ಗೆಳೆಯ ಪ್ರೀತಿಸಿದ ಹುಡುಗಿಗೆ ಬ್ಲ್ಯಾಕ್ ಮ್ಯಾಜಿಕ್, ಸುತ್ತಾಡಿಸಿದ ಭೂಪ, ಕೊಲೆಯಲ್ಲಿ ಅಂತ್ಯ!

By Ravi Janekal  |  First Published Sep 21, 2024, 11:34 AM IST

ಹುಡುಗಿ ವಿಚಾರಕ್ಕೆ ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಸಂಜಯನಗರದ ಗೆದ್ದಲಹಳ್ಳಿ ಬಳಿ ಘಟನೆ ನಡೆದಿದೆ. ವರುಣ್ ಕೊಲೆಯಾದ ದುರ್ದೈವಿ, ದಿವೇಶ್  ಬಂಧಿತ ಆರೋಪಿ.


ಬೆಂಗಳೂರು (ಸೆ.21): ಹುಡುಗಿ ವಿಚಾರಕ್ಕೆ ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಸಂಜಯನಗರದ ಗೆದ್ದಲಹಳ್ಳಿ ಬಳಿ ಘಟನೆ ನಡೆದಿದೆ.

ವರುಣ್ ಕೊಲೆಯಾದ ದುರ್ದೈವಿ, ದಿವೇಶ್  ಬಂಧಿತ ಆರೋಪಿ. ವರುಣ್ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ದಿವೇಶ್. ಕೊಲೆ ಬಳಿಕ ಸ್ಥಳದಲ್ಲೇ ನಿಂತಿದ್ದ ಆರೋಪಿ ಸಂಜಯನಗರದ ಹೊಯ್ಸಳ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪ್ರಕಾರ ಹುಡುಗಿಯ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ಕೊಲೆಯಾಗಿದೆ.

Tap to resize

Latest Videos

ಒಂದೇ ಹುಡುಗಿ ಇಬ್ಬರು ಲವ್!

ಮೃತ ವರುಣ್, ಕೊಲೆಗಾರ ದಿವೇಶ್ ಇಬ್ಬರೂ ಸ್ನೇಹಿತರು ಸಂಜಯ ನಗರದ ಗೆದ್ದಲಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ರು. ವರುಣ್ ಹುಡುಗಿಯೊಬ್ಬಳ್ಳನ್ನು ಲವ್ ಮಾಡುತ್ತಿದ್ದ. ಅದೇ ಹುಡುಗಿಯನ್ನ ಆರೋಪಿ ದಿವೇಶ್ ಕೂಡ ಲವ್ ಮಾಡುತ್ತಿದ್ದ.. ಈ ವಿಚಾರಕ್ಕೆ ಆಗಾಗ ಇಬ್ಬರ ನಡುವೆ ಗಲಾಟೆಯಾಗಿತ್ತು. ವರುಣ್ ದಿವೇಶ್ ಹಿಂದೆ ಹುಡುಗಿ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು.  ಇಂದು ಬೆಳಗ್ಗೆ ಮತ್ತೆ ಗಲಾಟೆ ಮಾಡಿಕೊಂಡಿರುವ ವರುಣ್, ದಿವೇಶ, ಜಗಳ ಮಾಡಿಕೊಂಡು ಮನೆಯಿಂದ ಹೊರಬಂದವೇಳೆ ವರುಣ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ದಿವೇಶ. ಸದ್ಯ ಆರೋಪಿಯನ್ನು ಬಂಧಿಸಿದ್ದು, ಘಟನೆ ಸಂಬಂಧ ವಿಚಾರಣೆ ಮುಂದುವರಿಸಿರುವ ಪೊಲೀಸರು.  ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಅಬ್ಬಬ್ಬಾ 2 ದಿನಗಳ ಹಿಂದೆ ದೇಶದಲ್ಲಿ ಇಷ್ಟೆಲ್ಲಾ ಕ್ರೈಮ್ ಆಗಿತ್ತಾ?

ಪೊಲೀಸ್ ವಿಚಾರಣೆ ವೇಳೆ ಆರೋಪಿ ದಿವೇಶ್ ಹೇಳಿಕೆ:

ಇಬ್ಬರು ಪರಸ್ಪರ ಗೆಳೆಯರಾಗಿದ್ದರೂ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ನನಗೆ ಗೊತ್ತಾಗದ ಹಾಗೆ ಬ್ಲಾಕ್ ಮ್ಯಾಜಿಕ್ ಮಾಡಿ ತನ್ನತ್ತ ಸೆಳೆದುಕೊಂಡಿದ್ದ ವರುಣ್. ಆಕೆಯನ್ನ ಪಾರ್ಕ್, ಸಿನಿಮಾ ಅಂತಾ ಸುತ್ತಾಡಿಸಿದ್ದ. ಈ ವಿಚಾರ ನನಗೆ ಗೊತ್ತಾಗಿ ವರುಣ್ ಗೆ ಪ್ರಶ್ನಿಸಿದ್ದೆ.  ಬ್ಲ್ಯಾಕ್ ಮ್ಯಾಜಿಕ್ ಮಾಡಿ ನನ್ನ ಹುಡುಗಿ ಜೊತೆ ಚೆಲ್ಲಾಟ ಆಡ್ತಿಯಾ ಅಂತಾ ಪ್ರಶ್ನಿಸಿದ್ದೆ. ಎಷ್ಟೆ ತಿಳಿಸಿ ಹೇಳಿದ್ರೂ ನನ್ನ ಮಾತನ್ನು ವರುಣ್ ಕೇಳಲಿಲ್ಲ ಬೆಳಗ್ಗೆ ಸಹ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡೆವು.  ಈ ವೇಳೆ ವರುಣ್ ಮೇಲೆ ಹಾಲೋ ಬ್ರಿಕ್ಸ್ ಎತ್ತಿ ಹಾಕಿ ಕೊಲೆ ಮಾಡಿದ್ದೇನೆ ಎಂದು ಹೇಳಿರೋ ಆರೋಪಿ ದಿವೇಶ್ ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು. ಹೀಗಾಗಿ ಮೋಸ ಮಾಡಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿದ್ದೇನೆ ಎಂದು ಬಾಯ್ಬಿಟ್ಟ ಆರೋಪಿ.

ಎಲ್ಲಾದ್ರೂ ಹೋದ್ರೆ ವಿಕೃತಕಾಮಿ ಮುನಿರತ್ನ ಏಡ್ಸ್ ಪಿನ್ನು ಚುಚ್ಚಿಬಿಡ್ತಾನೋ ಅಂತಾ ಭಯ ಆಗ್ತಿದೆ: ಮೊಹಮ್ಮದ್ ನಲಪಾಡ್

ಪ್ರಕರಣದ ಬಗ್ಗೆ ಡಿಸಿಪಿ ಪ್ರತಿಕ್ರಿಯೆ:

ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ. ವರುಣ್ ಕೋಟ್ಯಾನ್ ಹಾಗೂ ದಿವೇಶ್ ಇಬ್ಬರು ಸ್ನೇಹಿತರು. ಮೂಲತಃ ಉಡುಪಿಯವರು ಎಂದು ತಿಳಿದು ಬಂದಿದೆ. ಸಂಜಯ್ ನಗರದ ಗೆದ್ದಲಹಳ್ಳಿ ಬಾಡಿಗೆ ಮನೆಯಲ್ಲಿ ವಾಸ. ಕಳೆದ ಒಂದು ವರ್ಷದಿಂದ ವಾಸವಿದ್ದರು. ಒಟ್ಟಾರೆ ನಾಲ್ಕು ಜನ ಗೆಳೆಯರು ಒಂದೇ ಮನೆಯಲ್ಲಿ ವಾಸವಿದ್ದರು. ಮೂರು ಜನ ಉಡುಪಿ ಮೂಲದವರು, ಇನ್ನೋರ್ವ ಬೆಂಗಳೂರಿನವ. ಇಬ್ಬರು ಸಹ ಒಂದೇ ಹುಡುಗಿಯ ಜೊತೆ ಡೇಟ್ ಮಾಡುತಿದ್ದರು. ಹುಡುಗಿ ವಿಚಾರಕ್ಕೆ ಜಗಳವಾಡಿ ಕೊಲೆ ನಡೆದಿರೋದು. ಇಂದು ಬೆಳಗ್ಗೆ ಸುಮಾರು 7.30 ರಿಂದ 8 ಗಂಟೆಗೆ ಘಟನೆ ನಡೆದಿದೆ. ಪೋಸ್ಟ್ ಮಾರ್ಟಮ್ ಬಳಿಕ ಇನಷ್ಟು ಮಾಹಿತಿ ತಿಳಿಯಲಿದೆ ಎಂದಿದ್ದಾರೆ.

click me!