ವಿದ್ಯಾರ್ಥಿ ಮೇಲೆ ಸ್ಟಾರ್‌ ಹೊಟೇಲ್‌ಗಳಲ್ಲಿ ವರ್ಷಗಳ ಕಾಲ ಬಲತ್ಕಾರ: ಪ್ರತಿಷ್ಠಿತ ಶಾಲೆಯ ಶಿಕ್ಷಕಿ ಬಂಧನ

Published : Jul 02, 2025, 03:49 PM IST
teacher arrested

ಸಾರಾಂಶ

ಮುಂಬೈನ ಪ್ರತಿಷ್ಠಿತ ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿದ್ದು, ಇದು ನಗರವನ್ನು ಬೆಚ್ಚಿ ಬೀಳಿಸಿದೆ. 

ಮುಂಬೈ: ವರ್ಷಗಳ ಕಾಲ ನಗರದ ಫೈವ್‌ಸ್ಟಾರ್‌ ಹೊಟೇಲ್‌ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ದು ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕನ ಮೇಲೆ ಬಲತ್ಕಾರವೆಸಗಿದ ಆರೋಪದ ಮೇಲೆ ಮುಂಬೈನ ಪ್ರತಿಷ್ಠಿತ ಶಾಲೆಯೊಂದರ ಇಂಗ್ಲೀಷ್ ಶಿಕ್ಷಕಿಯನ್ನು ಬಂಧಿಸಲಾಗಿದೆ. ಶಿಕ್ಷಕಿಯ ವಿರುದ್ಧ ಪೋಸ್ಕೊ ಸೇರಿದಂತೆ ಹಲವು ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.

40 ವರ್ಷದ ಮಹಿಳೆ ಬಂಧಿತ ಶಿಕ್ಷಕಿಯಾಗಿದ್ದಾಳೆ. ಈಕೆಗೆ ಮದುವೆಯೂ ಆಗಿದ್ದು, ಅವಳದ್ದೇ ಆದ ಮಕ್ಕಳೂ ಇದ್ದಾರೆ. ಈಕೆ 16 ವರ್ಷದ ಬಾಲಕನಿಗೆ ಪಾಠ ಮಾಡುತ್ತಿದ್ದಳು. ಡಿಸೆಂಬರ್ 2023 ರಲ್ಲಿ ಪ್ರೌಢಶಾಲೆಯ ವಾರ್ಷಿಕ ಸಮಾರಂಭಕ್ಕೆ ನೃತ್ಯ ಮಾಡುವುದಕ್ಕಾಗಿ ಡಾನ್ಸ್ ಗ್ರೂಪ್‌ಗಳನ್ನು ಮಾಡಲು ಹಲವು ಬಾರಿ ಸಭೆಗಳನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿಯೇ ಆಕೆಗೆ ಬಾಲಕನತ್ತ ಆಕರ್ಷಿತಳಾಗಿದ್ದಾಳೆ ಮತ್ತು ಆಕೆ ಜನವರಿ 2024 ರಲ್ಲಿ ಆತನ ಮೇಲೆ ಮೊದಲ ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ.

ಬಾಲಕನಿಗೆ ಮೊದಲಿಗೆ ಈ ಶಿಕ್ಷಕಿ ನಮ್ಮದು ಜನುಮ ಜನುಮದ ಅನುಬಂಧ (we were made for each other) ಎಂದು ಹೇಳಿ ತಲೆ ತುಂಬಿದ್ದಳು. ಆದರೆ ಆರಂಭದಲ್ಲಿ ಶಿಕ್ಷಕಿಯ ಈ ಮಾತನ್ನು ಬಾಲಕ ತಿರಸ್ಕರಿಸಿದ್ದಾನೆ. ಅಲ್ಲದೇ ಶಿಕ್ಷಕಿಯನ್ನು ನಿರ್ಲಕ್ಷಿಸಲು ಶುರು ಮಾಡಿದ್ದಾನೆ. ಆದರೆ ಶಿಕ್ಷಕಿ ನಂತರ ತನ್ನ ಶಾಲೆಗೆ ಸಂಬಂಧಿಸಿಲ್ಲದ ತನ್ನ ಸ್ನೇಹಿತೆಯ ಮೂಲಕ ವಿದ್ಯಾರ್ಥಿಗೆ ಕರೆ ಮಾಡಿಸಿದ್ದಾಳೆ. ಆಕೆ ಈ ಬಾಲಕನಿಗೆ ವಯಸ್ಸಾದ ಮಹಿಳೆಯರು ಮತ್ತು ಹದಿಹರೆಯದ ಹುಡುಗರ ನಡುವಿನ ಸಂಬಂಧಗಳು ತಪ್ಪಲ್ಲ ಅದೆಲ್ಲಾ ಸಾಮಾನ್ಯ, ನಿಮಗಾಗಿಯೇ ಆಕೆ ಆಕೆಗಾಗಿಯೇ ನೀನು ಹುಟ್ಟಿದ್ದೀರಿ ಎಂದು ಈ ಅಪ್ರಾಪ್ತನ ತಲೆ ತುಂಬಿದ್ದಾಳೆ. ಈಗ ಆ ಮಹಿಳೆಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.

ಇದಾದ ನಂತರ ಬಾಲಕ ಶಿಕ್ಷಕಿಯನ್ನು ಭೇಟಿ ಮಾಡಲು ನಿರ್ಧರಿಸಿದ್ದಾನೆ. ಈ ಬಾಲಕನನ್ನು ಶಿಕ್ಷಕಿ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಳು, ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದ, ಆತನನ್ನು ವಿವಸ್ತ್ರಗೊಳಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಳು. ಹೀಗೆ ಈಕೆ ನಿರಂತರ ದೌರ್ಜನ್ಯವೆಸಗಿದ ನಂತರ ವಿದ್ಯಾರ್ಥಿಗೆ ಇದರಿಂದ ತೀವ್ರ ಆತಂಕ ಒತ್ತಡ ಉಂಟಾಗಿದೆ. ಇದಕ್ಕೆ ಶಿಕ್ಷಕಿ ಆತನಿಗೆ ಒತ್ತಡ ನಿವಾರಕ ಮಾತ್ರೆಗಳನ್ನು ಕೂಡ ನೀಡಿದ್ದಾಳೆ. ಘಟನೆಯ ನಂತರ ಕೃತ್ಯಕ್ಕೆ ಬಳಸಿದ ಸೆಡಾನ್ ಕಾರನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ.

ಬರೀ ನಿರ್ಜನ ಪ್ರದೇಶ ಮಾತ್ರವಲ್ಲದೇ ಈ ಶಿಕ್ಷಕಿ ತನ್ನ ವಿದ್ಯಾರ್ಥಿಯನ್ನು ದಕ್ಷಿಣ ಮುಂಬೈ ನಗರದ ಹಲವು ಫೈವ್ ಸ್ಟಾರ್ ಹೊಟೇಲ್‌ಗಳಿಗೂ ಕರೆದುಕೊಂಡು ಹೋಗಿ ಹಲವು ಭಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ. ಅಲ್ಲದೇ ಕೆಲವು ಸಮಯದಲ್ಲಿ ಈಕೆ ಆತನಿಗೆ ಹೀಗೆ ಲೈಂಗಿಕ ದೌರ್ಜನ್ಯವೆಸಗುವ ಮೊದಲು ಮದ್ಯವನ್ನು ಕೂಡ ಕುಡಿಸಿದ್ದಾಳೆ. ಘಟನೆ ಬೆಳಕಿಗೆ ಬಂದ ನಂತರ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ಆಕೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಆದರೆ ಈ ಘಟನೆ ಈಗ ಇಡೀ ಮುಂಬೈ ನಗರವನ್ನೇ ಆಘಾತಕ್ಕೀಡು ಮಾಡಿದೆ. ಏಕೆಂದರೆ ಇದು ನಗರದ ಅತ್ಯಂತ ಪ್ರತಿಷ್ಠಿತ ಶಾಲೆಯಾಗಿದ್ದು, ಅಲ್ಲಿನ ಹಳೆ ವಿದ್ಯಾರ್ಥಿಗಳು ಹೆಮ್ಮೆ ಪಡುವಷ್ಟು ಪ್ರಸಿದ್ಧಿ ಪಡೆದ ಶಾಲೆಯಾಗಿತ್ತು.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಇತ್ತ ಬಾಲಕನ ನಡವಳಿಕೆಯಲ್ಲಿ ತೀವ್ರವಾದ ಬದಲಾವಣೆ ಕಂಡು ಬಂದ ಹಿನ್ನೆಲೆ ಪೋಷಕರು ಮಗನಲ್ಲಾದ ಬದಲಾವಣೆಯನ್ನು ಗಮನಿಸಿ ಆತನ ಬಳಿ ಪ್ರಶ್ನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಆತ ಹೀಗೆ ಶಿಕ್ಷಕಿಯಿಂದ ದೌರ್ಜನ್ಯಕ್ಕೊಳಗಾದ ಬಗ್ಗೆ ಹೇಳಿಕೊಂಡಿದ್ದಾನೆ. ಆದರೂ ಈ ವಿದ್ಯಾರ್ಥಿ ಕೆಲವೇ ತಿಂಗಳುಗಳಲ್ಲಿ ತನ್ನ ಕೋರ್ಸ್ ಮುಕ್ತಾಯಗೊಳ್ಳುವುದರಿಂದ ಶಿಕ್ಷಕಿ ಆಗಲಾದರೂ ಆತನನ್ನು ಬಿಟ್ಟು ಬಿಡಬಹುದು ಎಂಬ ಭರವಸೆಯೊಂದಿಗೆ ಈ ಪ್ರಕರಣದ ಬಗ್ಗೆ ಹೆಚ್ಚು ಸದ್ದು ಮಾಡದೇ ಮೌನವಾಗಿರಲು ನಿರ್ಧರಿಸಿದ್ದಾರೆ. ಆದರೆ ಶಿಕ್ಷಕಿಯ ಕಾಮುಕತನ ಅಲ್ಲಿಗೆ ನಿಂತಿಲ್ಲ.

ಈ ವರ್ಷದ ಆರಂಭದಲ್ಲಿ ವಿದ್ಯಾರ್ಥಿ ತನ್ನ ಬೋರ್ಡ್ ಎಕ್ಸಾಂ ಪಾಸು ಮಾಡಿದ್ದು, ಶಾಲೆಯನ್ನು ತೊರೆದಿದ್ದ, ಆದರೆ ನಂತರ ವಿದ್ಯಾರ್ಥಿ ಖಿನ್ನತೆಗೆ ಜಾರಿದ್ದಾನೆ. ವಿದ್ಯಾರ್ಥಿ ಶಾಲೆ ತೊರೆದು ಹೋದರೂ ಶಿಕ್ಷಕಿ ಆತನನ್ನು ಸುಮ್ಮನೆ ಬಿಟ್ಟಿಲ್ಲ, ಆತನ ಮನೆ ಕೆಲಸದ ಸಿಬ್ಬಂದಿಯ ಮೂಲಕ ಆತನನ್ನು ಮತ್ತೆ ಸಂಪರ್ಕಿಸಲು ಶಿಕ್ಷಕಿ ಯತ್ನಿಸಿದ್ದಾಳೆ. ಮನೆಕೆಲಸದಾಕೆಯ ಬಳಿ ಶಿಕ್ಷಕಿ, ನನ್ನನ್ನು ಬಂದು ಆತ ಭೇಟಿ ಆಗುವಂತೆ ಆತನಿಗೆ ಹೇಳಿ ಎಂದು ಹೇಳಿ ಕಳುಹಿಸಿದ್ದಾಳೆ. ಹೀಗಾಗಿ ಈ ಕಾಮುಕ ಶಿಕ್ಷಕಿ ತಮ್ಮ ಮಗನನ್ನು ಬಿಟ್ಟು ಬಿಡಲು ಸಿದ್ದಳಿಲ್ಲ ಎಂಬುದರ ಅರಿವಾದ ಪೋಷಕರು ನಂತರವಷ್ಟೇ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಾವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO)ಕಾಯ್ದೆ, 2012 ರ ಸೆಕ್ಷನ್ 4 ಗಡಿನಾಶಕ ಲೈಂಗಿಕ ದೌರ್ಜನ್ಯ (penetrative sexual assault), ಸೆಕ್ಷನ್ 6 ತೀವ್ರತರದ ಲೈಂಗಿಕ ದೌರ್ಜನ್ಯ(aggravated penetrative sexual assault), ಸೆಕ್ಷನ್ 17 ಅಪರಾಧಗಳಿಗೆ ಪ್ರಚೋದನೆ ಮತ್ತು ಭಾರತೀಯ ನ್ಯಾಯ ಸಂಹಿತೆಯ, ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ