ಇಷ್ಟವಿಲ್ಲದ ಮದುವೆ ಮಾಡಿದ್ದಕ್ಕೆ ಮನನೊಂದು ನವವಿವಾಹಿತೆ ಪ್ರಿಯಕರನೊಂದಿಗೆ ಆತ್ಮಹತ್ಯೆ!

By Ravi Janekal  |  First Published Apr 13, 2024, 11:13 AM IST

ಒಲ್ಲದ ಗಂಡನೊಂದಿಗೆ ಮದುವೆ ಮಾಡಿದ್ದಕ್ಕೆ ನವವಿವಾಹಿತೆ ಮನನೊಂದು ಮದುವೆಯಾದ ತಿಂಗಳಲ್ಲೇ ಪ್ರಿಯಕರನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡ ದುರ್ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನೆರೆಗಲ್ ಪಟ್ಟಣದ ಹೊರವಲಯದಲ್ಲಿ ನಡೆದಿದೆ.


ಗದಗ (ಏ.13): ಒಲ್ಲದ ಗಂಡನೊಂದಿಗೆ ಮದುವೆ ಮಾಡಿದ್ದಕ್ಕೆ ನವವಿವಾಹಿತೆ ಮನನೊಂದು ಮದುವೆಯಾದ ತಿಂಗಳಲ್ಲೇ ಪ್ರಿಯಕರನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡ ದುರ್ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನೆರೆಗಲ್ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಲಲಿತಾ ಹಲಗೇರಿ(26) ಮೃತ ಮಹಿಳೆ, ಅಪ್ಪಣ್ಣ ಗೊರಗಿ(28) ಮೃತ ಪ್ರಿಯಕರ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಯಾಗುವುದಕ್ಕೆ ಯುವತಿ ಕುಟುಂಬದವರು ಒಪ್ಪಿಲ್ಲವೆಂದು ಹೇಳಲಾಗಿದೆ. ಮನೆಯವರ ಒತ್ತಾಯಕ್ಕೆ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿದ್ದ ಲಲಿತಾ, ಆದರೆ ಪ್ರಿಯಕರನನ್ನು ಬಿಟ್ಟಿಲಾಗದೆ ಪ್ರಿಯಕರನ ಜೊತೆಗೆ ಬಂದಿದ್ದಾಳೆ. ಜೋಡಿಗಳಿಬ್ಬರು ಗಜೇಂದ್ರಗಡ ಪಟ್ಟಣದ ಹೊರವಲಯದ ಜಮೀನೊಂದಕ್ಕೆ ಬಂದಿದ್ದಾರೆ. ಮೊದಲಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಬಳಿಕ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ನೆರೆಗಲ್ ಪೊಲೀಸರು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.

Tap to resize

Latest Videos

ಬೆಂಗಳೂರು: ನಾಯಂಡಹಳ್ಳಿ ಮೇಲ್ಸೇತುವೆಯಿಂದ ಜಿಗಿದು ನವವಿವಾಹಿತನ ಆತ್ಮಹತ್ಯೆ

click me!