ಕರು ಕೊಂದ ಅಪ್ಪನಿಗೆ ಅಪ್ರಾಪ್ತ ಮಗಳನ್ನು ಮದುವೆ ಆಗೋ ಶಿಕ್ಷೆ!

Published : Feb 17, 2020, 08:18 AM ISTUpdated : Feb 17, 2020, 08:56 AM IST
ಕರು ಕೊಂದ ಅಪ್ಪನಿಗೆ ಅಪ್ರಾಪ್ತ ಮಗಳನ್ನು ಮದುವೆ ಆಗೋ ಶಿಕ್ಷೆ!

ಸಾರಾಂಶ

ವ್ಯಕ್ತಿಯೊಬ್ಬನ ಬೈಕ್‌ ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಸಾವನ್ನಪ್ಪಿದ ಕರು| ಕರು ಕೊಂದ ಅಪ್ಪನಿಗೆ ಅಪ್ರಾಪ್ತ ಮಗಳನ್ನು ಮದುವೆ ಮಾಡೋ ಶಿಕ್ಷೆ| 

ಭೋಪಾಲ್‌[ಫೆ.17]: ಕರುವೊಂದನ್ನು ಸಾಯಿಸಿದ ಕಾರಣಕ್ಕೆ ಅಪ್ಪನಿಗೆ ಆತನ ಅಪ್ರಾಪ್ತ ಮಗಳನ್ನೇ ಮದುವೆ ಮಾಡಿಕೊಡುವಂತಹ ಶಿಕ್ಷೆ ನೀಡಿದ ಪದ್ಧತಿ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬನ ಬೈಕ್‌ ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಕರು ಸಾವನ್ನಪ್ಪಿತ್ತು. ಇದಕ್ಕೆ ಸ್ಥಳೀಯ ಸಂಪ್ರದಾಯದ ಅನ್ವಯ ಪಂಚಾಯತ್‌ ಸದಸ್ಯರು, ಅಪ್ರಾಪ್ತ ಮಗಳನ್ನೇ ಮದುವೆ ಮಾಡಿಕೊಟ್ಟು, ಪಾಪ ಪರಿಹಾರ ಸೂಚಿಸಿದ್ದರು. ಅದಕ್ಕೆ ವ್ಯಕ್ತಿ ಸಿದ್ಧವಾಗಿರುವ ಹೊತ್ತಿನಲ್ಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮತ್ತು ಪೊಲಿಸರು ಮದುವೆ ತಡೆದಿದ್ದಾರೆ.

ಕರು ಕೊಂದವರಿಗೆ, ಗಂಗೆಯಲ್ಲಿ ಸ್ಥಾನ ಮಾಡುವ ಇಲ್ಲವೇ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು ಪಾಪ ಪರಿಹಾರ ಮಾಡಿಕೊಳ್ಳುವ ಸಂಪ್ರದಾಯ ಮಧ್ಯಪ್ರದೇಶದಲ್ಲಿ ಜಾರಿಯಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS
ಡಿಜಿಟಲ್ ಅರೆಸ್ಟ್‌ಗೆ ಹೆದರಿ ಕೋಟಿಗಟ್ಟಲೆ ಬೆಲೆಬಾಳುವ ಸೈಟ್, ಮನೆ ಮಾರಿದ ಬೆಂಗಳೂರು ಮಹಿಳಾ ಟೆಕ್ಕಿ!