ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಇಬ್ಬರು ಅಮಾಯಕರ ಬಲಿಪಡೆದ ಪ್ರಕರಣದಲ್ಲಿ ಪುಣೆ ಬಾಲಕನ ರಕ್ಷಣೆಗೆ ಆತನ ತಾಯಿಯೇ ಮುಂದಾಗಿದ್ದ ವಿಷಯ ಬೆಳಕಿಗೆ ಬಂದಿದೆ.
ನವದೆಹಲಿ (ಮೇ.31): ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಇಬ್ಬರು ಅಮಾಯಕರ ಬಲಿಪಡೆದ ಪ್ರಕರಣದಲ್ಲಿ ಪುಣೆ ಬಾಲಕನ ರಕ್ಷಣೆಗೆ ಆತನ ತಾಯಿಯೇ ಮುಂದಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಬಾಲಕನ ಬಚಾವ್ ಮಾಡಲು ಆತನ ರಕ್ತದ ಮಾದರಿ ಬದಲಾಯಿಸಲಾಗಿತ್ತು ಎಂಬ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆದರೆ ಹೀಗೆ ಪುತ್ರನ ರಕ್ತನ ಮಾದರಿ ಬಾಟಲ್‌ನಲ್ಲಿ ಆತನ ತಾಯಿ ಶಿವಾನಿ ಅಗರ್ವಾಲ್ ತನ್ನ ರಕ್ತವನ್ನು ಸೇರಿಸಿದ್ದರು. ಇದಕ್ಕಾಗಿ ವೈದ್ಯರು ಬಾಲಕನ ಕುಟುಂಬದಿಂದ 3 ಲಕ್ಷ ರು. ಲಂಚ ಸ್ವೀಕರಿಸಿದ್ದರು ಎಂದು ಪ್ರಕರಣ ಸಂಬಂಧ ಬಂಧಿತ ವೈದ್ಯ ಶ್ರೀಹರಿ ಹಾಲ್ನೋರ್ ತಪ್ಪೊಪ್ಪಿಕೊಂಡಿದ್ದಾರೆ. ಬಾಲಕ ಮದ್ಯ ಸೇವನೆ ಮಾಡಿಲ್ಲ ಎಂದು ಸಾಬೀತುಪಡಿಸಲು ಆತನ ರಕ್ತದ ಮಾದರಿಯನ್ನೇ ಬದಲಾಯಿಸಲಾಗಿತ್ತು. ಮೇ 19ರ ಅಪಘಾತ ಮಾಡಿದ 17 ವರ್ಷದ ಅಪ್ರಾಪ್ತನ ರಕ್ತ ಮಾದರಿ ಸಂಗ್ರಹಿಸಲು ಸಸೂನ್ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಅಜಯ್ ತಾವಡೆ ಸೂಚನೆ ಮೇರೆಗೆ ಮುಖ್ಯ ವೈದ್ಯಾಧಿಕಾರಿ ಡಾ. ಹರಿ ಹಾರ್ನೋರ್ ಈ ದುಷ್ಕೃತ್ಯ ಎಸಗಿದ್ದಾರೆ. ಡಾ. ಅಜಯ್ ತಾವಡೆ ಅಪ್ರಾಪ್ತ ಬಾಲಕನ ತಂದೆಯ ಜೊತೆ ತಮ್ಮ ಮೊಬೈಲ್‌ನಲ್ಲಿ ಹಲವು ಬಾರಿ ಸಂಭಾಷಣೆ ನಡೆಸಿರುವುದು ಪತ್ತೆಯಾಗಿದೆ.
ಮೇ 31ರಂದೇ ಪ್ರಜ್ವಲ್ ರೇವಣ್ಣ ಆಗಮನಕ್ಕೆ ಜ್ಯೋತಿಷಿಗಳು ಇಟ್ಟ ಮುಹೂರ್ತ, ಆರೋಪಿಗೀಗ ರಾಹು ದೆಸೆ!
undefined
ಆಪ್ರಾಪ್ತಗೆ ಜಾಮೀನು ಕೊಟ್ಟ ಜೆಜೆಬಿ ಅಧಿಕಾರಿ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ!
ಪೋರ್ಷೆ ಅಪಘಾತದಲ್ಲಿ ಅಪ್ರಾಪ್ತ ಬಾಲಕನಿಗೆ ರಸ್ತೆ ಅಪಘಾತದ ಕುರಿತು ಪ್ರಬಂಧ ಬರೆಯುವ ಷರತ್ತಿನ ಮೇಲೆ 15 ಗಂಟೆಗಳಲ್ಲೇ ಜಾಮೀನು ನೀಡಿ ಟೀಕೆಗೆ ಗುರಿಯಾಗಿದ್ದ ಬಾಲಾಪರಾಧ ನ್ಯಾಯಮಂಡಳಿಯ ಅಧಿಕಾರಿ ಎಲ್ ಎನ್ ದಾನವಾಡೆ ಅವರೇ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಗುರುವಾರ ಅವರನ್ನು ಪ್ರಶ್ನಿಸಲು ಪತ್ರಕರ್ತರು ಜಮಾಯಿಸಿದಾಗ ದಾನವಾಡೆ ಪತ್ರಕರ್ತರನ್ನು ತಪ್ಪಿಸಿಕೊಳ್ಳುವ ಸಲುವಾಗಿ ಹೆಲ್ಮೆಟ್ ಇಲ್ಲದೇ ಬೈಕ್‌ನಲ್ಲಿ ಆತುರಾತುರವಾಗಿ ಹೊರಟರು. ಬಳಿಕ ಪತ್ರಕರ್ತರೊಬ್ಬರು ಕಾರ್‌ನಲ್ಲಿ ಅವರನ್ನು ಹಿಂಬಾಲಿಸಿ ಪ್ರಶ್ನಿಸಲು ಮುಂದಾದರೂ ಉತ್ತರಿಸದೆ ಮುಂದಕ್ಕೆ ತೆರಳಿದ ಪ್ರಸಂಗ ನಡೆದಿದೆ.
ಜಾಮೀನು ನೀಡಿದವರ ಬಗ್ಗೆ ತನಿಖೆಗೆ ಸಮಿತಿ ರಚನೆ: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಇಬ್ಬರ ಬಲಿ ಪಡೆದ ಅಪ್ರಾಪ್ತ ಬಾಲಕನಿಗೆ ಕೇವಲ 14 ಗಂಟೆಯಲ್ಲಿ ಜಾಮೀನು ನೀಡಿದ್ದೂ ಅಲ್ಲದೆ ವಿವಾದಿತ ರೀತಿಯಲ್ಲಿ ಷರತ್ತು ವಿಧಿಸಿದ ಬಾಲಾಪರಾಧ ನ್ಯಾಯಾಂಗ ಮಂಡಳಿ ವಿರುದ್ಧವೇ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಸರ್ಕಾರ 5 ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಈ ಪ್ರಕಣದಲ್ಲಿ ಆದೇಶ ಹೊರಡಿಸುವಾಗ ಬಾಲಾಪರಾಧ ನ್ಯಾಯಾಂಗ ಮಂಡಳಿಯ (ಜೆಜೆಬಿ) ಸದಸ್ಯರ ನಡವಳಿಕೆ ಮತ್ತು ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಸಮಿತಿ ಪರಿಶೀಲಿಸಿ ಒಂದು ವಾರದಲ್ಲಿ ತನ್ನ ವರದಿ ಸಲ್ಲಿಸಲಿದೆ.
ಒಂದೇ ವರ್ಷದಲ್ಲಿ 500 ರೂ ಮುಖಬೆಲೆಯ ನೋಟುಗಳ ಬಳಕೆ ಭಾರೀ ಏರಿಕೆ!
ಅಪಘಾತ ಕೇಸಲ್ಲಿ ಪುಣೆ ಬಾಲಕನ ರಕ್ಷಣೆಗೆ ಎನ್‌ಸಿಪಿ ಅಜಿತ್ ಪವಾರ್ ನೆರವು?
ಕಾರು ಅಪಘಾತದಲ್ಲಿ ಇಬ್ಬರನ್ನು ಬಲಿಪಡೆದ ಶ್ರೀಮಂತ ಕುಟುಂಬದ ಅಪ್ರಾಪ್ತ ಬಾಲಕನಿಗೆ ರಕ್ಷಣೆ ನೀಡಲು ಎನ್‌ಸಿಪಿ ನಾಯಕ ಅಜಿತ್ ಪವಾರ್ ಪ್ರಯತ್ನಿಸುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಾಲಕ ಮದ್ಯಪಾನ ಮಾಡಿಲ್ಲ ಎಂದು ಸಾಬೀತುಪಡಿಸಲು ನಡೆದ ರಕ್ತದ ಮಾದರಿಯ ಬದಲಾವಣೆ ಕೃತ್ಯಕ್ಕೆ ನೆರವಾಗುವಂತೆ ಆಸ್ಪತ್ರೆ ಹಿರಿಯರಿಗೆ ಮತ್ತು ಹಿರಿಯ ಪೊಲೀಸರಿಗೆ ಕರೆ ಮಾಡಿ ಅಜಿತ್ ಪವಾರ್ ಸೂಚಿಸಿದ್ದರು ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಜಿತ್ ಪವಾರ್ ಸತ್ಯಾಂಶ ಏನು ಎಂಬುದು ತನಿಖೆಯಿಂದ ಹೊರ ಬರಬೇಕಿದೆ ಎಂದು ಹೇಳಿದ್ದಾರೆ.