35ರ ಆಂಟಿಗೆ ಯುವಕನ ಮೇಲೆ ವ್ಯಾಮೋಹ, ಸಿಹಿ ಮುತ್ತಿನ ಮತ್ತಿನಲ್ಲಿ ನಡೆಯಿತಾ ದುರಂತ?

By Chethan Kumar  |  First Published Sep 21, 2024, 10:25 AM IST

35ರ ಹರೆಯದ ಆಂಟಿಗೆ 24ರ ಹರೆಯುದ ಯುವಕನ ಮೇಲೆ ಪ್ರೀತಿ ಶುರುವಾಗಿತ್ತು. ವರ್ಷಗಳಿಂದ ಇವರ ನಡುವಿನ ಸಂಬಂಧ ಗಾಢವಾಗಿತ್ತು. ಓಯೋದಲ್ಲಿ ಹೂಟೆಲ್ ರೂಂ ಬುಕ್ ಮಾಡಿದ ಈ ಜೋಡಿ ನಗು ನುಗತ್ತಾ ಬಾಗಿಲು ಕ್ಲೋಸ್ ಮಾಡಿದೆ. ಆದರೆ ಹೊಟೆಲ್‌ನಿಂದ ಹೊರಬಂದಿದ್ದು ಒಬ್ಬರು ಮಾತ್ರ.


ಲಖನೌ(ಸೆ.21) ಆಂಟಿ ಪ್ರೀತಿಯ ಬಲೆಯಲ್ಲಿ 24ರ ಹರೆಯದ ಯುವಕ ಬಿದ್ದಿದ್ದ. ಪ್ರೀತಿಯ ತಂಗಾಳಿಗೆ, ಪಾರ್ಕ್, ಪ್ರವಾಸಿ ತಾಣಗಳ ಸುತ್ತಾಟ ಮೈಬಿಸಿ ಏರಿಸಿತ್ತು. ತಕ್ಷಣವೇ ಒಯೋ ರೂಮ್ ಬುಕ್ ಮಾಡಿದ ಈ ಜೋಡಿ ನೇರವಾಗಿ ರೂಂಗೆ ತೆರಳಿದೆ. ನಗು ನಗುತ್ತಲೇ ರೂಂ ಬಾಗಿಲು ಮುಚ್ಚಿದೆ. ಕೆಲ ಹೊತ್ತಿನ ಬಳಿಕ ಹೊಟೆಲ್ ರೂಂನಿಂದ ಹೊರಬಂದ ಯುವಕ ಪೊಲೀಸ್ ಠಾಣೆಗೆ ತೆರಳಿದ ಶರಣಾಗಿದ್ದಾನೆ. ಇತ್ತ ಪೊಲೀಸರು ಓಡೋಡಿ ಹೊಟೆಲ್‌ಗೆ ಆಗಮಿಸಿದ್ದಾರೆ. ಬಳಿಕ 35ರ ಹರೆಯದ ಆಂಟಿಯ ಮೃತದೇಹ ಹೊರತೆಗೆದ ಘಟನೆ ಉತ್ತರ ಪ್ರದೇಶದ ಸೊರಾನ್ ಪಟ್ಟಣದ ಬಳಿ ನಡೆದಿದೆ.

35 ವರ್ಷದ ಮಹಿಳೆ ಸುಮನ್ ದೇವಿಗೆ 24ರ ಹರೆಯದ ವಿವೇಕ್ ಕುಮಾರ್ ಜೊತೆ ಪ್ರೀತಿಯಾಗಿತ್ತು. ಈ ಸುಮನ್ ದೇವಿ 10  ವರ್ಷಗಳ ಹಿಂದೆ ಮದುವೆಯಾಗಿ ಗಂಡನಿಂದ ದೂರವಾಗಿದ್ದರು. ಕೆಲ ವರ್ಷಗಳಿಂದ ವಿವೇಕ್ ಕುಮಾರ್ ಜೊತೆ ಪ್ರೀತಿ ಶುರುವಾಗಿತ್ತು. ವಿವೇಕ್ ಒಂದಷ್ಟು ಕಾಲ ಈಕೆಯ ಜೊತೆ ಸುತ್ತಾಡಿ ಮಜಾ ಮಾಡುವ ಪ್ಲಾನ್ ಮಾಡಿದ್ದ. ಆದರೆ ಪ್ರೀತಿಯ ತಂಗಾಳಿಯಲ್ಲಿ ಯುವಕ ಬಂಧಿಯಾಗಿದ್ದ. ಇವರಿಬ್ಬರ ಪ್ರೀತಿ ವರ್ಷದಿಂದ ಹೀಗೆ ನಡೆಯುತ್ತಿತ್ತು. ಇದರ ನಡುವೆ ಈ ಜೋಡಿ ಸೂರನ್ ಪಟ್ಟಣದ  ಸಮೀಪದ ಉಸ್ರಾಹಿಯಲ್ಲಿ ಓಯೋ ರೂಂ ಬುಕ್ ಮಾಡಿದೆ.

Tap to resize

Latest Videos

ಅಬ್ಬಬ್ಬಾ 2 ದಿನಗಳ ಹಿಂದೆ ದೇಶದಲ್ಲಿ ಇಷ್ಟೆಲ್ಲಾ ಕ್ರೈಮ್ ಆಗಿತ್ತಾ?

ಪತಿ ಪತ್ನಿಯರ ಸೋಗಿನಲ್ಲಿ ಓಯೋ ರೂಮ್ ಬುಕ್ ಮಾಡಿದ್ದ ಈ ಜೋಡಿ ಯಾವುದೇ ಅನುಮಾನ ಬರದಂತೆ ನೋಡಿಕೊಂಡಿದ್ದರು. ಹೊಟೆಲ್ ರೂಂಗೆ ತೆರಳಿದ ಈ ಜೋಡಿ ಪ್ರೀತಿಯ ಉತ್ತುಗಂದಲ್ಲಿ ರೊಮ್ಯಾನ್ಸ್‌ಗೆ ಇಳಿದಿದೆ. ಸಿಹಿ ಮುತ್ತು ನೀಡುತ್ತಿದ್ದಂತೆ ಮದುವೆ ವಿಚಾರ ಪ್ರಸ್ತಾಪವಾಗಿದೆ. ಇಷ್ಟೇ ನೋಡಿ ಶುರುವಾಗಿದೆ ಜಗಳ. ಸುಮನ್ ದೇವಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ. ಕೆಲವು ಬಾರಿ ಹಣದ ಬೇಡಿಕೆ ಇಟ್ಟಿದ್ದ ಸುಮನ್ ದೇವಿ ಬಳಿಕ ಸುಮ್ಮನಾಗಿದ್ದಳು. ಆದರೆ ಹೊಟೆಲ್ ರೂಂನಲ್ಲಿ 5 ಲಕ್ಷ ರೂಪಾಯಿ ನೀಡದಿದ್ದರೆ, ಬಲಾತ್ಕಾರ, ಕಿರುಕುಳ ಸೇರಿದಂತೆ ಇತರ ಆರೋಪ ಹೊರಿಸಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾಳೆ.

ತಾನು ಟ್ರಾಪ್ ಆಗಿದ್ದೇನೆ ಎಂದು ಅರಿತ ವಿವೇಕ್ ಕುಮಾರ್ ಸುಮನ್ ದೇವಿಯನ್ನು ಹತ್ಯೆ ಮಾಡಿದ್ದಾನೆ. ಹೊಟೆಲ್ ರೂಂನ ಬೆಡ್ ಮೇಲೆ ಹತ್ಯೆ ಮಾಡಿದ ವಿವೇಕ್ ಬಳಿಕ ರೂಂ ಬಾಗಿಲು ಹಾಕಿ ನೇರವಾಗಿ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಹೊಟೆಲ್ ರೂಂನಲ್ಲಿ ತಾನು ಸುಮನ್ ದೇವಿಯ ಅನ್ನೋ ಮಹಿಳೆಯ ಹತ್ಯೆ ಮಾಡಿರುವುದಾಗಿ ಹೇಳಿದ್ದಾನೆ.

ತಕ್ಷಣವೇ ಪೊಲೀಸರು ವಿವೇಕ್ ಕುಮಾರ್ ವಶಕ್ಕೆ ಪಡೆದು ಆತ ಹೇಳಿದ ವಿಳಾಸಕ್ಕೆ ದೌಡಾಯಿಸಿದ್ದಾರೆ. ಹೊಟೆಲ್‌ಗೆ ಆಗಮಿಸಿ ರೂಂ ಬಾಗಿಲು ತೆರದಾಗ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಮುಗಿಸಿದ ಪೊಲೀಸರು ವಿವೇಕ್ ಕುಮಾರ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಣದ ಬೇಡಿಕೆ ಕುರಿತ ಆರೋಪವನ್ನು ವಿವೇಕ್ ಕುಮಾರ್ ಮಾಡಿದ್ದಾನೆ.  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ಸುಮನ್ ದೇವಿ ಇದೇ ರೀತಿ ಬೇರೆ ಯುವಕರಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ಸಾಧ್ಯತೆ ಇದೆಯಾ ಅನ್ನೋದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

ಸುಮನಾ ದೇವಿ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತ ವಿವೇಕ್ ಕುಮಾರ್ ಕುಟುಂಸ್ಥರು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಸುಮನಾ ದೇವಿ ಗಂಡನಿಂದ ಬೇರೆಯಾಗಿ ತವರು ಮನೆಯಲ್ಲೇ ವಾಸವಿದ್ದಳು. ಮೊದಲ ಮದುವೆ ಬಳಿಕ ಪತಿ ಜೊತೆ ಜಗಳವಾಡಿ ದೂರವಾಗಿದ್ದ ಸುಮನಾ ಇದೀಗ ದುರಂತ ಅಂತ್ಯಕಂಡಿದ್ದಾಳೆ. ಇತ್ತ ಪ್ರೀತಿಯ ಬಲೆಯಲ್ಲಿ ಬಿದ್ದ ಯುವಕ ಕಂಬಿ ಎಣಿಸುವಂತಾಗಿದೆ.

ಹಣಕ್ಕಾಗಿ ಹತ್ತಿರದ ಸಂಬಂಧಿಯಿಂದಲೇ 5 ವರ್ಷದ ಮಗುವಿನ ಉಸಿರುಕಟ್ಟಿಸಿ ಹತ್ಯೆ
 

click me!