ಮಗಳನ್ನು ಒಪ್ಪಿಸದಿದ್ದರೆ ‘ಸರ್ ತನ್‌ ಸೆ ಜುದಾ: ಹಿಂದೂ ಕುಟುಂಬಕ್ಕೆ ಮುಸ್ಲಿಂ ಯುವಕ ಬೆದರಿಕೆ

Published : Sep 02, 2022, 05:04 PM IST
ಮಗಳನ್ನು ಒಪ್ಪಿಸದಿದ್ದರೆ ‘ಸರ್ ತನ್‌ ಸೆ ಜುದಾ: ಹಿಂದೂ ಕುಟುಂಬಕ್ಕೆ ಮುಸ್ಲಿಂ ಯುವಕ ಬೆದರಿಕೆ

ಸಾರಾಂಶ

Crime News: ಮಗಳನ್ನು ತನಗೆ ಒಪ್ಪಿಸದಿದ್ದರೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದಡಿ ಮುಸ್ಲಿಂ ಯುವಕನ್ನು ಬಂಧಿಸಲಾಗಿದೆ

ಲಖನೌ (ಸೆ. 02): ಮಗಳನ್ನು ತನಗೆ ಒಪ್ಪಿಸದಿದ್ದರೆ ಹಿಂದೂ ಕುಟುಂಬದ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದಡಿ ಗಾಜಿಯಾಬಾದ್‌ನ ಲೋನಿಯ ಮುಸ್ಲಿಂ ಯುವಕನ್ನು ಬಂಧಿಸಲಾಗಿದೆ. ಯುವತಿಯ ತಂದೆ ರಾಜೇಶ್ ಶರ್ಮಾ ದಾಖಲಿಸಿರುವ ದೂರಿನಲ್ಲಿ ಆರೋಪಿ ಯುವತಿಯ ಕೆಲವು ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.

ಈ ವರ್ಷ ಜೂನ್‌ನಲ್ಲಿ ಮುಸ್ಲಿಂ ಹುಡುಗನೊಂದಿಗೆ ತನ್ನ ಸ್ವಂತ ಇಚ್ಛೆಯ ಮೇರೆಗೆ ಯುವತಿ ಓಡಿಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.  ಅಲ್ಲದೇ ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ ಯುವತಿ ಆರೋಪಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.  ಯುವತಿ ಕುಟುಂಬದವರು ನೀಡಿದ ದೂರಿನ ನಂತರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 

ಪೊಲೀಸರು ಈ ಹಿಂದೆ ಬಾಗ್‌ಪತ್‌ನ ಖೇಕ್ಡಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು ಐಟಿ ಕಾಯ್ದೆಯ 67 ಎ ಅನ್ವಯ ಪ್ರಕರಣ ದಾಖಲಿಸಿದ್ದರು ಎಂದು ಟೈಮ್ಸ್‌ ನೌ ವರದಿ ಮಾಡಿದೆ.  ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

ಬೆಂಗಳೂರು: ಯುವತಿ ಮೇಲೆ ಸ್ನೇಹಿತರಿಂದಲೇ ಗ್ಯಾಂಗ್ ರೇಪ್

ಪ್ರೀತಿಸಲು ಒಪ್ಪದಿದ್ದಕ್ಕೆ ಪೆಟ್ರೋಲ್‌ ಸುರಿದು ಯುವತಿ ಹತ್ಯೆ: ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದಕ್ಕೆ ಯುವಕನೊಬ್ಬನು 12ನೇ ತರಗತಿ ವಿದ್ಯಾರ್ಥಿನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣ ಜಾರ್ಖಂಡದ ದುಮ್ಕಾ ಜಿಲ್ಲೆಯಲ್ಲಿ ವರದಿಯಾಗಿದೆ.

19 ವರ್ಷದ ತರುಣಿಯ ದೇಹ ಶೇ. 90ರಷ್ಟುಸುಟ್ಟುಹೋಗಿದ್ದು, ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಿಸಲಾಗಿತ್ತು. ಆದರೂ ಆಕೆ ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ 2:30 ಕ್ಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಆಕೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಆರೋಪಿ ಶಾರುಖ್‌ನನ್ನು ಬಂಧಿಸಲಾಗಿದೆ.

ಆಗಿದ್ದೇನು?: ಆರೋಪಿ ಶಾರುಖ್‌ ಯುವತಿಗೆ ತನ್ನ ಪ್ರಿಯತಮೆ ಆಗುವಂತೆ ಕೇಳಿ 10 ದಿನಗಳ ಹಿಂದೆ ಕರೆ ಮಾಡಿದ್ದ. ಸೋಮವಾರ ಮತ್ತೆ ರಾತ್ರಿ 8ರ ಸುಮಾರಿಗೆ ಆರೋಪಿ ಕರೆ ಮಾಡಿ, ತನ್ನೊಂದಿಗೆ ಮಾತನಾಡದಿದ್ದರೆ ಯುವತಿಯ ಹತ್ಯೆ ಮಾಡುವುದಾಗಿ ಆಕೆಗೆ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಯುವತಿ ತನ್ನ ತಂದೆಗೆ ತಿಳಿಸಿದಾಗ ಅವರು ಶಾರುಖ್‌ ಪಾಲಕರೊಂದಿಗೆ ಈ ಬಗ್ಗೆ ಮಾರನೇ ದಿನ ಮಾತನಾಡುವುದಾಗಿ ಹೇಳಿದರು. ಊಟದ ನಂತರ ಯುವತಿ ತನ್ನ ಕೋಣೆಗೆ ಮಲಗಲು ಹೋಗಿದ್ದಳು. 

ಮರುದಿನ ಮುಂಜಾನೆ ಕಿಟಕಿಯಿಂದ ಶಾರುಖ್‌ ಯುವತಿಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಯುವತಿ ನೋವಿನಿಂದ ಚೀರುತ್ತ ತನ್ನ ತಂದೆಯ ಕೋಣೆಗೆ ಹೋದಾಗ ಅವಳ ಪಾಲಕರು ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಸುಟ್ಟಗಾಯಗಳಿಂದ ಯುವತಿ ಮೃತಪಟ್ಟಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!