ಬೆಂಗಳೂರಿನ ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಅವರ ಮನೆಯಲ್ಲಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮದ್ಯದಲ್ಲಿ ಔಷಧ ಬೆರೆಸಿ ಕುಡಿಸಿ ಕಳ್ಳತನ ಮಾಡಿದ್ದ ನೇಪಾಳಿ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು (ನ.12): ಸಿಲಿಕಾನ್ ಸಿಟಿ ಬೆಂಗಳೂರಿನ ಸಂಪಿಗೆ ಥಿಯೇಟರ್‌ನ ಮಾಲೀಕನ ನಾಗೇಶ್ ಅವರಿಗೆ ಮದ್ಯದಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸಿಕೊಟ್ಟು ಕುಡಿಸಿ, ನಂತರ ಅವ್ರ ಜಯನಗರದ ಮನೆಯಲ್ಲಿದ್ದ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಸಂಪಿಗೆ ಥಿಯೇಟರ್ ನ ಮಾಲೀಕನ ನಾಗೇಶ್ ಅವರ ಮನೆ ದೊಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ನೇಪಾಳಿ ಗ್ಯಾಂಗ್‌ನ ಈ ಆರೋಪಿಗಳು ಸುಮಾರು 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಇನ್ಸ್ಪೆಕ್ಟರ್ ದೀಪಕ್ ಅಂಡ್ ಗ್ಯಾಂಗ್ ಆರೋಪಿಗಳನ್ನು ಬಂಧಿಸಿದ್ದಾರೆ. ಚಿನ್ನಾಭರಣ ದೋಚಲು ಎರಡು ವರ್ಷದಿಂದ ಕಾದಿದ್ದ ಗ್ಯಾಂಗ್ ಕೊನೆಗೆ ಮನೆ ಮಾಲೀಕ ನಾಗೇಶ್ ಕುಟುಂಬ್ಥರು ಹೊರಗಡೆ ಹೋಗಿದ್ದಾಗ ಕೃತ್ಯ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರಿಂದ ಮೂವರು ಆರೋಪಿಗಳ ಬಂಧಿಸಿದ್ದಾರೆ. ಪ್ರಕಾಶ್ ಶಾಹಿ, ಅಪಿಲ್ ಶಾಹಿ ಜಗದೀಶ್ ಶಾಹಿ ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಗಂಡನಿಲ್ಲದ ಆಂಟಿಯ ಸಂಬಂಧಕ್ಕೆ ಸ್ನೇಹಿತನನ್ನೇ ಪರಲೋಕ ಸೇರಿಸಿದ ಫ್ರೆಂಡ್!
ಅಕ್ಟೊಬರ್ 2 ರಂದು ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ಎರಡು ವರ್ಷದ ಹಿಂದೆ ನಾಗೇಶ್ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮಾಲೀಕ ನಾಗೇಶ್ ಬಳಿ ನೇಪಾಳಿ ದಂಪತಿ ನಂಬಿಕೆ ಬರುವಂತೆ ನಾಟಕ ಮಾಡಿಕೊಂಡು ಬಂದಿದ್ದರು. ಆದರೆ, ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದ ರಾತ್ರಿ ಈ ನೇಪಾಳಿ ದಂಪತಿ ತಮ್ಮ ಮಾಲೀಕ ನಾಗೇಶ್ ಮದ್ಯಪಾನ ಮಾಡುವ ವೇಳೆ ಮದ್ಯದಲ್ಲಿ ಬೆಂಜೊಡೈನ್ ಎಂಬ ಮತ್ತು ಬರುವ ಪೌಡರ್ ಮಿಕ್ಸ್ ಮಾಡಿ ಕೊಟ್ಟಿದ್ದಾರೆ.
ಇದರ ನಂತರ ಮಾಲೀಕ ನಾಗೇಶನ ಮನೆಯ ಬಳಿ ಮೂವರನ್ನ ಬೈಕ್‌ನಲ್ಲಿ ಕರೆಸಿಕೊಂಡಿದ್ದಾರೆ. ಮನೆಗೆ ಬಂದ ಕಳ್ಳರಿಗೆ ಮನೆಯಲ್ಲಿದ್ದ ಒಂದುವರೆ ಕೋಟಿಗೂ ಅಧಿಕ 2 ಕೆ.ಜಿ. ಚಿನ್ನಾಭರಣ, 2 ಲಕ್ಷ ರೂಪಾಯಿ ನಗದು ಹೊತ್ತೊಯ್ದಿದ್ದರು. ಇದೀಗ ಬೆಂಗಳೂರು ಪೊಲೀಸರು ಸಿಸಿ ಟಿವಿ ಹಾಗೂ ಮೊಬೈಲ್ ನೆಟ್ವರ್ಕ್ ಆಧರಿಸಿ ಮುಂಬೈನಲ್ಲಿ ಆರೋಪಿಗಳ ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ದಂಪತಿ ಗಣೇಶ್ ಹಾಗೂ ಗೀತಾಳಿಗೆ ಹುಡುಕಾಟ ನಡೆಸಿದ್ದಾರೆ.