ಕಲಬುರಗಿ: ಗಂಡ, ಅತ್ತೆಯ ಕಿರುಕುಳ, 2 ವರ್ಷದ ಕಂದಮ್ಮಳನ್ನ ಕೊಲೆಗೈದು ನೇಣಿಗೆ ಶರಣಾದ ತಾಯಿ

By Girish Goudar  |  First Published Feb 14, 2024, 10:36 AM IST

2 ವರ್ಷದ ಪುತ್ರಿಯನ್ನ ಕೊಲೆ ಮಾಡಿ ತಾಯಿಯೂ ನೇಣು ಹಾಕಿಕೊಂಡು ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದ ಘಟನೆ. 


ಕಲಬುರಗಿ(ಫೆ.14):  2 ವರ್ಷದ ಪುತ್ರಿಯನ್ನ ಕೊಲೆ ಮಾಡಿ ತಾಯಿಯೂ ನೇಣು ಹಾಕಿಕೊಂಡು ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮರಪಳ್ಳಿ ಗ್ರಾಮದಲ್ಲಿ ನಿನ್ನೆ(ಮಂಗಳವಾರ) ಸಂಜೆ ನಡೆದಿದೆ. ಶಿವಲೀಲಾ (23) ವರ್ಷಿತಾ (2) ಮೃತ ದುರ್ದೈವಿಗಳಾಗಿದ್ದಾರೆ. 

ನಿನ್ನೆ ಸಂಜೆ ಮರಪಳ್ಳಿ ಗ್ರಾಮದ ನಿವಾಸದಲ್ಲಿ ಶಿವಲೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂಚೋಳಿ ತಾಲ್ಲೂಕಿನ ಕೆರೋಳ್ಳಿ ಗ್ರಾಮದ ನಿವಾಸಿ ಶಿವಲೀಲಾ ಮೂರು ವರ್ಷದ ಹಿಂದೆ ಮರಪಳ್ಳಿ ಗ್ರಾಮದ ಆನಂದ ಜೊತೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಗಂಡ, ಅತ್ತೆ ಶಿವಲೀಲಾ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಗಂಡ ಅತ್ತೆಯ ಕಿರುಕುಳಕ್ಕೆ ಬೇಸತ್ತು ಶಿವಲೀಲಾ ತವರು ಮನೆಗೆ ಬಂದಿದ್ದರಂತೆ.

Tap to resize

Latest Videos

undefined

ಶಿಕ್ಷಕನಿಂದ ಮಾನಹಾನಿಕಾರಕ ಮೆಸೇಜ್ ರವಾನೆ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ! 

ಎರಡು ದಿನದ ಹಿಂದೆಯಷ್ಟೆ ಶಿವಲೀಲಾ ಮತ್ತೆ ಗಂಡನ ಮನೆಗೆ ತರಳಿದ್ದರು. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

click me!