ಪಕ್ಕದ ಮನೆಯ ವೃದ್ಧೆಯ ಚಿನ್ನಕ್ಕಾಗಿ ಕೊಲೆಗಾರರಾದ ವೃದ್ಧ ತಾಯಿ ಮತ್ತು ಮಗ!

By Suvarna News  |  First Published Oct 20, 2022, 6:03 PM IST

 ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಶಾಂತಿನಗರದ ಮನೆ ಒಂದರಲ್ಲಿ ಕೆಲ ದಿನಗಳ ಹಿಂದೆಯಷ್ಟೆ ನಡೆದಿದ್ದ ಕೊಲೆ ಪ್ರಕರಣ ಬಹಳಷ್ಟು ಇಂಟರೆಸ್ಟಿಂಗ್ ತಿರುವು ಪಡೆದಿದೆ.  ಪಕ್ಕದ ಮನೆಯವರೇ ಆದ 70 ವರ್ಷದ ವೃದ್ಧೆ ಹಾಗೂ ಆಕೆಯ ಮಗ ಆನಂದ್ ಕಿರಣ್ ಶಿಂಧೆ ಖಾರದ ಪುಡಿ ಎರಚಿ ಚಿನ್ನಕ್ಕಾಗಿ ಕೊಲೆ ಮಾಡಿದ್ದಾರೆ.


ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಅ.20) : ವಯಸ್ಸಾದ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಮಕ್ಕಳು, ಮೊಮ್ಮಕ್ಕಳ ಜೊತೆ ಖುಷಿಯಾಗಿರಬೇಕು ಎಂದುಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ವೃದ್ದೆ ಚಿನ್ನಕ್ಕಾಗಿ ಮಗನೊಂದಿಗೆ  ವೃದ್ದೆಯನ್ನ ಕೊಂದು, ಇತ್ತ ತಾನು ನೆಮ್ಮದಿಯಾಗಿರದೆ ಅತ್ತ ಮಗನ ಜೀವನ ಹಾಳು ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.  ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಶಾಂತಿನಗರದ ಮನೆ ಒಂದರಲ್ಲಿ ಕೆಲ ದಿನಗಳ ಹಿಂದೆಯಷ್ಟೆ ನಡೆದಿದ್ದ ಕೊಲೆ ಪ್ರಕರಣ ಬಹಳಷ್ಟು ಇಂಟರೆಸ್ಟಿಂಗ್ ತಿರುವು ಪಡೆದಿದೆ. ಅ.13 ರಂದು ಮನೆಯೊಳಗೆ ಮಂಚದ ಮೇಲೆ ಮಲಗಿದ್ದ ವೃದ್ದೆಯನ್ನ ಕೊಲೆ ಮಾಡಿದ್ದ ಸುದ್ದಿ ಬಂಗಾರಪೇಟೆ ಜನರನ್ನ ಬೆಚ್ಚಿ ಬೀಳಿಸಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ 74 ವರ್ಷದ ಗೀತಾ ಎಂಬ ವೃದ್ದೆಯನ್ನ ಪಕ್ಕದ ಮನೆಯವರೇ ಆದ 70 ವರ್ಷದ ಶಾಂತಾ ಬಾಯಿ ಹಾಗೂ ಆಕೆಯ 47 ವರ್ಷದ ಮಗ ಆನಂದ್ ಕಿರಣ್ ಶಿಂಧೆ ಖಾರದ ಪುಡಿ ಎರಚಿ ಚಿನ್ನಕ್ಕಾಗಿ ಕೊಲೆ ಮಾಡಿರುವುದು ಈಗ ಬಯಲಾಗಿದೆ. ಅ.13 ರ ಬುದವಾರದಂದು ಸಂಜೆ ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿರುವ ಆರೋಪಿಗಳಾದ ತಾಯಿ ಮಗ ವೃದ್ದೆಯ ಬಳಿ ಇದ್ದ ಚಿನ್ನವನ್ನ ಕೇಳಿದ್ದಾರೆ. ಆದ್ರೆ ಆಕೆ ನಿರಾಕರಿಸಿದ ವೇಳೆ ಉಸಿರುಗಟ್ಟಿಸಿ ಗುತ್ತಿಗೆ ಮೇಲೆ ಕಾಲಿಟ್ಟು ಕೊಂದು ಯಾರಿಗೂ ತಿಳಿಯದಂತೆ ಮನೆಯೆಲ್ಲಾ ಖಾರದ ಪುಡಿ ಎರಚಿ ಮಾಂಗಲ್ಯ ಸರ ಮತ್ತು ಕೈ ಬಳೆ ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದ ಬಂಗಾರಪೇಟೆ ಪೊಲೀಸರು ಸಿಸಿ ಟಿವಿ ಆಧರಿಸಿ ಪ್ರಕರಣದ ಬೆನ್ನತ್ತಿದ್ರು. ಆಗ ಪಕ್ಕದ ಮನೆಯವರೆ ವೃದ್ದೆಯನ್ನ ಚಿನ್ನಕ್ಕಾಗಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. 

Tap to resize

Latest Videos

ಇನ್ನೂ ಕೊಲೆಯಾದ ದಿನ ವೃದ್ದೆಯ ಮಗ ಪಟ್ಟಣದಲ್ಲಿ ಪ್ರಾವಿಜನ ಅಂಗಡಿಗೆ ತೆರಳಿದ್ರೆ ಸೊಸೆ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗಿದ್ದಾರೆ. ಇತ್ತ ಮೊಮ್ಮಗ ಶಾಲೆಗೆ ಹೋದಾಗ ಮನೆಯಲ್ಲಿ ಗೀತಾ ಅವರು ಒಬ್ಬರೇ ಇದ್ದಾರೆ.ಅಂದು ಮೊಮ್ಮಗ ಶಾಲೆಯಿಂದ ಬರುವಷ್ಟರಲ್ಲಿ ಅಜ್ಜಿ ಮನೆಯ ಹಾಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ರು. ಜೊತೆಗೆ ಅಜ್ಜಿಯ ಶವದ ಸುತ್ತ ಖಾರದ ಪುಡಿಯನ್ನು ಹಾಕಿದ್ರು. ಮನೆಯಲ್ಲಿದ್ದ ನಾಯಿಯನ್ನು ಕೊಣೆಯಲ್ಲಿ ಕೂಡಿ ಹಾಕಿ ಮನೆಯ ಹೊರಗೆ ಚಿಲಕ ಹಾಕಿಕೊಂಡು ಪರಾರಿಯಾಗಿದ್ದರು.

'ಮಂಗಳವಾರ ಮಟನ್‌ ಮಾಡ್ತೀರಾ' ಅನ್ನೋ ವಿಚಾರಕ್ಕೆ ದಂಪತಿಗಳ ಗಲಾಟೆ,

ಇದನ್ನು ಕಂಡ ಮೊಮ್ಮಗ ತನ್ನ ತಂದೆಗೆ ಪೋನ್ ಮಾಡಿ ಅಜ್ಜಿ ನೆಲದ ಬಿದ್ದು ಹೋಗಿದ್ದಾರೆ ಎಂದು ತಿಳಿಸಿದ್ದ. ಕೂಡಲೇ ಸ್ಥಳಕ್ಕೆ ಬಂದ ಮಗ ಸಂದೀಪ್ ತಾಯಿಯನ್ನು ನೋಡಿದಾಗ ತಾಯಿಯ ಮೇಲೆ ಗಾಯದ ಗುರುತುಗಳು ಮತ್ತು ಮೈಮೇಲೆ ಇದ್ದ ಚಿನ್ನಾಭರಣ ನಾಪತ್ತೆಯಾಗಿತ್ತು. ಅದರಂತೆ ಇದೆಲ್ಲಾ ಯಾರೋ ಪರಿಚಯಸ್ಥರೆ ಚಿನ್ನಕ್ಕಾಗಿ ಮಾಡಿರುವ ಕೃತ್ಯವಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿತ್ತು. ಅದರಂತೆ ನೆರೆ ಮನೆಗೆ ಅಳವಡಿಸಿದ್ದ ಸಿಸಿ ಟಿವಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಪೊಲೀಸರು,ಪಕ್ಕದ ಮನೆಯವರೆ ಆದ ವೃದ್ದೆ ಹಾಗೂ ಮಗನನ್ನ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಕೃತ್ಯ ಬಯಲಾಗಿದೆ. ವೃದ್ದೆಯ ಬಳಿ ಕದ್ದಿದ್ದ ಚಿನ್ನವನ್ನ ಕುಪ್ಪಂನಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ಸಧ್ಯ ತಪ್ಪೋಪ್ಪಿಕೊಂಡಿದ್ದು,ಜೈಲು ಸೇರಿದ್ದಾರೆ. 

ಧಾರವಾಡ: ಪತ್ನಿಯನ್ನು ಕೊಂದಿದ್ದ ಆರೋಪಿ ನೇಣಿಗೆ ಶರಣು

ಒಟ್ನಲ್ಲಿ ಚಿನ್ನಕ್ಕಾಗಿ ಒಬ್ಬ ವೃದ್ದೆಯನ್ನ ಮತ್ತೋಬ್ಬ ವೃದ್ದೆ ಹಾಗು ಮಗ ಕೊಂದಿದ್ದು ಮಾತ್ರ ವಿಪರ್ಯಾಸವೆ ಸರಿ. ತಾನಾಯ್ತು ತನ್ನ ಮಕ್ಕಳು ಮೊಮ್ಮಕ್ಕಳು ಅಂತ ಜೀವನ ನಡೆಸುತ್ತಿದ್ದ ವೃದ್ದೆಯನ್ನ ಕೊಂದ ಈ ವೃದ್ದೆಯ ಆಸೆ ನಿಜಕ್ಕೂ ಎಂತಹರಿಗೂ ಬೇಸರ ತರಿಸಿದ್ದು, ವಯಸ್ಸಾದ ಕಾಲದಲ್ಲಿ ಇದೆಲ್ಲಾ ಬೇಕಿತ್ತ ಅನ್ನೋದೆ ಎಲ್ಲರ ಪ್ರಶ್ನೆ.

click me!