ಮೃತ ಶಕುಂತಲಾಳ ಪತಿ ವರ್ಷದ ಹಿಂದೆ ಮೃತಪಟ್ಟಿದ್ದರು, ಇದರಿಂದಾಗಿ ಅವರು ತೀವ್ರ ನೊಂದಿದ್ದರು| ವಿವಾಹಿತ ಮಗಳು ಗಂಗಾ ಸಹ ಮಾನಸಿಕ ಅಸ್ವಸ್ಥಳಾಗಿದ್ದಳು| ಮನನೊಂದು ಇಬ್ಬರೂ ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ|
ಬಸವನಬಾಗೇವಾಡಿ(ಜು.13): ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಸಮೀಪದ ಕೃಷ್ಣಾ ನದಿ ದಂಡೆಯಲ್ಲಿ ಭಾನುವಾರ ತಾಯಿ-ಮಗಳ ಶವ ಪತ್ತೆಯಾಗಿವೆ. ವಿಜಯಪುರದ ಶಕುಂತಲಾ ಸಿದ್ದಣ್ಣ ಖೇಡ (50), ಇವರ ಮಗಳಾದ ಗಂಗಾ ಉದಯ ಹುಣಶ್ಯಾಳ (22) ಮೃತ ದುರ್ದೈವಿಗಳು.
ಶಕುಂತಲಾಳ ಪತಿ ವರ್ಷದ ಹಿಂದೆ ಮೃತಪಟ್ಟಿದ್ದರು. ಇದರಿಂದಾಗಿ ಅವರು ತೀವ್ರ ನೊಂದಿದ್ದರು. ವಿವಾಹಿತ ಮಗಳು ಗಂಗಾ ಸಹ ಮಾನಸಿಕ ಅಸ್ವಸ್ಥಳಾಗಿದ್ದಳು. ಮನನೊಂದು ಇಬ್ಬರೂ ಶನಿವಾರ ಯುಕೆಪಿ ಕ್ರಾಸ್ ಸಮೀಪದ ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿಗೆ ಹಾರಿದ್ದರು ಎನ್ನಲಾಗಿದೆ.
ಪ್ರಿಯಕರನ ತೋಳ ತೆಕ್ಕೆಗೆ ಬರಲೊಪ್ಪದ ತಾಯಿ, ಬಲಿಯಾಗಿದ್ದು ಮಾತ್ರ ಪುಟ್ಟ ಮಗು!
ಭಾನುವಾರ ಬಳೂತಿ ಜಾಕ್‌ವೆಲ್ ಸಮೀಪ ನದಿ ತೀರದಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.