Sandeep Lamichhane ಅತ್ಯಾಚಾರ ಆರೋಪ, ನೇಪಾಳ ಕ್ರಿಕೆಟಿಗನಿಗೆ 7 ದಿನ ಪೊಲೀಸ್ ಕಸ್ಟಡಿ!

Published : Oct 10, 2022, 06:17 PM ISTUpdated : Oct 10, 2022, 06:20 PM IST
Sandeep Lamichhane ಅತ್ಯಾಚಾರ ಆರೋಪ, ನೇಪಾಳ ಕ್ರಿಕೆಟಿಗನಿಗೆ 7 ದಿನ ಪೊಲೀಸ್ ಕಸ್ಟಡಿ!

ಸಾರಾಂಶ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ ಐಪಿಎಲ್ ಮಾಜಿ ಕ್ರಿಕೆಟಿಗ, ನೇಪಾಳದ ಯುವ ಸ್ಪಿನ್ನರ್ ಸಂದೀಪ್ ಲಮಿಚ್ಚಾನೆಗೆ ತೀವ್ರ ಸಂಕಷ್ಟ ತಂದಿದೆ. ಅಕ್ಟೋಬರ್ 6 ರಂದು ಅರೆಸ್ಟ್ ಆಗಿದ್ದ ಸಂದೀಪ್ ಇದೀಗ 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಕಠ್ಮಂಡು(ಅ.10): ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದ್ದ ಯುವ ಸ್ಪಿನ್ನರ್ ಸಂದೀಪ್ ಲಮಿಚ್ಚಾನೆ ಒಂದರ ಮೇಲೊಂದರಂತೆ ಸಂಕಷ್ಟ ಎದುರಾಗಿದೆ. 17ರ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಅಕ್ಟೋಬರ್ 6 ರಂದು ಸಂದೀಪ್ ಲಮಿಚಾನೆಯನ್ನು ನೇಪಾಳ ಪೊಲೀಸರು ಬಂಧಿಸಿದ್ದರು. ಇಂದು ಪೊಲೀಸರು ಲಮಿಚಾನೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯ ಸಂದೀಪ್ ಲಮಿಚಾನೆಯನ್ನು 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಾಥಮಿಕ ಸಾಕ್ಷ್ಯಗಳು ಸಂದೀಪ್ ವಿರುದ್ಧವಾಗಿದೆ.  

ಆಗಸ್ಟ್ 21 ರಂದು ಸಂದೀಪ್ ಲಮಿಚ್ಚಾನೆ 17ರ ಹರೆಯದ ಅಪ್ರಾಪ್ತೆಯನ್ನು ಕರೆದುಕೊಂಡು ನೇಪಾಳದ ಹಲವು ಭಾಗ ಸುತ್ತಾಡಿದ್ದರು. ಅಪ್ರಾಪ್ತೆ ಜೊತೆ ಕಠ್ಮಾಂಡು, ಭಕ್ತಪುರ್ ಪ್ರಯಾಣ ಮಾಡಿದ ಲಮಿಚ್ಚಾನೆ  ರಾತ್ರಿ ವೇಳೆ ಕಠ್ಮಂಡುವಿಗೆ ಆಗಮಿಸಿದ್ದರು. ಸಿನಾಮಂಗಲ್ ಹೋಟೆಲ್‌ಗೆ ಕರೆದುಕೊಂಡು ಹೋದ ಲಮಿಚ್ಚಾನೆ ಉಳಿದುಕೊಳ್ಳಲು ರೂಮ್ ಬುಕ್ ಮಾಡಿದ್ದಾರೆ. ಅದೇ ರಾತ್ರಿ ಲಮಿಚ್ಚಾನೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಪ್ರಾಪ್ತೆ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಹಲವು ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದೃಶ್ಯಗಳು ಲಮಿಚ್ಚಾನೆ ವಿರುದ್ಧವಾಗಿದೆ.

ರನೌಟ್ ಮಾಡಲು ಹೋಗಿ 4 ರನ್ ಬಿಟ್ಟು ಕೊಟ್ಟು, ಅಂಪೈರ್ ಜತೆ ವಾದ ಮಾಡಿದ ಸಿರಾಜ್‌..!

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸೆಗಿದ ಆರೋಪ ಎದುರಿಸುತ್ತಿರುವ ನೇಪಾಳ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಂದೀಪ್‌ ಲಮಿಚ್ಚಾನೆ ಗುರುವಾರ ತವರಿಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಕಳೆದ ತಿಂಗಳು ಪ್ರಕರಣ ದಾಖಲಾದಾಗ ಅವರು ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿದ್ದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುತ್ತಿದ್ದರು. ಟೂರ್ನಿ ಮುಗಿದ ಬಳಿಕ ಅವರು ನೇಪಾಳಕ್ಕೆ ವಾಪಸಾಗಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಸಂದೀಪ್‌ ವಿಂಡೀಸ್‌ನಲ್ಲೇ ಉಳಿದ ಕಾರಣ ಅವರ ಮೇಲೆ ಬಂಧನ ವಾರೆಂಟ್‌ ಜಾರಿ ಮಾಡಲಾಗಿತ್ತು.  ತಮ್ಮ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ತಾವು ಕಾಠ್ಮಂಡುಗೆ ಆಗಮಿಸುತ್ತಿರುವ ವಿಮಾನದ ವಿವರಗಳನ್ನು ಹಾಕಿ, ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದರು. ಅವರು ಆಗಮಿಸುತ್ತಿದ್ದಂತೆ ಏರ್‌ಪೋರ್ಚ್‌ನಲ್ಲೇ ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಕರೆದೊಯ್ದರು.

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ನೇಪಾಳ ಕ್ರಿಕೆಟ್‌ ತಂಡದ ನಾಯಕ ಸಂದೀಪ್‌ ಲಮಿಚ್ಚಾನೆ ಅವರನ್ನು ನೇಪಾಳ ಕ್ರಿಕೆಟ್‌ ಮಂಡಳಿ ಅಮಾನತುಗೊಳಿಸಿದೆ. ಆ.21ರಂದು ನಡೆದಿದೆ ಎನ್ನಲಾದ ಅತ್ಯಾಚಾರದ ಬಗ್ಗೆ ಇಲ್ಲಿನ ಗೌಶಾಲಾ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿ ಎಫ್‌ಐಆರ್‌ ದಾಖಲಾದ ಬಳಿಕ ಸಂದೀಪ್‌ ವಿರುದ್ಧ ಬಂಧನ ವಾರೆಂಟ್‌ ಜಾರಿ ಮಾಡಲಾಗಿತ್ತು.  ಇದರ ಬೆನ್ನಲ್ಲೇ ನೇಪಾಳ ಕ್ರಿಕೆಟ್ ಮಹತ್ವದ ನಿರ್ಧಾರ ಪ್ರಕಟಿಸಿತ್ತು. ಲಮಿಚ್ಚಾನೆಯನ್ನು ನೇಪಳಾ ಕ್ರಿಕೆಟ್ ನಾಯಕತ್ವದಿಂತ ವಜಾ ಮಾಡಲಾಗಿತ್ತು.

ICC T20 World Cup ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು..!

ಯುವ ಕ್ರಿಕೆಟಿನಾಗಿ ಮಿಂಚಿದ ಸಂದೀಪ್ ಲಮಿಚ್ಚಾನೆ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಮೊದಲ ನೇಪಾಳ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸ್ಪಿನ್ ಪ್ರತಿಭೆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸಲು ಸಜ್ಜಾಗಿದ್ದ ಸಂದೀಪ್ ಕರಿಯರ್ ಇದೀಗ ಸಂಕಷ್ಟದಲ್ಲಿ ತಳ್ಳಲ್ಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!