
ಬೆಂಗಳೂರು(ಜು.08): ಇತ್ತೀಚೆಗೆ ಕಲ್ಲಿದ್ದಲು ಉದ್ಯಮಿ ಮನೆಯಲ್ಲಿ ಕಳ್ಳತನ ಮಾಡಿದ್ದ ಅವರ ಕೆಲಸದಾಳು ತಾಯಿ-ಮಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಾಯಿತ್ರಿ ನಗರದ ನಿವಾಸಿ ಜಯಂತಿ ಹಾಗೂ ಆಕೆಯ ಪುತ್ರಿ ಸೋನಿಯಾ ಬಂಧಿತರಾಗಿದ್ದು, ಆರೋಪಿಗಳು .16 ಲಕ್ಷ ಬೆಲೆ ಬಾಳುವ 272 ಗ್ರಾಂ ಚಿನ್ನಾಭರಣ, 997 ಗ್ರಾಂ ಬೆಳ್ಳಿ ಹಾಗೂ .1.72 ಲಕ್ಷ ನಗದು ದೋಚಿದ್ದರು. ಮಾಗಡಿ ರಸ್ತೆಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಗುಜರಾತ್ ಮೂಲದ ಕಲ್ಲಿದ್ದಲು ಉದ್ಯಮಿ ವಿಶಾಲ್ ಮನೆಯಲ್ಲಿ ಆರೋಪಿಗಳು ಕಳವ ಮಾಡಿದ್ದರು.
ಬೆಂಗಳೂರು: ಅಂಗಡಿ ಮಾಲೀಕನ ಮೇಲೆ ಸಿಟ್ಟಿಗೆ 110 ಲ್ಯಾಪ್‌ಟಾಪ್‌ಗಳನ್ನೇ ಕದ್ದರು..!
ಮನೆಯಲ್ಲಿ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ತಮ್ಮ ಆಭರಣಗಳನ್ನು ಅಡಮಾನವಿಟ್ಟು .5 ಲಕ್ಷ ಸಾಲವನ್ನು ತಾಯಿ-ಮಗಳು ಪಡೆದಿದ್ದರು. ಸಾಲ ತೀರಿಸುವ ಸಲುವಾಗಿ ವಿಶಾಲ್ ಮನೆಯಲ್ಲಿ ಅವರ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ