
ಮುಂಬೈ (ಸೆ.16): ಕೊಲ್ಕತಾ ಆರ್‌ಜಿ ಕರ್ ಕಾಲೇಜು ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮುಂಬೈನ ಕಾಲೇಜೊಂದರಲ್ಲಿ ಸಹ ಪ್ರಾಧ್ಯಾಪಕನೊಬ್ಬ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಮುಂಬೈ ಸೆಂಟ್ರಲ್‌ನಲ್ಲಿ ನಗರಪಾಲಿಕೆ ನಡೆಸುವ ನಾಯರ್ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳಿಗೆ ಸಹ ಪ್ರಾಧ್ಯಾಪಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಆತನನ್ನು ಶನಿವಾರ ಅಮಾನತುಗೊಳಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ನಗರ ಪಾಲಿಕೆಯ ಸಮಿತಿ ಕೈಗೆತ್ತಿಕೊಂಡಿದೆ. ಈ ತನಿಖಾ ಸಮಿತಿಯ ತೀರ್ಮಾನವನ್ನು ಆಧರಿಸಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋಲ್ಕತಾ ಘಟನೆ ದಿಗ್ಭ್ರಮೆ ಹುಟ್ಟಿಸಿತು: ಮೊದಲ ಬಾರಿಗೆ ರೇಪ್ ಕೇಸ್ ಬಗ್ಗೆ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ವೈದ್ಯೆ ರೇಪ್: ಸೆ.17ರವರೆಗೆ ಡಾ ಘೋಷ್, ಮಂಡಲ್ ಸಿಬಿಐ ಕಸ್ಟಡಿಗೆ
ಕೋಲ್ಕತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಪ್ರಾಂಶುಪಾಲ ಡಾ। ಸಂದೀಪ್ ಘೋಷ್ ಹಾಗೂ ತಾಲಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಭಿಜಿತ್ ಮಂಡಲ್‌ರನ್ನು ಸೆ.17ರ ವರೆಗೆ ಸಿಬಿಐ ಕಸ್ಟಡಿಗೆ ಸ್ಥಳೀಯ ನ್ಯಾಯಾಲಯ ಒಪ್ಪಿಸಿದೆ. ವೈದ್ಯೆಯ ಸಾವನ್ನು ತಕ್ಷಣವೇ ಘೋಷಿಸದೆ, ಎಫ್‌ಐಆರ್ ದಾಖಲಿಸಿಕೊಳ್ಳುವಲ್ಲಿ ತಡ ಮಾಡಿ, ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಸಿಬಿಐ ಇವರ ವಿರುದ್ಧ ಆರೋಪಿಸಿ ಶನಿವಾರ ಬಂಧಿಸಿತ್ತು. ಇದರೊಂದಿಗೆ ಬಂಧಿತರ ಸಂಖ್ಯೆ 3ಕ್ಕೇರಿತ್ತು.
ಈ ನಡುವೆ, ಘೋಷ್, ಮಂಡಲ್‌ರನ್ನು ಕೋರ್ಟಿಗೆ ಕರೆತರುವಾಗ ಕೆಲವು ಪ್ರತಿಭಟನಾನಿರತ ವೈದ್ಯರು ಇವರ ವಿರುದ್ಧ ಘೋಷಣೆ ಕೂಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ