನೂರು

Published : Apr 02, 2022, 10:51 PM IST
ನವ ವಿವಾಹಿತೆ ಸಾವು, ಲವ್ ಮ್ಯಾರೇಜ್ ಸುಂದರ ಬದುಕಿನ ಕನಸು ಮೂರೇ ತಿಂಗಳಲ್ಲಿ ನುಚ್ಚು ನೂರು

ಸಾರಾಂಶ

* ಯುಗಾದಿ ದಿನದಂದೇ ನವ ವಿವಾಹಿತೆ ಸಾವು, * ಸುಂದರ ಬದುಕಿನ ಕನಸು ಕೇವಲ ಮೂರೇ ಮೂರು ತಿಂಗಳಲ್ಲಿ ನುಚ್ಚು ನೂರಾಯ್ತು  * ಪತಿ ಮನೆಯವರು ವಿಷ ಕುಡಿಸಿ ಗಾನವಿ(27)ಯನ್ನ ಕೊಲೆ ಮಾಡಿರುವ ಆರೋಪ

ವರದಿ : ಆಲ್ದೂರು  ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಏ.02) : ಮದುವೆ ಬ್ಯಾಂದವ್ಯ ಮಧುರ ಎಂಬ ಮಾತು ಇದೆ. ಆ ಕ್ಷಣ ಮರೆಯುವ ಮೊದಲೇ ಹಣದ ದಾಹಕ್ಕೆ ಅತ್ತೆ ಮನೆಯವರು ಗಾನವಿ ಎಂಬ ಮುದ್ದು ಹುಡುಗಿನ್ನು ಬಲಿ ತೆಗದುಕೊಂಡಿದ್ದಾರೆ. ಗಾನವಿಗೆ ವಿಷ ಹಾಕಿ ಕೊಲೆ ಮಾಡಿದ್ದಾರೆ ಎನ್ನುವ  ಆರೋಪ ಮೃತಳ ಸಂಬಂಧಿಕರದ್ದು.

 ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ಕಾಫಿನಾಡಿನಲ್ಲಿ ನವವಿವಾಹಿತೆ ಬಲಿಯಾಗಿದ್ದು ಸಂತೋಷ-ನೆಮ್ಮದಿ ತರಬೇಕಿದ್ದ ಯುಗಾದಿ ಆಕೆಯ ಪೋಷಕರ ಬಾಳಲ್ಲಿ ಸೂತಕ ತಂದೊಡ್ಡಿದೆ. ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ: ಕಳೆದ ವರ್ಷವಷ್ಟೇ ಗಾನವಿಯನ್ನ ಮದುವೆಯಾಗಿದ್ದ ನಂದೀತ್ .

ಮದುವೆ ಆಗುವುದಾಗಿ ನಂಬಿಸಿ ಕೈ ಕೊಟ್ಟ, ಪ್ರಿಯಕರ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

ವರದಕ್ಷಿಣೆ ದಾಹ ಎನ್ನುವುದು ಇನ್ನು ಕೂಡ ಸಮಾಜದಿಂದ ಹೋಗುವ ಲಕ್ಷಣ ಕಾಣ್ಣುತ್ತಿಲ್ಲ, ಆಕೆಗೆ ಇನ್ನೂ 27  ಹರೆಯ ಬದುಕಿ ಬಾಳೆಬೇಕಾದ ವಯಸ್ಸುಅದು.ಆಕೆಯನ್ನು ಹೆಣವಾಗಿ ನೋಡವ ದುರಂತ ಹೆತ್ತವರಿಗೆ. ಆಕೆ ಹತ್ತಾರು ಕನಸುಗಳನ್ನ ಹೊತ್ತು ಕೇವಲ ವರ್ಷದ ಹಿಂದೆಯಷ್ಟೇ ಗಂಡನ ಮನೆಯ ಹೊಸಲನ್ನ ತುಳಿದಿದ್ದಳು. ಆದರೆ ಸುಂದರ ಬದುಕಿನ ಕನಸು ಕೇವಲ ಮೂರೇ ಮೂರು ತಿಂಗಳಲ್ಲಿ ನುಚ್ಚು ನೂರಾಯ್ತು. ನಾನು ಮದ್ವೆಯಾಗಿದ್ದು ಗಂಡನಲ್ಲ, ಬದಲಾಗಿ ದುಡ್ಡಿನ ಪಿಶಾಚಿ ಅನ್ನೋದು ಆಕೆಗೆ ಅರಿವಾಗತೊಡಗಿತ್ತು. ಯಾಕಂದ್ರೆ ಸಾಕಷ್ಟು ಹಣ, ಚಿನ್ನಾಭರಣ ಕೊಟ್ಟು ಮದ್ವೆಯಾದ್ರೂ ಆಗಾಗ ಹಣ ತರುವಂತೆ ಗಂಡನ ಮನೆಯವರು ಕೊಡ್ತಿದ್ದ ಟಾರ್ಚರ್ ಕಡಿಮೆಯಾಗಿರಲಿಲ್ಲ. ಇನ್ಮೇಲೆ ಮಾಡೋದ್ ಅಂತಾ ಕಿರುಕುಳಕ್ಕೆ ಬೇಸತ್ತು ಮದುವೆಯ ಬಳಿಕವೂ ಲಕ್ಷ ಲಕ್ಷ ಹಣ ಕೊಟ್ಟಿದ್ದೂ ಆಯ್ತು, ಇದೀಗ ಪಾಪಿಗಳು ಆಕೆಯ ಜೀವವನ್ನೇ ಬಲಿಪಡೆದಿದ್ದಾರೆ.

ಸಂತೋಷ-ನೆಮ್ಮದಿ ತರಬೇಕಿದ್ದ ಯುಗಾದಿ ಆಕೆಯ ಪೋಷಕರ ಬಾಳಲ್ಲಿ ಸೂತಕ ತಂದೊಡ್ಡಿದೆ. ಮೃತ ಗಾನವಿ ಬಾಳು  ಒಬ್ಬ ಗಿಡುಗನ ಕೈಗೆ ಸಿಕ್ಕಿ ಅರಳುವ ಮುನ್ನವೇ ಬಾಡಿ ಹೋಗಿದೆ. ಹೌದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿಯನ್ನ ಒಂದು ವರ್ಷದ ಹಿಂದೆಯಷ್ಟೇ ಮೂಡಿಗೆರೆ ತಾಲೂಕಿನ ಕಾರಬೈಲ್ ಗ್ರಾಮದ ನಂದಿಪ್ ಎಂಬಾತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಎಂಎ ಓದಿಕೊಂಡಿದ್ದ ಗಾನವಿ, ಬೆಂಗಳೂರಿನಲ್ಲಿ ಕೆಲಸ ಕೂಡ ಮಾಡ್ತಿದ್ಳು. ಅಲ್ಲಿಯೇ ನಂದೀಪ್ ನ ಪರಿಚಯ ಗಾನವಿಗೆ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಹೋಗಿತ್ತು.. ಕೊನೆಗೆ ಇಬ್ಬರು ಮನೆಯುವರು  ಮದುವೆಗೆ ಒಪ್ಪಿ ಅದ್ದೂರಿಯಾಗಿ ಗಾನವಿ ಮನೆಯವರು ಮಾಡಿಕೊಟ್ಟಿದರು. 

ಆದರೆ ಮದುವೆ ನಿಶ್ಚಯ ಆದ್ಮೇಲೆ ಕೆಲಸಕ್ಕೆ ಗುಡ್ ಬೈ ಹೇಳಿ, ಮುಂದೆ ಒಳ್ಳೆ ಜೀವನ ಸಿಗುತ್ತೆ ಅನ್ನೋ ಕನಸನ್ನ ಕಟ್ಟಿಕೊಂಡಿದ್ಳು. ಒಳ್ಳೆ ಹುಡುಗ ಅಂತಾ ಗಾನವಿ ಪೋಷಕರು ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ರು. ಆದ್ರೆ ಬರೀ ಮೂರೇ ತಿಂಗಳಲ್ಲಿ ನಂದೀಪನ ಅಸಲಿ ಮುಖ ಬಯಲಾಗ ತೊಡಗಿತು. ಪ್ರತಿನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದ ಪತಿರಾಯ, ಮದುವೆ ಸಮಯದಲ್ಲಿ ಕೊಟ್ಟಿರೋ ವರದಕ್ಷಿಣೆ ಸಾಕಾಗಿಲ್ಲ ಅಂತಾ ಪೀಡಿಸುತ್ತಿದ್ನಂತೆ. ಮಗಳನ್ನ ಕೊಟ್ಟಾಗಿದೆ, ಇನ್ ಏನ್ ಮಾಡೋದು ಅಂತ್ಹೇಳಿ ಕಳೆದ ನಾಲ್ಕು ತಿಂಗಳ ಹಿಂದೆ 2 ಲಕ್ಷ ಹಣವನ್ನ ನಂದೀದಪನಿಗೆ ಗಾನವಿ ಪೋಷಕರು ನೀಡಿದ್ದಾರೆ. 

ಆದ್ರೂ ಸುಮ್ಮನಾಗದ ಧನಪಿಶಾಚಿಗಳು, ಹಣಕ್ಕಾಗಿ ಬರೀ ಪೀಡಿಸೋದು ಮಾತ್ರವಲ್ಲ, ದೈಹಿಕವಾಗಿ ಗಾನವಿ ಮೇಲೆ ಹಲ್ಲೆ ಮಾಡುತ್ತಿದ್ದಾರಂತೆ. ಹೀಗಾಗಿ ಗಂಡ, ಆತನ ಮನೆಯವರಿಂದ ಬೇಸತ್ತ ಗಾನವಿ ಕಳೆದ ಮೂರು ತಿಂಗಳ ಮನೆಗೆ ಹೋಗಿ ನಾನ್ ಬಿಲ್ ಕುಲ್ ಗಂಡನ ಮನೆಗೆ ಹೋಗಲ್ಲ, ನನ್ನ ಸಾಯಿಸ್ತಾರೆ ಅಂತಾ ತವರು ಮನೆಗೆ ಹೋಗಿದ್ದಾಳೆ. ಅಲ್ಲಿಗೆ ಹೋದ್ರೂ ಬಿಡದ ಪಾಪಿ ನಂದೀಪ, ಇನ್ಮೇಲೆ ಸರಿಯಾಗಿ ನೋಡ್ಕೋಳ್ತೀನಿ ಅಂತಾ ಕರೆದುಕೊಂಡು ಬಂದಿದ್ನಂತೆ ಎಂದು ಮೃತ ಗಾನವಿ ತಂದೆ  ಲೋಕಪ್ಪಗೌಡ ತಿಳಿಸಿದ್ದಾರೆ. 

ಇಲಿ ಪಾಶಣ ಹಾಕಿ ಕೊಲೆ ಮಾಡಿರುವ ಆರೋಪ 
ಎಲ್ಲಾ ಸರಿ ಹೋಗುತ್ತೆ ಅಂತಾ ಗಾನವಿ ಪೋಷಕರು ಅಂದುಕೊಳ್ಳುವಾಗಲೇ ನಂದೀಪ್ ಮನೆಯವರೆಲ್ಲರೂ ಸೇರಿ ಮತ್ತೆ ಹಣ ತರುವಂತೆ ಕಿರುಕುಳ ನೀಡಿ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಇದನ್ನ ಗಾನವಿ ಮೊಬೈಲ್ನಲ್ಲಿ ಚಿತ್ರೀಕರಿಸಿಟ್ಟುಕೊಂಡಿರೋದು ಗೊತ್ತಾದ ಮೇಲೆ ಆಕೆಯಿಂದ ಮೊಬೈಲ್ ಕಿತ್ತಿಟ್ಟುಕೊಂಡು, ಕಳೆದ ಶನಿವಾರ ಇಲಿ ಪಾಶಣವನ್ನ ಪತಿ ನಂದೀಪ್, ಅತ್ತೆ ಮಾವ ಎಲ್ಲರೂ ಸೇರಿ ಗಾನವಿಗೆ ತಿನ್ನಿಸಿದ್ದಾರೆ. ಕೊನೆಗೆ ಆಕೆ ಸುಸ್ತಾದ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಬರುವ ನಾಟಕವಾಡಿದ್ದಾರೆ, ಮೂರು ದಿನ ಆದ ಮೇಲೆ ಗಾನವಿ ಮನೆಯವರಿಗೆ ವಿಚಾರ ತಿಳಿಸಿ, ಗಾನವಿಗೆ ಜಾಂಡೀಸ್ ಆಸ್ಪತ್ರೆಗೆ ಅಡ್ಮೀಟ್ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಮನೆಯಲ್ಲಿ ನಡೆದ ವಿಚಾರವನ್ನೆಲ್ಲಾ ಗಾನವಿ ಪೋಷಕರಿಗೆ ತಿಳಿಸಿದ್ದಾಳೆ, ಅಷ್ಟರಲ್ಲಿ ಆಸ್ಪತ್ರೆಯಿಂದ ಜೂಟ್ ಹೇಳಿದ ಪತಿ ನಂದೀಪ್ ಹಾಗೂ ಮಾವ ಚಂದ್ರೇಗೌಡನನ್ನ ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ..

ಗಾನವಿ ಮದುವೆಗೂ ಮುನ್ನ ಮತ್ತೊಬ್ಬಳ ಜೊತೆಗೆ ನಂದೀಪನ ಲವ್ !
ಗಾನವಿ ಮದುವೆಗೂ ಮುನ್ನ ಹುಡುಗಿಯೊಬ್ಬಳನ್ನ ಲವ್ ಮಾಡಿದ್ದ ನಂದೀಪನ ವಿಚಾರಗಳು ಗೊತ್ತಿಲ್ಲದೇ ಗಾನವಿ, ನಂದೀಪನನ್ನ ಕೈ ಹಿಡಿದಿದ್ಳು ಎನ್ನುವುದು ಈಗ ಹೊರ ಬಂದಿದೆ. ಚೆನ್ನಾಗಿ ಓದಿಕೊಂಡಿದ್ರೂ ಕೆಲಸಕ್ಕೂ ಗುಡ್ ಬೈ ಹೇಳಿ, ಸುಂದರ ಭವಿಷ್ಯದ ಕನಸನ್ನ ಕಂಡಿದ್ಳು. ಆದ್ರೆ ಸುಂದರ ಭವಿಷ್ಯದ ಕನಸನ್ನ ಕಂಡ ಸುಂದರಿ, ಗಿಡುಗನ ತೆಕ್ಕೆಗೆ ಸಿಕ್ಕ ಪರಿಣಾಮ ಇದೀಗ ತನ್ನ ಪ್ರಾಣವನ್ನೇ ಬಿಡಬೇಕಾಗಿದೆ. ಸಂತೋಷ-ನೆಮ್ಮದಿಯನ್ನ ತರಬೇಕಾಗಿದ್ದ ಯುಗಾದಿ ಗಾನವಿ ಪೋಷಕರು, ಸಂಬಂಧಿಕರಿಗೆ ಸೂತಕದ ಛಾಯೆ ಆಗಿ ಆವರಿಸಿದ್ದು ಮಾತ್ರ ನಿಜಕ್ಕೂ ದುರಂತ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!