ದುಡ್ಡಿಗಾಗಿ ಇಬ್ಬರೂ ಹೆಂಡತಿಯರೊಂದಿಗಿನ ಸೆಕ್ಸ್ ಲೈವ್ ಬಿಟ್ಟ ಪತಿರಾಯ!

Published : Oct 25, 2020, 05:15 PM ISTUpdated : Oct 25, 2020, 05:21 PM IST
ದುಡ್ಡಿಗಾಗಿ ಇಬ್ಬರೂ ಹೆಂಡತಿಯರೊಂದಿಗಿನ ಸೆಕ್ಸ್ ಲೈವ್ ಬಿಟ್ಟ ಪತಿರಾಯ!

ಸಾರಾಂಶ

ಹಣ ಮಾಡಲು ಎಂಥ ಕೆಲಸ ಮಾಡಿದ ಪಾಪಿ ಗಂಡ/ ಹೆಂಡತಿಯರೊಂದಿಗಿನ ಸೆಕ್ಸ್ ಲೈವ್ ಸ್ಟ್ರೀಮ್/  ಡೇಟಿಂಗ್ ಆಪ್ ಬಳಕೆದಾರರಿಂದ ಹಣ ವಸೂಲಿ/  ಹೆಂಡತಿ ದೂರು ನೀಡಿದ ಮೇಲೆ ಬೆಳಕಿಗೆ ಬಂದ ಪ್ರಕರಣ

ಭೋಪಾಲ್(ಅ. 25) ತನ್ನ ಇಬ್ಬರು ಹೆಂಡತಿಯರೊಂದಿಗೆ ಸೆಕ್ಸ್ ಮಾಡುತ್ತಿರುವ ದೃಶ್ಯಯವನ್ನು ಮಧ್ಯಪ್ರದೇಶದ ಮಹಾಪುರುಷನೊಬ್ಬ ವಿವಿಧ ತಾಣಗಳಲ್ಲಿ ಲೈವ್ ಬಿಟ್ಟಿದ್ದಾನೆ. ಹಣಕ್ಕೋಸ್ಕರ ಹೀಗೆ ಮಾಡಿದ್ದು ಯೂಸರ್ ಗಳ ಬಳಿ ಬೇಡಿಕೆಯಿಟ್ಟಿದ್ದಾನೆ.  ಎರಡನೇ ಹೆಂಡತಿ ಪೊಲೀಸರ ಬಳಿ ದೂರು ದಾಖಲಿಸಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

ತಮ್ಮ ಖಾಸಗಿ ಕ್ಷಣಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಗಂಡ ಮಹಾಪುರುಷ ಈ ರೀತಿ ಲೈವ್ ಮಾಡಿ ಲಕ್ಷಾಂತರ ರೂ. ಗಳಿಸಿಕೊಂಡಿದ್ದಾನೆ.

ಹಲವಾರು ಡೇಟಿಂಗ್ ಆಪ್ ಬಳಕೆ: ಹತ್ತನೇ ತರಗತಿಗೆ ಶಾಲೆ ಬಿಟ್ಟಿದ್ದ ಆರೋಪಿ ತಂತ್ರಜ್ಞಾನದಲ್ಲಿ ತನ್ನದೇ ಆದ ಪ್ರೌಢಿಮೆ ಬೆಳೆಸಿಕೊಂಡಿದ್ದ. ಡೆಟಿಂಗ್ ಆಪ್ ಗಳಲ್ಲಿ ಸದಾಆಕ್ಟೀವ್ ಆಗಿದ್ದು ಅಲ್ಲಿ ದುಡ್ಡು ಮಾಡುವ ಪ್ಲಾನ್ ಹಾಕಿದ್ದ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ  ಮಾಡಿದ

ಡಿಸ್ಪ್ಲೇ ಚಿತ್ರವೊಂದನ್ನು ಡೇಟಿಂಗ್‌ ಆಪ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದ. ಅದನ್ನು ಕ್ಲಿಕ್ ಮಾಡಿದ ವ್ಯಕ್ತಿಗೆ ಸಂದೇಶವೊಂದು ಹೋಗುತ್ತಿದ್ದು  ಕ್ಲಿಕ್ ಮಾಡಿದ ವ್ಯಕ್ತಿಗೆ ಮೆನು ವೊಂದು ತೆರೆದುಕೊಳ್ಳುತ್ತಿತ್ತು.

ಡೆಮೋ ನೋಡಲು 100 ರೂ.  ಇದಾದ ಮೇಲೆ ಮುಖ ಇಲ್ಲದಿರುವ ಸೆಕ್ಸ್ ನೋಡಲು ಸಾವಿರ ..ಮುಖ ಹೊಂದಿರುವ ಲೈವ್ ಸೆಕ್ಸ್ ನೋಡಲು ಸಾವಿರಕ್ಕೂ ಜಾಸ್ತಿ ಎಂಬಂತೆ ದರ ನಿಗದಿ ಮಾಡಿರುತ್ತಿದ್ದ.

ಮೊದಲನೆ ಹೆಂಡತಿ ಬೆಂಗಳೂರು ಮೂಲದವಳು. ಏಳು ತಿಂಗಳ ಗರ್ಭಿಯಾಗಿದ್ದಾಗ ಆಕೆಗೆ ಸೋಶಿಯಲ್ ಮೀಡಿಯಾದಲ್ಲಿ ಈತನ ಪರಿಚಯವಾಗಿದೆ. ಎರಡನೇ ಹೆಂಡತಿ ಆಧಾತ್ಮ ಗುರುವೊಬ್ಬರ ಅನುಯಾಯಿಯಾಗಿದ್ದು ತಾನು ಆ ಗುರುವಿನ ಫಾಲೋವರ್ ಎಂದು ನಂಬಿಸಿದ್ದ. ಮೊದಲೆನೆ ಹೆಂಡತಿ ಯಾವುದೇ ದೂರು ನೀಡಲ್ಲ. ಆರೋಪಿ ತಪ್ಪು ಒಪ್ಪಿಕೊಂಡಿದ್ದು ವಿವಿಧ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!