ಶಾಲಾ ಬಾಲಕಿಯ ಮೈ ಮುಟ್ಟಿದ ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು

By Sathish Kumar KHFirst Published Jun 21, 2023, 5:57 PM IST
Highlights

ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕೇಸ್ ಗೆ ಸಂಬಂಧಿಸಿದಂತೆ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಪ್ಪ ಹಳ್ಳಿಗುಡಿಗೆ ಗದಗ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದೆ.

ಗದಗ (ಜೂ.21): ಶಾಲಾ ಲೈಂಗಿಕ ಕಿರುಕುಳ ನೀಡಿದ್ದ ಕೇಸ್ ಗೆ ಸಂಬಂಧಿಸಿದಂತೆ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಂಕ್ರಪ್ಪ ಹಳ್ಳಿಗುಡಿ ಅವರಿಗೆ 5 ವರ್ಷ ಜೈಲು ಶಿಕ್ಷೆ ನೀಡಿ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಅಂದರೆ 2020 ರಿಂದ ನಡೆದಿದ್ದ ಜಿಲ್ಲೆಯ ಹೈ ಪ್ರೊಫೈಲ್ ಕೇಸ್ ನ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ. ಆರೋಪಿ ಶಂಕ್ರಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಎಒ) ಆಗಿದ್ದ ವೇಳೆ ವಿದ್ಯಾರ್ಥಿನಿಯ ಮನೆಗೆ ತೆರಳಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಇತ್ತು. ಪ್ರಕರಣ ಕುರಿತಂತೆ ಸಂತ್ರಸ್ತೆ ಬಾಲಕಿ 21 ಫೆಬ್ರವರಿ 2020 ರಲ್ಲಿ‌ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಮುಂಡರಗಿ ಪೊಲೀಸರು ತನಿಖೆ ನಡೆಸಿದ್ದರು. ನಂತರ ತನಿಖೆ ನಡೆಸಿದ್ದ ಪೊಲೀಸರು 2020ರ ಮಾ.27ರಂದು ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯ ಶಂಕ್ರಪ್ಪಗೆ ಐದು ವರ್ಷ ಜೈಲು ಶಿಕ್ಷೆ, 25 ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ದಲಿತ ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರಗೈದು ಕೊಲೆ, ಆರೋಪಿಗಳ ಪೈಕಿ ಇಬ್ಬರು ಪೊಲೀಸ್!

ಘಟನೆಯ ಹಿನ್ನೆಲೆಯೇನು? ಕಳೆದ 2020 ರ ಫೆಬ್ರವರಿ 20 ರಂದು ಮುಂಡರಗಿ ಪೊಲೀ ಸ್ ಠಾಣೆ ವ್ಯಾಪ್ತಿಯ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಶಂಕ್ರಪ್ಪ ಹಳ್ಳಿಗುಡಿ, ಸಂತ್ರಸ್ತೆಯನ್ನ ಶಾಲೆಗೆ ಕರೆಸಿಕೊಂಡಿದ್ದನು. ನಂತರ ಮನೆ ಭೇಟಿ ಕಾರ್ಯಕ್ರಮ ನೆಪಹೇಳಿ ಮನೆಗೂ ಭೇಟಿ ನೀಡಿದ್ದನು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದನು. ನಂತರ, ಸಂತ್ರಸ್ತೆಯನ್ನು ಕೋಣೆಗೆ ಎಳೆದುಕೊಂಡು ಹೋಗಿ ಬಾಲಕಿಯನ್ನ ಅಪ್ಪಿಕೊಂಡು ಅಸಭ್ಯ ವರ್ತನೆ ತೋರಿದ್ದರು.

ಪೊಲೀಸ್‌ ಠಾಣೆಗೆ ದೂರು ನೀಡಿದ್ದ ಬಾಲಕಿ:  ಈ ಘಟನೆಯಿಂದ ತೀವ್ರ ವಿಚಲಿತಳಾಗಿದ್ದ ಬಾಲಕಿ, ಕ್ಷೇತ್ರ ಶಿಕ್ಷಣಾಧಿಕಾರಿಯ ತನಗೆ ನೀಡಿದ ಕಿರುಕುಳದ ಬಗ್ಗೆ ಪೋಷಕರ ಎದುರು ಅಳಲು ತೋಡಿಕೊಂಡಿದ್ದಳು ಇದರಿಂದ ಸಿಟ್ಟಿಗೆದ್ದಿದ್ದ ಪಾಲಕರು ನೇರವಾಗಿ ಬಿಇಒ ಮನೆಗೆ ತೆರಳಿ ಮನಸ್ಸೋ ಇಚ್ಛೆ ಥಳಿಸಿ, ಎಚ್ಚರಿಕೆಯನ್ನು ನೀಡಿ ಬಂದಿದ್ದರು. ಜೊತೆಗೆ, ಮರುದಿನ ಬಾಲಕಿಯನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಾಡಿಯಲ್ಲಿ ತನಿಖೆ ಮಾಡಿದ್ದ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಕೆ  ಮಾಡಿದ ನಂತರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಹಾವೇರಿಯಲ್ಲಿ ಆರ್‌ಎಂಡಿ ಗುಟ್ಕಾ ಕದ್ದ ಖದೀಮರು, ತಮಿಳುನಾಡಲ್ಲಿ ತಿಂದು ಸಿಕ್ಕಿಬಿದ್ರು

ಇನ್ನು ಅಪ್ರಾಪ್ತ ಮಕ್ಕಳ ಮೈ ಮುಟ್ಟಿ ವಿಕೃತ ಕಾಮಸುಖ ಅನುಭವಿಸುತ್ತಿದ್ದ ಆರೋಪಿಗೆ ಶಿಕ್ಷೆಯಾಗಿದೆ. ಮಕ್ಕಳ ಮೇಲಾಗುವ ದೌರ್ಜನ್ಯ ಯಾವುದೇ ಕಾರಣಕ್ಕೂ‌ ಸಹಿಸಬಾರದು. ದೌರ್ಜನ್ಯ ಪ್ರಕರಣವನ್ನ ಸರಿಯಾದ ರೀತಿಯಲ್ಲಿ ಕೇಸ್ ದಾಖಲಿಸಿ ವಾದ ಮಂಡಿಸಿದರೆ ನ್ಯಾಯ ಸಿಗುತ್ತದೆ ಅಂತಾ ವಿಶೇಷ ಅಭಿಯೋಜಕ ಎಂದು ಹಿರೇಮಠ ಹೇಳಿದರು.

click me!