Matrimonial Fraud : 'ಬುದ್ಧಿವಂತ'  6 ಮದುವೆ ಆಗಿ ನಾನವನಲ್ಲ..ನಾನವನಲ್ಲ ಅಂತಾನೆ ಕಿರಾತಕ!

By Suvarna NewsFirst Published Dec 22, 2021, 4:35 PM IST
Highlights

* ಉಪೇಂದ್ರ ಬುದ್ಧಿವಂತ  ಸಿನಿಮಾದ  ಕತೆ ಇಲ್ಲಿದೆ

*  ಆರೇಳು ಮದುವೆಯಾಗಿ ನಾನವನಲ್ಲ ನಾನವನಲ್ಲ ಅಂತಿರೋ ಆರೋಪಿ

* ಡಿವೋರ್ಸ್ ಆಗಿದೆ.. ಪ್ಲೀಸ್ ಮದುವೆಯಾಗಿ ಅಂತಾ ಡವ್ ಶುರು ಮಾಡ್ತಾನೆ

* ಮದುವೆ ಮಾಡಿಕೊಂಡ ಮೂರೇ ತಿಂಗಳಿಗೆ ಲಕ್ಷ ಲಕ್ಷ ಹಣ ದೋಚಿ ಓಡಿ ಹೋಗ್ತಾನೆ

ಬೆಂಗಳೂರು(ಡಿ. 22) ಮ್ಯಾಟ್ರಿಮೋನಿ(Matrimonial  Site) ಸೈಟ್ ನಲ್ಲಿ ಅಪ್ ಡೇಡ್ ಮಾಡಿಕೊಂಡು ಎರಡನೇ ಮದುವೆ (Marriage) ಎನ್ನುತ್ತ ಈ  ಚತುರ  ಎಏಳು ಮದುವೆಯಾಗಿದ್ದಾನೆ. ಮದುವೆ ಮಾಡಿಕೊಂಡು ಮೂರೇ ತಿಂಗಳಲ್ಲಿ ಹಣದೊಂದಿಗೆ (Money) ಪರಾರಿಯಾಗುವುದು ಈತನ ವಾಡಿಕೆ!

ಶಾದಿ ಡಾಟ್ ಕಾಮ್ ಮೂಲಕ ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಮೊದಲನೇ ಪತ್ನಿ ಜೊತೆ ಡಿವೋರ್ಸ್ ಆಗಿದೆ.. ಎರಡನೆ ಮದುವೆ ಮಾಡಿಕೊಳ್ಬೇಕು ಅಂತಾ  ನಂಬಿಸಿ ಬಲೆ ಬೀಸುತ್ತಿದ್ದ. ಸಿಂಪಲ್ ಆಗಿ ಮದುವೆ ಮಾಡಿಕೊಡಿ ಅಂತಾ ಮದುವೆಗೆ ಫ್ಯಾಮಿಲಿ ಮಾತ್ರ ಕರೆದುಕೊಂಡು ಬಂದಿದ್ದ. ತಂದೆ ತಾಯಿ ಜೊತೆ ಮಾತನಾಡಿ  ಮದುವೆ ಮಾಡಿಕೊಳ್ಳುತ್ತಿದ್ದ. ನಂತರ ಈತನ ರಂಗಿನಾಟ ಗೊತ್ತಾಗುತ್ತಿತ್ತು.

Latest Videos

Conman Sukesh Crime World: ನಟಿಯರ ಭೇಟಿಗೆ ಅಧಿಕಾರಿಗಳಿಗೆ ಕೋಟಿ ಕೋಟಿ ಕೊಟ್ಟಿದ್ದ!

ಸೈಯದ್ ತಸ್ಕೀನ್ ಅಹ್ಮದ್ ಎಂಬಾತನ ವಿರುದ್ಧ ಪತ್ನಿ ರಿಹಾನಾ ಬೇಗಂ ಆರೋಪ ಮಾಡಿದ್ದಾರೆ. ನನ್ನ ಮನೆ ನಿರ್ಮಾಣ ಕೆಲಸ ನಡೆಯುತ್ತಿದೆ ಎಂದು ನಂಬಿಸಿ ಪತ್ನಿ ಮನೆಯಲ್ಲೇ ಉಳಿದುಕೊಂಡಿದ್ದ. ಮದುವೆಯಾಗಿ ತಿಂಗಳು ಕಳೆದ ಮೇಲೆ ನಾನು ಬಿಸಿನಸ್ ಮಾಡಬೇಕು ಹಣ ಬೇಕು ಎಂದು ಪಡೆದುಕೊಳ್ಳುತ್ತಿದ್ದ.

ಅಳಿಯ ಎಂಬ  ಕಾರಣಕ್ಕೆ ರಿಹಾನಾ ಬೇಗಂ ಕುಟುಂಬ ಲಕ್ಷ ಲಕ್ಷ ಹಣ ನೀಡಿತ್ತು. ನಂತರ ಮತ್ತೆ ಒಂದು ವಾರ ಬಿಟ್ಟು ಲಕ್ಷ ಮತ್ತೆ ಒಂದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಆಗಲೂ ಸರಿ ಅಂತಾ ಮನೇಲಿದ್ದ ಆಭರಣವನ್ನು ಪತ್ನಿ ತೆಗೆದು ಕೊಟ್ಟಿದ್ದರು. ಅಷ್ಟಾದ್ರೂ ಮತ್ತೆ ಹಣಕ್ಕಾಗಿ  ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದಾಗ ಮೂರೇ ತಿಂಗಳಿಗೆ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾನೆ.

ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದ  ಗಂಡ ಎಲ್ಲಿ ಹೋದ ಎಂದು ವಿಚಾರಿಸಲು ತೆರಳಿದಾಗ ಅಸಲಿ ಬಣ್ಣ ಬಯಲಾಗಿದೆ. ನೀನು ಆರನೇ ಮದುವೆ ಅಂತ ಅಕ್ಕ ಪಕ್ಕದವರು ಹೇಳಿದಾಗ ಕುಟುಂಬ ಶಾಕ್ ಗೆ ಒಳಗಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.

ವಂಚನೆ ಹೇಗೆ:   ಗಮನ ಸೆಳೆಯುವಂತಹ ಪೋಟೋಗಳನ್ನು ಮ್ಯಾಟ್ರಿಮೋನಿ ಸೈಟ್ ಗೆ ಅಪ್ ಲೋಡ್ ಮಾಡುತ್ತಿದ್ದ.  ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ವಿಚ್ಛೇದಿತ ಮಹಿಳೆಯರನ್ನು ಪರಿಚಯಿಸಿಕೊಂಡು ವಿವಾಹ  ಮಾಡಿಕೊಳ್ಳುತ್ತೇನೆ ಎಂದು ನಂಬಿಸುತ್ತಿದ್ದ. ಈ ರೀತಿ ಹುಡುಕುತ್ತಿದ್ದಾಗ ದೂರುದಾರ ಮಹಿಳೆಯ ಪರಿಚಯವಾಗಿದೆ. ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿತ್ತು.

ಇದೇ ರೀತಿ ಹಲವು ಮಹಿಳೆಯರನ್ನು ವಂಚಿಸಿದ್ದು ಈಗ ಗೊತ್ತಾಗಿದೆ. ಮದುವೆ ಮಾಡಿಕೊಂಡು ಪತ್ನಿ ಮನೆಯವರಿಂದ ಹಣ ತೆಗೆದುಕೊಳ್ಳುವುದು. ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುವುದು. ಕೊಡದಿದ್ದಾಗ ಎಸ್ಕೇಪ್ ಆಗುವುದು ಈತನ ಚಾಳಿ. 

ಕಾರಿಗೆ ಬೆಂಕಿ ಎಂದು ಹಣ ಸುಲೀತಾರೆ:  ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾತ್ರಿ ಹೊತ್ತಲ್ಲಿ ಮಾತ್ರವಲ್ಲ ಹಗಲಿನಲ್ಲಿ, ಅದರಲ್ಲೂ ವಾಹನ ದಟ್ಟಣೆ ವೇಳೆಯಲ್ಲಿ ಸಂಚರಿಸುವವರನ್ನು ಯಾಮಾರಿಸಿ ಹಣ ಪೀಕಿಸುವ ವಂಚಕರ ಜಾಲ ಸಕ್ರಿಯವಾಗಿರುವ ಬಗ್ಗೆ ದ.ಕ. ಮೂಲದ ಸುಳ್ಯದ 62ರ ಹರೆಯದ ಸಂತ್ರಸ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ(Social Media) ಬರೆದುಕೊಂಡಿದ್ದರು. ಈ ಮೂಲಕ ಈ ಹೆದ್ದಾರಿಯಲ್ಲಿ(Highway) ಸಂಚರಿಸುವಾಗ ಸಾಕಷ್ಟು ಮುಂಜಾಗ್ರತೆ ಹಾಗೂ ಎಚ್ಚರಿಕೆ ವಹಿಸುವಂತೆ ವಿನಂತಿ ಮಾಡಿಕೊಂಡಿದ್ದರು.

ಮಹಿಳೆಯಿಂದಲೇ ವಂಚನೆ:   60 ವರ್ಷದ ವಿಧುರರೊಬ್ಬರಿಗೆ ಎರಡನೇ ಮದುವೆ(Marriage) ಆಗುವುದಾಗಿ ನಂಬಿಸಿ ಮದುವೆ ಆಗುವುದಕ್ಕೆ ತಂದಿದ್ದ ತಾಳಿ, ಕಾಲುಂಗರದ ಜೊತೆಗೆ ಮಹಿಳೆಯೊಬ್ಬಳು(Woman) ಪರಾರಿ ಆಗಿದ್ದರು..

ಶಿವಮೊಗ್ಗ(Shivamogga) ಜಿಲ್ಲೆಯ ಹೊಳೆಹೊನ್ನೂರು(Holehonnuru)ನಂಜುಂಡಪ್ಪ (60) ಮದುವೆಯಾಗಿ 30 ವರ್ಷವಾಗಿದೆ. ಒಂದು ಗಂಡು ಎರಡು ಹೆಣ್ಣು ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ಈ ನಡುವೆ 7 ತಿಂಗಳ ಹಿಂದೆ ನಂಜುಂಡಪ್ಪನ ಪತ್ನಿ ಅನಾರೋಗ್ಯದಿಂದ(Illness) ಮೃತಪಟ್ಟಿದ್ದರು(Death). ಆ ಬಳಿಕ ನಂಜುಂಡಪ್ಪನಿಗೆ ಒಂಟಿತನ ಕಾಡೋಕೆ ಶುರುವಾಗಿತ್ತು. ಹೀಗಾಗಿ ಮತ್ತೊಂದು ಮದುವೆಯಾಗಲು ನಿರ್ಧರಿಸಿದ ನಂಜುಂಡಪ್ಪ. ಶಿವಮೊಗ್ಗದ ಕನ್ನಡ ಮ್ಯಾಟ್ರಿಮೊನಿಯಲ್ಲಿ(Kannada Matrimony) ನೋಂದಣಿ ಮಾಡಿಕೊಂಡಿದ್ದರು. ಆ ಬಳಿಕ ಬೆಂಗಳೂರಿನ(Bengaluru) ಯಲಹಂಕದ ಚಂದ್ರಿಕಾ ಎಂಬ ಮಹಿಳೆ ನಂಜುಂಡಪ್ಪನನ್ನ ಒಪ್ಪಿಕೊಂಡು ಮದುವೆಯಾಗಲು ನಿರ್ಧರಿಸಿದ್ದು ಆಭರಣದೊಂದಿಗೆ ಪರಾರಿಯಾಗಿದ್ದರು.

 

click me!