Suicide ಜೆಡಿಎಸ್ ಮುಖಂಡನ ಪುತ್ರ ಆತ್ಮಹತ್ಯೆ, ಲೇಡಿ ಪೊಲಿಸ್ ಜತೆಗಿನ ಲವ್ವಿ-ಡವ್ವಿ ಕಾರಣವಾಯ್ತಾ?

Published : Dec 24, 2021, 07:45 PM ISTUpdated : Dec 24, 2021, 07:50 PM IST
Suicide ಜೆಡಿಎಸ್ ಮುಖಂಡನ ಪುತ್ರ ಆತ್ಮಹತ್ಯೆ, ಲೇಡಿ ಪೊಲಿಸ್ ಜತೆಗಿನ ಲವ್ವಿ-ಡವ್ವಿ ಕಾರಣವಾಯ್ತಾ?

ಸಾರಾಂಶ

* ಜೆಡಿಎಸ್ ಮುಖಂಡನ ಪುತ್ರ ಆತ್ಮಹತ್ಯೆಗೆ ಶರಣು * ಆತ್ಮಹತ್ಯೆ ಹಿಂದೆ ಲೇಡಿ ಪೊಲಿಸ್ ಜತೆ ಲವ್ವಿ-ಡವ್ವಿ ಶಂಕೆ? * ಮೈಸೂರಿನಲ್ಲಿ ನಡೆದಿರುವ ಘಟನೆ

ಮೈಸೂರು, (ಡಿ.24): ಮೈಸೂರು ಜಿಲ್ಲಾ ಜೆಡಿಎಸ್ ನಾಯಕ(Mysuru JDS Leader) ಬೆಳವಾಡಿ ಶಿವಮೂರ್ತಿ ಅವರ ಪುತ್ರ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ(suicide) ಮಾಡಿಕೊಂಡಿದ್ದಾರೆ.

ಮೈಸೂರಿನ ಮರಟಿಕ್ಯಾತನಹಳ್ಳಿ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ಪ್ರದೀಪ್ (32)  ಗುರುವಾರ ತಡರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರದೀಪ್​​ ತಂದೆ ಬೆಳವಾಡಿ ಶಿವಮೂರ್ತಿ ಮೈಸೂರು ಜಿಲ್ಲಾ ಜೆಡಿಎಸ್ ಖಜಾಂಚಿ ಆಗಿದ್ದು, ತಾಯಿ ಭಾಗ್ಯ ಶಿವಮೂರ್ತಿ ಮಾಜಿ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

POCSO Case : 17ರ ಬಾಲಕನ ಹಿಂದೆ ಬಿದ್ದಿದ್ದು 35ರ ಆಂಟಿ : ಆಮೇಲಾಗಿದ್ದೆ ಬೇರೆ

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಲೇಡಿ ಎಸ್​ಐ ​ಜೊತೆ ಲವ್ವಿಡವ್ವಿ ?
ಹೌದು...ಜೆಡಿಎಸ್​ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಪುತ್ರ ಪ್ರದೀಪ್ ಆತ್ಮಹತ್ಯೆ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದ್ದು,ಲೇಡಿ ಎಸ್​ಐ ​ಜತೆಗಿನ ಲವ್ವಿಡವ್ವಿಯೇ ಮುಳುವಾಯ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಈ ಸಾವಿಗೆ ಲೇಡಿ ಸಬ್​ ಇನ್ಸ್‌ಪೆಕ್ಟರ್ ಜತೆಗಿನ ಪ್ರೇಮಪುರಾಣವೇ ಕಾರಣ ಎಂದು ಆಪ್ತ ವಲಯದಲ್ಲಿ ಗುಸುಗುಸು  ಶುರುವಾಗಿದೆ.

ಪ್ರದೀಪ್​ ಮತ್ತು ಲೇಡಿ ಸಬ್​ ಇನ್​ಸ್ಪೆಕ್ಟರ್​ ನಡುವೆ ವಿವಾಹೇತರ ಸಂಬಂಧ ಇತ್ತಂತೆ. ನಿನ್ನೆ(ಡಿ.23) ರಾತ್ರಿ ಇವರಿಬ್ಬರೂ ಭೇಟಿ ಆಗಿದ್ದರಂತೆ. ಆ ವೇಳೆ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿತ್ತು. ಇದರಿಂದ ಬೇಸತ್ತ ಪ್ರದೀಪ್​, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಹೀಗೆ ಅಂತೆ-ಕಂತೆಗಳ ಸುದ್ದಿ ಹರಿದಾಡುತ್ತಿವೆ. ಆದ್ರೆ, ಪೊಲೀಸ್‌ ತನಿಖೆ ಬಿಳಿಕ ನಿಖರ ಕಾರಣ ತಿಳಿದುಬರಲಿದೆ.

 ಒಡವೆಗಾಗಿ ಮಹಿಳೆ ಕೊಲೆ
ಚನ್ನಪಟ್ಟಣ
: ಶುಕ್ರವಾರ ಬೆಳ್ಳಂಬೆಳಗ್ಗೆ ಇಡೀ ಗ್ರಾಮವೇ ಬೆಚ್ಚಿಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನ ಕೆರೆಯಲ್ಲಿ ಸಂಭವಿಸಿದೆ.

ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿ, ಮನೆಯಲ್ಲಿ ಮಲಗಿದ್ದ ವೃದ್ಧೆ ಜಯಮ್ಮ(65) ರನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.

ಆ ವೇಳೆ ತೋಟದಿಂದ ಮನೆಗೆ ಬಂದ ವೃದ್ಧೆಯ ಮಗ ಸಿದ್ದರಾಜು ಮೇಲೂ ಮಾರಣಾಂತಿಕ‌ ಹಲ್ಲೆ ನಡೆಸಿದ್ದಾರೆ. ಸಿದ್ದರಾಜು ಬಂದ ದ್ವಿಚಕ್ರ ವಾಹನದಲ್ಲಿಯೇ ಕೊಲೆಗಾರ ಸ್ಥಳದಿಂದ ಪರಾರಿಯಾಗಿದ್ದು, ದ್ವಿಚಕ್ರ ವಾಹನವನ್ನು ಚನ್ನಪಟ್ಟಣ ನಗರದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಹೋಗಿದ್ದಾನೆ. 

ಗಂಭೀರ ಗಾಯಗೊಂಡ ಸಿದ್ದರಾಜುನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಈ ಕೃತ್ಯವೆಸಗಿದ್ದು ಯಾರೋ ಅಪರಿಚಿತ ಎಂದೇ ಭಾವಿಸಲಾಗಿತ್ತು. ಪ್ರಕರಣ ದಾಖಲಾದ ಮೂರೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಅಕ್ಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಕೊಲೆ ಆರೋಪಿ ಬೇರೆ ಯಾರೂ ಅಲ್ಲ, ಹಿಂಬಂದಿ ಮನೆಯ ನಿವಾಸಿ.

ಸಧ್ಯ ಸಿದ್ದರಾಜು ಅವರ ಹಿಂಬದಿ ಮನೆಯ ನಿವಾಸಿ ರವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!