ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘ ಮುಖಂಡನ ಪತ್ನಿ

By Suvarna News  |  First Published Sep 4, 2022, 11:55 AM IST

ರೈತ ಸಂಘ ಮುಖಂಡನ ಪತ್ನಿ ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿರುವ ಘೋರ ದುರಂತ ಮಾಗಡಿಯಲ್ಲಿ ನಡೆದಿದೆ.


ರಾಮನಗರ, (ಸೆಪ್ಟೆಂಬರ್. 04): ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೊಸ ಪಾಳ್ಯದಲ್ಲಿ ನಡೆದಿದೆ.

ತಾಲೂಕು ರೈತ ಸಂಘದ ಮುಖಂಡ ಹೊಸಪಾಳ್ಯ ಗ್ರಾಮದ ಲೋಕೇಶ್​ ಅವರ ಪತ್ನಿ ರೂಪಾ (38) ಇವರ ಮಕ್ಕಳಾದ 6 ವರ್ಷದ ಹರ್ಷಿತ ಮತ್ತು 4 ವರ್ಷದ ಸ್ಪೂರ್ತಿ ಆತ್ಮಹತ್ಯೆ ಶರಣಾದವರು.

Tap to resize

Latest Videos

ತಮ್ಮ ಜಮೀನಿಗೆ ಹೋಗಿ ರೂಪ ತನ್ನಿಬ್ಬರ ಮಕ್ಕಳಿಗೆ ವಿಷ ಉಣಿಸಿ ನಂತರ ತಾನೂ ಸಹ ಸಹ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಒಂದೇ ಕುಟುಂಬದ ಮೂವರ ಸಾವು ಪ್ರಕರಣ, ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ 

ಸಾವಿನ ಸುತ್ತ ಅನುಮಾನದ ಹುತ್ತ
ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಸ್ವತಃ ‌ರೂಪ ಅವರ ಮಾವನಾದ ಮುನಿಸ್ವಾಮಿಯೇ ವಿಷ ಉಣಿಸಿ  ಸಾಯಿಸಿದ್ದಾರೆ ಎಂಬ ಆರೋಪ‌ ಇದೀಗ ಕೇಳಿ ಬರುತ್ತಿದೆ. ಕಳೆದ 4 ನಾಲ್ಕು ತಿಂಗಳಿಂದ ಜಮೀನಿನ  ಮನೆಯಲ್ಲಿ ಲೋಕೆಶ್ ತನ್ನ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ರು, ಇತ್ತೀಚಿಗಷ್ಟೇ ಲೋಕೆಶ್ ಅವರ ತಾಯಿಗೆ ಅನಾರೋಗ್ಯದ ಸಮಸ್ಯೆ ಕಾರಣ ಒಂದೇ ಮನೆಯಲ್ಲಿ ವಾಸ ಮಾಡುವಂತೆ ಕುಟುಂಬಸ್ಥರು ಒತ್ತಾಯಿಸಿದರು. ಆಗಾಗಿ ಕಳೆದ ಕೆಲ ದಿನಗಳಿಂದ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಸೊಸೆ, ಮೊಮ್ಮಕ್ಕಳನ್ನೇ ವಿಷ ಉಣಿಸಿ ಸಾಯಿಸಿದ್ರಾ ಮಾವ?
ಸದ್ಯ ಇದೀಗ ಮೇಲ್ನೋಟಕ್ಕೆ ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದ್ರು ಸಹ, ರೂಪ ಅವರ ಮಾವ ಮುನಿಸ್ವಾಮಿಯೇ ಎಲ್ಲರಿಗೂ ವಿಷ ಉಣಿಸಿ ಸಾಯಿಸಿದ್ದಾರೆ ಎಂದು ರೂಪ ಅವರ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಮನೆಯಲ್ಲಿ ವಾಸಿಸುತ್ತಿದ್ದ ವೇಳೆ ದಿನನಿತ್ಯ ನಮ್ಮ‌ ರೂಪಳಿಗೆ ಮಾವ ಮುನಿಸ್ವಾಮಿ ಚಿತ್ರ ಹಿಂಸೆ ಕೊಡುತ್ತಿದ್ದರು, ನಮ್ಮ ಕುಟುಂಬದ ಸದಸ್ಯರ ಜೊತೆ ಮಾತಾನಾಡೋಕು ಬಿಡುತ್ತಿರುಲಿಲ್ಲ, ಪೋನ್ ಸಹ ಕಿತ್ತುಕೊಂಡಿದ್ದರು, ಆಗಾಗಿ ನಮಗೆ ಅನುಮಾನ ಇದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಮಾಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಂತರ ಸತ್ಯಾ ಸತ್ಯರೆ ಹೊರ ಬರಲಿದೆ.

ಈ ಘಟನೆಗೆ ಸಂಬಂಧ ಇದುವರೆಗೆ ಯಾವುದೇ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಲೋಕೇಶ್​ ಅವರಾಗಲಿ, ಸ್ಥಳೀಯರಾಗಲಿ ಏನು ಹೇಳಿಕೆ ನೀಡಿಲ್ಲ. ಈ ಬಗ್ಗೆ ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಬಳಿಕ ಆತ್ಮಹತ್ಯೆಗೆ ಸತ್ಯಾಂಶ ಹೊರಬರಲಿದೆ.

ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಶಿಕ್ಷೆ
ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಪತಿಗೆ  ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 40 ಸಾವಿರ ರೂ . ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ ನಾಲ್ಕು ತಿಂಗಳು ಕಾರಾಗೃಹ ಶಿಕ್ಷೆ ನೀಡಿ ತೀರ್ಪು ನೀಡಿದೆ.

ಶಿರಾಳಕೊಪ್ಪ ಸಮೀಪದ ಬಿಳಕಿ ಗ್ರಾಮದ ಮಹೇಶಕುಮಾರ್ (31) ಜೀವಾವಧಿ ಶಿಕ್ಷೆಗೆ ಒಳಗಾದವ . ಈತ 2020ರ ಏಪ್ರಿಲ್ 13ರಂದು ರಾತ್ರಿ ಪತ್ನಿ ಮಂಗಳಾ ಅಲಿಯಾಸ್ ಚೈತ್ರಾ (28)ಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ .

 ದಂಪತಿಗೆ ಮದುವೆಯಾಗಿ ಆರು ವರ್ಷವಾಗಿತ್ತು. ಆದರೂ ಮಕ್ಕಳಾಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಹೇಶಕುಮಾರ್‌ , ಪತ್ನಿ ಮಂಗಳಾ ಮಲಗಿದ್ದ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . 

ಅಂದಿನ ತನಿಖಾಧಿಕಾರಿ ಶಿಕಾರಿಪುರ ವೃತ್ತದ ಸಿಪಿಐ ಬಸವರಾಜ್ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಷಣ ಪಟ್ಟಿ ಸಲ್ಲಿಸಿದ್ದರು .  ಶನಿವಾರ ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಸ್.ಮಾನು ರವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.

click me!