ತಮ್ಮ ಕೋಮಿನ ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಯುವಕನಿಗೆ 15-20 ಮಂದಿ ಗುಂಪು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಗರದಲ್ಲಿ ವರದಿಯಾಗಿದ್ದು, ನೈತಿಕ ಪೊಲೀಸ್‌ಗಿರಿ ಮೆರೆದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.
ದಾವಣಗೆರೆ (ಡಿ.10) : ತಮ್ಮ ಕೋಮಿನ ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಯುವಕನಿಗೆ 15-20 ಮಂದಿ ಗುಂಪು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಗರದಲ್ಲಿ ವರದಿಯಾಗಿದ್ದು, ನೈತಿಕ ಪೊಲೀಸ್‌ಗಿರಿ ಮೆರೆದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.
ಇಲ್ಲಿನ ಜಾಲಿ ನಗರ ನಿವಾಸಿ ಶ್ರೀನಿವಾಸ್ ಹಲ್ಲೆಗೊಳಗಾದ ಯುವಕ. ಈತನಿಗೆ ಮದುವೆ ನಿಶ್ಚಯವಾಗಿತ್ತು. ಆತ ಶುಕ್ರವಾರ ನೆರೆಮನೆ ಯುವತಿ ಮನೆವರೆಗೆ ಬಿಡಲು ಕೇಳಿದ್ದರಿಂದ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ. ಇದನ್ನು ಕಂಡು ಅನ್ಯ ಕೋಮಿನವರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ತಾಯಿ ಹನುಮಂತಮ್ಮ ಆರೋಪಿಸಿದ್ದಾರೆ.
ಮಂಗಳೂರು ನೈತಿಕ ಪೊಲೀಸ್‌ಗಿರಿ ಪ್ರಕರಣ; ಬಜರಂಗದಳದ ಇಬ್ಬರು ಕಾರ್ಯಕರ್ತರ ಬಂಧನ
ಶ್ರೀನಿವಾಸ್‌ಗೆ ಯಾವುದೋ ಮಾತ್ರೆ ತಿನ್ನಿಸಿ ತಡರಾತ್ರಿವರೆಗೂ ಹಲ್ಲೆ ಮಾಡಿದ್ದಾರೆ. ಆತ ಸತ್ತಿದ್ದಾನೆಂದು ಭಾವಿಸಿ ರಾತ್ರಿ ಬನಶಂಕರಿ ಬಡಾವಣೆ ಬಳಿ ಎಸೆದು ಹೋಗಿದ್ದರು. ಶನಿವಾರ ಬೆಳಗ್ಗೆ ಎಚ್ಚರಗೊಂಡ ಶ್ರೀನಿವಾಸ್ ದಾರಿ ಹೋಕರ ಮೊಬೈಲ್ ಪಡೆದು ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಈ ಮಧ್ಯೆ, ತಮ್ಮ ಮೇಲೆ ಕೊಲೆ ಕೇಸ್ ಬರುವ ಆತಂಕದಿಂದ ಯುವತಿಯಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ನೈತಿಕ ಪೊಲೀಸ್‌ಗಿರಿ ನೆಪದಲ್ಲಿ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಸಿಎಂ