ದಾಖಲೆ ಇಲ್ಲದ ಬೈಕ್‌ನಲ್ಲಿ ಬಂದು ಸಿಕ್ಕಿಬಿದ್ದ ಮನೆಗಳ್ಳ

By Kannadaprabha NewsFirst Published Jan 20, 2021, 8:00 AM IST
Highlights

4 ಲಕ್ಷ ಮೌಲ್ಯದ ಚಿನ್ನಾಭರಣ, 3 ಬೈಕ್‌ ವಶ| ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದ್ದು ಬಳಿಕ ಅದೇ ಬೈಕ್‌ನಲ್ಲಿ ತೆರಳಿದ ಬೀಗ ಮನೆಗಳಿಗೆ ಕನ್ನ ಹಾಕುತ್ತಿದ್ದ ಖದೀಮ| ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲು| 

ಬೆಂಗಳೂರು(ಜ.20): ನಗರದಲ್ಲಿ ಮನೆಗಳ್ಳತನ ಹಾಗೂ ವಾಹನ ಕಳವು ಕೃತ್ಯದಲ್ಲಿ ತೊಡಗಿದ್ದ ವೃತ್ತಿಪರ ಖದೀಮನೊಬ್ಬ ಸೋಲದೇವನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಾಮಾಕ್ಷಿಪಾಳ್ಯದ ವೃಷಾಭವತಿ ನಗರದ ಗಣೇಶ್‌ ಅಲಿಯಾಸ್‌ ಚಾರ್ಲಿ ಬಂಧಿತನಾಗಿದ್ದು, ಆರೋಪಿಯಿಂದ .3.85 ಲಕ್ಷ ಮೌಲ್ಯದ 57 ಗ್ರಾಂ ಚಿನ್ನಾಭರಣ ಹಾಗೂ ವಿವಿಧ ಕಂಪನಿಯ ಮೂರು ಬೈಕ್‌ ಜಪ್ತಿ ಮಾಡಲಾಗಿದೆ.

ಗಣಪತಿ ನಗರದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಯನ್ನು ಅಡ್ಡಗಟ್ಟಿಪರಿಶೀಲಿಸಿದಾಗ ಆತನ ಬಳಿ ಯಾವುದೇ ದಾಖಲೆಗಳಿರಲಿಲ್ಲ. ಅನುಮಾನದ ಮೇರೆಗೆ ಆತನನ್ನು ಠಾಣೆಗೆ ಕರೆ ತಂದು ವಿಚಾರಿಸಿದಾಗ ಸತ್ಯ ಬಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ವೈದ್ಯ ಸೀಟು ಕೊಡಿಸುವುದಾಗಿ 52 ಲಕ್ಷ ವಂಚನೆ

ತಮಿಳುನಾಡು ಮೂಲದ ಗಣೇಶ್‌ ವೃತ್ತಿಪರ ಖದೀಮನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದ್ದು ಬಳಿಕ ಅದೇ ಬೈಕ್‌ನಲ್ಲಿ ತೆರಳಿದ ಬೀಗ ಮನೆಗಳಿಗೆ ಕನ್ನ ಹಾಕುತ್ತಿದ್ದ. ಆರೋಪಿ ಬಂಧನದಿಂದ ಸೋಲದೇವನಹಳ್ಳಿ, ತುಮಕೂರು ಹೆಬ್ಬೂರು, ವಿಜನಯಗರ ಹಾಗೂ ಯಲಹಂಕ ಉಪ ನಗರ ಠಾಣಾ ವ್ಯಾಪ್ತಿಯ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!