ಮೈಸೂರಿನಲ್ಲಿ ಬೃಹತ್ ದಾಳಿ: 30 ಕೆಜಿ ಸಿಂಥೆಟಿಕ್ ಡ್ರಗ್ಸ್ ಪತ್ತೆ, ಇಬ್ಬರ ಬಂಧನ!

Published : Mar 27, 2026, 11:32 PM IST
Mysuru Drug Bust

ಸಾರಾಂಶ

ಮನೆಯೊಂದರಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ದಾಸ್ತಾನು ಮಾಡಿರುವ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಎಸ್‌ಪಿ ಸಿ.ಮಲ್ಲಿಕ್‌, ಹುಣಸೂರು ಉಪವಿಭಾಗದ ಪೊಲೀಸರ ತಂಡ ದಾಳಿ ನಡೆಸಿದೆ.

ಮೈಸೂರು (ಮಾ.27): ಡ್ರಗ್ಸ್‌ ಚಟುವಟಿಕೆ ಮೈಸೂರಿನಲ್ಲಿ ತೀವ್ರಗೊಂಡಿದ್ದು, ಜಿಲ್ಲಾ ಪೊಲೀಸರ ತಂಡವು ಮತ್ತೊಂದು ಬೃಹತ್‌ ಡ್ರಗ್ಸ್‌ ಜಾಲ ಪತ್ತೆಹಚ್ಚಿದೆ. ಹುಣಸೂರು ತಾಲ್ಲೂಕು ದಾಸನಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಡ್ರಗ್ಸ್‌ ಮಾರಾಟ ಜಾಲವನ್ನು ಜಿಲ್ಲಾ ಪೊಲೀಸರ ತಂಡ ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮನೆಯೊಂದರಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ದಾಸ್ತಾನು ಮಾಡಿರುವ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಎಸ್‌ಪಿ ಸಿ.ಮಲ್ಲಿಕ್‌, ಹುಣಸೂರು ಉಪವಿಭಾಗದ ಡಿವೈಎಸ್‌ಪಿ ರವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಕೋಟ್ಯಾಂತರ ಮೌಲ್ಯದ ಸುಮಾರು 30 ಕೆ.ಜಿಗಿಂತಲೂ ಹೆಚ್ಚಿನ ಸಿಂಥೆಟಿಕ್‌ ಡ್ರಗ್ಸ್‌ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಆರೋಪಿಗಳೂ ಮೈಸೂರು ನಿವಾಸಿ

‘ಗುರುವಾರ ಡ್ರಗ್ಸ್‌ ಸೇವನೆ ಮಾಡಿದ್ದ ಇಬ್ಬರನ್ನು ಬಂಧಿಸಿದ್ದೆವು. ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ದಾಸನಪುರದ ಮನೆಯೊಂದರಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ದಾಸ್ತಾನು ಮಾಡಿರುವ ಮಾಹಿತಿ ತಿಳಿಯಿತು. ದಾಳಿ ನಡೆಸಿದಾಗ 2 ಕೆ.ಜಿ, 5 ಕೆ.ಜಿಯ ಪೊಟ್ಟಣಗಳಲ್ಲಿ ಡ್ರಗ್ಸ್‌ ತುಂಬಿಟ್ಟಿರುವುದು ಕಂಡುಬಂದಿದೆ. ಇಬ್ಬರು ಆರೋಪಿಗಳೂ ಮೈಸೂರು ನಿವಾಸಿಗಳಾಗಿದ್ದು, ಇಲ್ಲಿಂದ ಇತರೆಡೆಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ತನಿಖೆ ಮುಂದುವರೆಸಿದ್ದೇವೆ’ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ
ಐಷಾರಾಮಿ ಲ್ಯಾಂಬೋರ್ಗಿನಿಯನ್ನು ಫೇಕ್‌ ನಂಬರ್‌ ಪ್ಲೇಟ್‌ ಹಾಕಿ ಓಡಿಸ್ತಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ!