Mother kills 3 year old son: ತನ್ನ ಪ್ರಿಯಕರನ ಜತೆ ಸೇರಿ ಮೂರು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಒಡಿಶಾ (ಅ. 05): ತನ್ನ ಪ್ರಿಯಕರನ ಜತೆ ಸೇರಿ ಮೂರು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ 32 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾದ ಕೆರ್ಂದ್ರಪಾರಾ ಜಿಲ್ಲೆಯ ಪಟ್ಟಮುಂಡೈನ ಮಟಿಯಪಾಡಾ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮಗುವನ್ನು ಕೊಂದ ಬಳಿಕ ಇಬ್ಬರೂ ಸೇರಿ ಮೃತ ದೇಹವನ್ನು ಹೂತು ಹಾಕಿದ್ದಾರೆ. ಆರೋಪಿಗಳನ್ನು ಸಸ್ಮಿತಾ ನಾಥ್ ಮತ್ತು ಲಕ್ಷ್ಮೀಧರ್ ಬಾಯಿ (26) ಎಂದು ಗುರುತಿಸಲಾಗಿದೆ.
ಮಹಿಳೆಯ 12 ವರ್ಷದ ಮಗಳು ತನ್ನ ಸಹೋದರನನ್ನು ತಾಯಿ ಮತ್ತು ಆಕೆಯ ಪ್ರಿಯಕರ ಕೊಂದಿದ್ದಾರೆ ಎಂದು ಆರೋಪಿಸಿದಾಗ ಈ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮಗುವಿನ ಶವವನ್ನು ಹೊರತೆಗೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 302 ಮತ್ತು 201 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ. ಮಗು ಕೊಲೆ ಹಿಂದಿನ ಕಾರಣ ಮತ್ತು ಹೇಗೆ ಕೊಂದರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೆತ್ತವಳಿಗೆ ಮಗನ ಭವಿಷ್ಯ ಮುಖ್ಯ; ಆದರೆ ಮಗನಿಗೆ ತಾಯಿ ಸಾವೇ ಮುಖ್ಯ!
ಇನ್ನು ಮಹಿಳೆಯ ಪತಿ ಬೆಂಗಳೂರಿನಲ್ಲಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ಕಳೆದ ಎರಡು ವರ್ಷಗಳಿಂದ ಮಹಿಳೆ ಜತೆ ಲಕ್ಷ್ಮಿಧರ್ ಬಾಯಿಗೆ ಪ್ರೀತಿ ಪ್ರೇಮ ಹುಟ್ಟಿಕೊಂಡಿದೆ. ಈತ ಮಹಿಳೆಯ ಮಗಳಿಗೆ ಖಾಸಗಿ ಟ್ಯೂಷನ್ ಹೇಳುತ್ತಿದ್ದ. ಹೀಗಾಗಿ ಲಕ್ಷ್ಮಿಧರ್ ಮಹಿಳೆ ಮನೆಗೆ ಪ್ರತಿನಿತ್ಯ ಬರುತ್ತಿದ್ದ ಎಂದು ವರದಿಗಳು ತಿಳಿಸಿವೆ.
ಬೆಂಗಳೂರು: ಪತ್ನಿಯನ್ನು ಕೊಂದು, ಆತ್ಮಹತ್ಯೆ ನಾಟಕ: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತನ್ನ ಪತ್ನಿಯನ್ನು ಹಿಸುಕಿ ಕೊಂದು ಬಳಿಕ ಆತ್ಮಹತ್ಯೆಯ ನಾಟಕವಾಡಿದ್ದ ವ್ಯಕ್ತಿಯೊಬ್ಬನನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇವರಚಿಕ್ಕನಹಳ್ಳಿ ಸಮೀಪದ ಚೌಡೇಶ್ವರಿ ಲೇಔಟ್ ನಿವಾಸಿ ಸಂಗೀತಾ (40) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ಮೃತಳ ಪತಿ ಮನುನನ್ನು ಪೊಲೀಸರು ಬಂಧಿಸಿದ್ದಾರೆ.
ಕಪ್ಪಗಿದ್ದೀಯ ಎಂದು ಪತಿ ಟೀಕೆ; ಗಂಡನ ಮರ್ಮಾಂಗ ಕತ್ತರಿಸಿ, ಕೊಡಲಿಯಿಂದ ಕೊಂದ ಪತ್ನಿ
ಎರಡು ದಿನಗಳ ಹಿಂದೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಘಟನೆ ಬಳಿಕ ನಿದ್ರೆ ಮಾಡುತ್ತಿದ್ದ ಪತ್ನಿಯನ್ನು ಕೊಂದು ಬಳಿಕ ಆರೋಪಿ, ತಾನೇ ಪತ್ನಿಯನ್ನು ನೇಣು ಹಾಕಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಮೃತಳ ಪತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂಭತ್ತು ತಿಂಗಳ ಹಿಂದೆ ಕೊಡಗು ಜಿಲ್ಲೆಯ ಸಂಗೀತಾ ಹಾಗೂ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮನು ಪ್ರೇಮ ವಿವಾಹವಾಗಿದ್ದು, ಮದುವೆ ಬಳಿಕ ಚೌಡೇಶ್ವರಿ ಲೇಔಟ್‌ನಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಸಂಗೀತಾ ಕೆಲಸ ಮಾಡುತ್ತಿದ್ದರೆ, ಮನು ವೆಲ್ಡರ್ ಆಗಿದ್ದ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು. ಅಂತೆಯೇ ಭಾನುವಾರ ರಾತ್ರಿ ದಂಪತಿ ನಡುವಿನ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.