ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂ. ವಂಚನೆ ; ನಗರಸಭೆ ಮಾಜಿ‌ ಉಪಾಧ್ಯಕ್ಷರ ಮಗ ಬಂಧನ

By Ravi Janekal  |  First Published Nov 3, 2022, 9:25 PM IST

ನಗರದ ಐಡಿಬಿಐ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ ರೂಪಾಯಿ ಹಣ ಸಾಲ ಪಡೆದಿದ್ದ ದತ್ತಾತ್ರೇಯ ಬಾಕಳೆ ಸೇರಿದಂತೆ 17 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಗದಗ (ನ.3) : ನಗರದ ಐಡಿಬಿಐ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ ರೂಪಾಯಿ ಹಣ ಸಾಲ ಪಡೆದಿದ್ದ ದತ್ತಾತ್ರೇಯ ಬಾಕಳೆ ಸೇರಿದಂತೆ 17 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Chikkamagaluru: ಅಸಲಿ ಚಿನ್ನದ ನಾಣ್ಯಗಳನ್ನು ತೋರಿಸಿ ಹಣ ಪಡೆದು ವಂಚನೆ, 3 ಮಂದಿ ಬಂಧನ

Tap to resize

Latest Videos

ವಂಚನೆಯ ಮಾಸ್ಟರ್ ಮೈಂಡ್ ದತ್ತಾತ್ರೇಯ ಬಾಕಳೆ, ಗದಗ ಬೆಟಗೇರಿ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಮಗನಾಗಿದ್ದಾನೆ. ಇದೇ ವರ್ಷದ ಏಪ್ರಿಲ್ ತಿಂಗಳಿಂದ ಜೂನ್ ವರೆಗೆ ದತ್ತಾತ್ರೇಯ ಸಹಚರರ ಹೆಸರಲ್ಲಿ ಬ್ಯಾಂಕ್ ನಲ್ಲಿ ನಕಲಿ ಚಿನ್ನದ ಆಭರಣ ಅಡವಿಟ್ಟಿದ್ದ. 

ಆರೋಪಿ ದತ್ತಾತ್ರೇಯ ಬಾಕಳೆ, ಬ್ಯಾಂಕ್ ನಲ್ಲಿನ ಚಿನ್ನ ಚೆಕ್ ಮಾಡುವ ಸುರೇಶ್ ರೇವಣಕರ ಅವರ ಸಹಾಯ ಪಡೆದು ವಂಚನೆ ಮಾಡಿದ್ದ. ದತ್ತಾತ್ರೇಯ ಆ್ಯಂಡ್ ಟೀಮ್ ತರುತ್ತಿದ್ದ ನಕಲಿ ಚಿನ್ನಕ್ಕೆ 22 ಕ್ಯಾರೆಟ್ ಚಿನ್ನ ಅಂತಾ ಸುರೇಶ್ ಸರ್ಟಿಫಿಕೇಟ್ ಕೊಡ್ತಿದ್ರಂತೆ. ಪ್ರಮಾಣ ಪತ್ರ ಪಡೆದು ಎರಡು ತಿಂಗಳ ಅಂತರದಲ್ಲಿ ಬೇರೆ ಬೇರೆ ಹೆಸರಲ್ಲಿ ಒಟ್ಟು 4,871.04 ಗ್ರಾಂ ನಕಲಿ ಚಿನ್ನವನ್ನ ಅಡ ಇರಿಸಲಾಗಿತ್ತು.. ಚಿನ್ನ ಅಡಮಾನವಿಟ್ಟು ಬರೋಬ್ಬರಿ 1 ಕೋಟಿ 43 ಲಕ್ಷ 34 ಸಾವಿರ ರೂಪಾಯಿಯನ್ನ ಸಾಲದ ರೂಪದಲ್ಲಿ ಪಡೆಯಲಾಗಿತ್ತು..

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?

ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ನಲ್ಲಿ ಇರಿಸಲಾಗಿದ್ದ ಚಿನ್ನವನ್ನ ಚೆಕ್ ಮಾಡಲಾಗಿತ್ತು. ತಪಾಸಣೆ ವೇಳೆ ಕೆಲ ಚಿನ್ನಾಭರಣ ನಕಲಿ‌ ಅನ್ನೋದು ಪತ್ತೆಯಾಗಿದೆ. ವಂಚನೆಯಾಗಿರೋ ಬಗ್ಗೆ ಮಾಹಿತಿ ಪಡೆದಿದ್ದ ಬ್ಯಾಂಕ್ ಮ್ಯಾನೇಜರ್ ಪರಶುರಾಮ ರೊಟ್ಟಿಗವಾಡ ಅವರು ಮುಖ್ಯ ಕಚೇರಿಗೆ ಮಾಹಿತಿ ನೀಡಿದ್ರು. ಮೇಲಧಿಕಾರಿಗಳ ಅನುಮತಿ ಪಡೆದ ನಂತರ ಸದ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಮುಖ್ಯ ಆರೋಪಿ ಬೆಂಗಳೂರಲ್ಲಿ ಬಂಧನ

ದತ್ತಾತ್ರೇಯ ಕಳೆದ ಕೆಲ ವರ್ಷಗಳಿಂದ ವಿವಿಧ ಫ್ರಾಡ್ ಕೇಸ್ ಗಳಲ್ಲಿ ಭಾಗಿಯಾಗಿದ್ದ. ಬೆಂಗಳೂರಿನಲ್ಲಿ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಯಾಗಿರುವ ಮಾಹಿತಿ ಸದ್ಯಕ್ಕೆ ಸಿಕ್ಕಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ 18 ಜನರಿಗಾಗಿ ಈಗಾಗ್ಲೆ ತಲಾಶ್ ನಡೆದಿದೆ. 

ಪ್ರಕರಣ ಸಂಬಂಧ ಬೆಟಗೇರಿ ಬಡಾವಣೆಯಲ್ಲಿ ಕೇಸ್ ದಾಖಲಾಗಿದ್ದು, ವಂಚನೆ ಸಹಕಾರ ನೀಡಿದ್ದ ಬ್ಯಾಂಕ್ ನ ಚಿನ್ನ ಚೆಕ್ ಮಾಡುತ್ತಿದ್ದ ಸುರೇಶ್ ರೇವಣಕರ, ದತ್ತಾತ್ರೇಯ ಬಾಕಳೆ, ಅರಣ್  ಕುಮಾರ್, ಆದಿಲ್ ನಿಶಾನಿ, ರವಿ ಹತ್ತರಕಲ್, ಗಣೇಶ ಮಾದರ, ಮಾಣಿಕ್ ಲಕ್ಕುಂಡಿ, ದಾನೇಶ್ ಉಮಾದಿ, ರಾಕೇಶ್ ನವಲಗುಂದ, ಮಂಜುನಾಥ ಹೊಸದು, ಸುಚೀತಕುಮಾರ ಹರಿವಾನ, ದುಂಡಪ್ಪ ಕೊಟ್ಟೂರುಶೆಟ್ಟರ್,  ಸಿದ್ಧಾರ್ಥ್ ಭರಡಿ, ನಾಗರಾಜ ರಾಮಗಿರಿ, ಅರುಣಕುಮಾರ ಹೂಗಾರ, ಸಚಿನ್ ಹರಿವಾಣ,  ಸಂತೋಷ ವೀರಶೆಟ್ಟಿ ಅವರ ವಿರುದ್ಧ ದೂರು ದಾಖಲಾಗಿದೆ. 

Bengaluru: ಕೇಜಿಗಟ್ಟಲೇ ಕಲಬೆರಕೆ ಚಿನ್ನ ಮಾರುತ್ತಿದ್ದ ಗ್ಯಾಂಗ್‌: ಮಾಲೀಕ ಸೇರಿ ನಾಲ್ವರ ಬಂಧನ!

ನಕಲಿ ಚಿನ್ನಾಭರಣ ಎಲ್ಲಿಂದ ಖರೀದಿ ಮಾಡಿದ್ರು. ಆರೋಪಿಗಳಿಂದ ಎಷ್ಟು ಹಣ ಸೀಜ್ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಮುಂದಿನ ತನಿಖೆಯ ನಂತರ ತಿಳಿದು ಬರಲಿದೆ. ಪ್ರಕರಣವನ್ನ ಗಂಭೀರವಾಗಿ ಪರಿಣಗಿಸಿರುವ ಪೊಲೀಸರು, ತನಿಖೆ ತೀವ್ರಗೊಳಿಸಿದ್ದಾರೆ. ನಕಲಿ ಚಿನ್ನಾಭರಣ ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

click me!