ಸೊಸೆ ತೀರಿಕೊಂಡು ಕೆಲವೇ ದಿನದಲ್ಲಿ ಅತ್ತೆಯೂ ಶವವಾಗಿ ಪತ್ತೆ/ ಕೇರಳದಲ್ಲಿ ಇಬ್ಬರು ಮಹಿಳೆಯರ ದುರಂತ ಅಂತ್ಯ/ ಕೊಲೆ ಮಾಡಲಾಗಿದೆ ಎಂದು ಸೊಸೆ ಕುಟುಂಬದವರ ಆರೋಪ
ತಿರುವನಂತಪುರ(ಜ. 27) 24 ವರ್ಷದ ಯುವತಿ ಮನೆಯಲ್ಲಿ ಹೆಣವಾಗಿ ಸಿಕ್ಕಿದ್ದಳು. ಇದಾಗಿ ಕೆಲವೇ ದಿನದ ನಂತರ ಆಕೆಯ ಅತ್ತೆಯ ಶವ ಸಹ ಪತ್ತೆಯಾಗಿದೆ.
ಶಾಮಲಾ ನಾಪತ್ತೆಯಾದ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಶೋಧ ನಡೆಸಿದಾಗ ಮನೆ ಹತ್ತಿರದ ಕೋಳಿ ಫಾರ್ಂ ನಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಕಲ್ಲಂಬಾಳಂ ಪೊಲೀಸರು ತನಿಖೆ ನಡೆಸಿದಾಗ ಶ್ಯಾಮಲಾ ಖಿನ್ನತೆಯಿಂದ ಬಳಲುತ್ತಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿತ್ತು.
undefined
ಸೊಸೆ ಅಥಿರಾ ಸಾವಿನಿಂದ ಅತ್ತೆ ನೊಂದಿದ್ದಳು ಇದೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಯಿತು. ಆದರೆ ಘಟನೆ ಕೆಲವು ಆರೋಪಗಳ ನಂತರ ಬೇರೆ ತಿರುವನ್ನು ಪಡೆದುಕೊಂಡಿತು.
ಕಡೂರು; ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಹೆಣ್ಣು ಹೆತ್ತವರು ನೋಡಲೇಬೇಕಾದ ಸ್ಟೋರಿ!
ಎಂಬಿಎ ಓದಿಕೊಂಡಿದ್ದ ಅಥಿರಾ ಮನೆಯ ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಸಾವಿಗೂ ಮುನ್ನ ಕೇವಲ 28 ದಿನದ ಹಿಂದೆ ಶರತ್ ಎಂಬಾತನನ್ನು ವಿವಾಹವಾಗಿದ್ದರು. ಈ ಶರತ್ ಶ್ಯಾಮಲಾ ಅವರ ಪುತ್ರ. ಸೊಸೆ ಸಾವಿಗೆ ಗುರಿಯಾಗುವ ಸಂದರ್ಭ ಅತ್ತೆ ಆಕೆಯ ಮನೆ ಸಮೀಪವೇ ವಾಸವಿದ್ದರು. ವಿದೇಶದಲ್ಲಿದ್ದ ಶರತ್ ಕುಟುಂಬದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ. ಹೆಂಡತಿ ಮತ್ತು ತಾಯಿ ಬೇರೆ ಬೇರೆ ಮನೆಯಲ್ಲಿ ಇದ್ದರು.
ಆದರೆ ಅಥಿರಾ ಸಾವಾಗುವ ದಿನ ಶರತ್ ವಿದೇಶದಿಂದ ಬಂದಿದ್ದ. ಆರೋಗ್ಯ ಸರಿ ಇಲ್ಲದ ತಂದೆಯನ್ನು ಕಾಣಲು ಆಗಮಿಸಿದ್ದ. ಅಥಿರಾ ಸಾವಿನ ಹಿಂದೆ ಹಲವು ಅನುಮಾನಗಳಿವೆ ಎಂದು ತವರು ಮನೆಯವರು ಆರೋಪ ಮಾಡಿದ್ದಾರೆ. ಡಿಜಿಪಿ ಮತ್ತು ಸಿಎಂಗೆ ಕುಟುಂಬ ಮನವಿ ಮಾಡಿಕೊಂಡಿದ್ದು ವಿಶೇಷ ತನಿಖೆಗೆ ಒತ್ತಾಯ ಮಾಡಿದ್ದಾರೆ. ಪೊಲೀಸರ ತನಿಖೆ ಮತ್ತು ಪೋಸ್ಟ್ ಮಾರ್ಟ್ಂ ವರದಿ ಇದೊಂದು ಆತ್ಮಹತ್ಯೆ ಎಂದು ಹೇಳಿದ್ದರೂ ಕುಟುಂಬ ಒಪ್ಪಿಕೊಳ್ಳಲು ಸಿದ್ಧವಿಲ್ಲ.
ಸೋಶಿಯಲ್ ಮೀಡಿಯಾದಲ್ಲಿಯೂ ಘಟನೆ ಚರ್ಚೆಯಾಗಿದ್ದು ಅಥಿರಾಳಿಗೆ ಅತ್ತೆ ಶಾಮಲಾ ಹಿಂಸೆ ನೀಡುತ್ತಿದ್ದಳು. ಇದೇ ಕಾರಣಕ್ಕೆ ಆಕೆ ದುಡುಕಿನ ನಿರ್ಧಾರ ಮಾಡಿದಳು ಎಂಬ ವಾದ ಮಂಡಿಸಿದ್ದಾರೆ.
ಪೊಲೀಸರಿಗೆ ಘಟನೆಗೆ ಇನ್ನು ಸ್ಪಷ್ಟ ಕಾರಣ ಸಿಕ್ಕಿಲ್ಲ. ಒಂದು ಕಡೆ ಶಾಮಲಾ ಹಿಂಸೆಯಿಂದ ಸೊಸೆ ಸಾವನ್ನಪ್ಪಿದ್ದಾಳೆ ಎಂದು ಹೇಳುತ್ತಿದ್ದರೆ ಇನ್ನೊಂದು ಕೋನದಲ್ಲಿಯೂ ತನಿಖೆ ನಡೆಯುತ್ತಿದೆ.