ಅಪ್ರಾಪ್ತನ ಅತೀ ವೇಗದ ಕಾರು ಡ್ರೈವಿಂಗ್‌ನಿಂದ ಇಬ್ಬರು ಮೃತಪಟ್ಟ ಘಟನೆ ಬೆನ್ನಲ್ಲೇ ಇದೀಗ ಮತ್ತೊರ್ವ ಅಪ್ರಾಪ್ತನ ಬೈಕ್ ರೈಡ್‌ಗೆ 32ರ ಹರೆಯದ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ.
ಮುಂಬೈ(ಮೇ.23) ಪುಣೆಯ ಶ್ರೀಮಂತ ಉದ್ಯಮಿಯ ಅಪ್ರಾಪ್ತ ಪುತ್ರನ ಕೈಗೆ ಕಾರು ನೀಡಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಈ ಘಟನೆ ತನಿಖೆ ಚುರುಕೊಂಡ ಬೆನ್ನಲ್ಲೇ ಮುಂಬೈನಲ್ಲಿ ಮತ್ತೊಂದು ಘಟನೆ ನಡೆದಿದೆ. ಇದೀಗ ಮುಂಬೈನಲ್ಲಿ ಅಪ್ರಾಪ್ತನ ಬೈಕ್ ರೈಡ್‌ಗೆ 32ರ ಹರೆಯದ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ. 15 ವರ್ಷದ ಬಾಲಕ ಬೈಕ್ ಅತೀ ವೇಗದಲ್ಲಿ ರೈಡ್ ಮಾಡಿದ್ದಾನೆ. ನಿಯಂತ್ರಣ ತಪ್ಪಿ ಪಾದಾಚಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.
ಮುಂಬೈ ನಗರದಲ್ಲಿ 15 ವರ್ಷದ ಬಾಲಕ ಬೈಕ್ ಮೂಲಕ ಅತೀ ವೇಗದಿಂದ ಸಾಗಿದ್ದಾನೆ. ಆದರೆ ಬೈಕ್ ನಿಯಂತ್ರಣ ಕಳೆದುಕೊಂಡಿದೆ. ಅತೀ ವೇಗದ ಪರಿಣಾಮ ಪಾದಾಚಾರಿ 32 ವರ್ಷದ ಇರ್ಫಾನ್ ನವಾಬ್ ಆಲಿ ಶೇಕ್‌ಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂ ಇರ್ಫಾನ್ ನವಾಬ್‌ನನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಜೆಜೆ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ತೀವ್ರ ಗಾಯಗೊಂಡಿದ್ದ ಇರ್ಫಾನ್ ನವಾಬ್ ಮೃತಪಟ್ಟಿದ್ದಾರೆ.
ಪೊರ್ಶೆ ಕಾರು ಅಪಘಾತಕ್ಕೂ ಮೊದಲು ಪಾರ್ಟಿಗಾಗಿ 48,000 ರೂ ಖರ್ಚು ಮಾಡಿದ್ದ ಉದ್ಯಮಿ ಪುತ್ರ!
ಇತ್ತ ಬೈಕ್ ಅಪಘಾತ ನಡೆಸಿದ 15 ವರ್ಷದ ಅಪ್ರಾಪ್ತನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತ ಬಾಲಕನಾಗಿರುವ ಕಾರಣ ಬಾಲಾಪರಾಧಿ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಇತ್ತ ಅಪ್ರಾಪ್ತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತರಿಗೆ ವಾಹನ ನೀಡಿದರೆ ಪೋಷಕರು ಶಿಕ್ಷೆ ಎದುರಿಸಬೇಕು. ಇದರಂತೆ 15 ವರ್ಷದ ಬಾಲಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪುಣೆಯಲ್ಲಿ ಉದ್ಯಮಿ ವಿಶಾಲ್ ಅಗರ್ವಾಲ್ ಪುತ್ರ ವೇದಾಂತ್ ಅಗರ್ವಾಲ್ ಐಷಾರಾಮಿ ಪೊರ್ಶೆ ಕಾರನ್ನು ಅತೀ ವೇಗದಿಂದ ಚಲಾಯಿಸಿ ಅಪಘಾತ ಮಾಡಿದ್ದ. ಈ ಘಟನೆಯಲ್ಲಿ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಬಾರ್‌ನಲ್ಲಿ ಪಾರ್ಟಿ ಮಾಡಿದ ಬಳಿಕ ಪೊರ್ಶೆ ಕಾರಿನ ಮೂಲಕ 150 ಕಿ.ಮೀ ವೇಗದಲ್ಲಿ ಡ್ರೈವಿಂಗ್ ಮಾಡಿದ್ದಾನೆ. ಅತೀ ವೇಗದಿಂದ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
17 ವರ್ಷದ ಬಾಲಕನಿಗೆ ಬಾಲಾಪರಾಧಿ ನ್ಯಾ ಮಂಡಳಿ ಘಟನೆ ನಡೆದ 15 ಗಂಟೆಗಳಲ್ಲಿ ಜಾಮೀನು ನೀಡಿತ್ತು. ಘಟನೆ ಕುರಿತು ಪ್ರಬಂಧ ಬರೆಯಲು ಹೇಳಿ ಷರತ್ತು ಬದ್ಧ ಜಾಮೀನು ನೀಡಿತ್ತು. ಈ ಜಾಮೀನಿಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆಕ್ರೋಶದ ಬೆನ್ನಲ್ಲೇ, ಜಾಮೀನು ರದ್ದುಗೊಳಿಸಿ, ಮಕ್ಕಳ ನಿಗಾ ಕೇಂದ್ರಕ್ಕೆ ಕಳುಹಿಸಲು ಸೂಚಿಸಲಾಗಿದೆ.
ಪೋರ್ಶೆ ಕಾರು ಹತ್ತಿಸಿ ಇಬ್ಬರ ಕೊಂದ ಬಿಲ್ಡರ್ ಪುತ್ರನಿಗೆ ಬಿರಿಯಾನಿ, ಪಿಜ್ಜಾ ಕೊಟ್ರಾ ಪೊಲೀಸರು?