
ವರದಿ : ವರದರಾಜ್
ದಾವಣಗೆರೆ (ಡಿ.15) : ಜರ್ಮನ್ ನಲ್ಲಿ ಮೊಬೈಲ್ ಬ್ಲಾಸ್ಟ್ ಆಗಿ ಬಳಿಕ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ದಾವಣಗೆರೆ ಮೂಲದ ವಿದ್ಯಾರ್ಥಿ ಸಾವನಪ್ಪಿದ್ದಾನೆ. ದಾವಣಗೆರೆಯ ಸರಸ್ವತಿ ನಗರದ ನಿವಾಸಿ ಸಂತೋಷ್ (30) ಸಾವನಪ್ಪಿದ ಯುವಕ. ಶಿಕ್ಷಕ ದಂಪತಿಗಳಾದ ರೇವಣಸಿದ್ದಪ್ಪ, ಇಂದಿರಮ್ಮರವರ ಪುತ್ರ ಸಂತೋಷ್ ಮೃತ ವಿದ್ಯಾರ್ಥಿ.
ಜರ್ಮನ್ ನ ಕೆಮ್ನೀಟ್ಜ್ (CHIMNITZ) ಯೂನಿವರ್ಸಿಟಿ ಯಲ್ಲಿ ಕೆಮ್ನೀಟ್ಜ್ (CHIMNITZ) ಟೆಕ್ನಾಲಜೀಸ್ ನಲ್ಲಿ ಎಂಟೆಕ್ ಓದುತ್ತಿದ್ದ ಸಂತೋಷ್. ಕೆಲ ದಿನಗಳ ಹಿಂದೆ ಸಂತೋಷ್ ವಿದ್ಯಾಭ್ಯಾಸಕ್ಕೆ ಜರ್ಮನ್ ಗೆ ತೆರಳಿದ್ದ. ಕೆಮ್ನೀಟ್ಜ್ ಸಿಟಿಯಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ. ನವೆಂಬರ್ 30 ರಂದು ಆತನು ವಾಸಿಸುತ್ತಿದ್ದ ರೂಂನಲ್ಲಿ ಮೊಬೈಲ್ ಬ್ಲಾಸ್ಟ್ ಆಗಿದೆ. ಈ ವೇಳೆ ಆದ ಶಾರ್ಟ್ ಸರ್ಕ್ಯೂಟ್‌ನಿಂದ ಸಂತೋಷ್ ಸಾವನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.
ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ : ಯುವಕನಿಗೆ ಗಂಭೀರ ಗಾಯ
ಸಂತೋಷ್ ಸಾವನಪ್ಪಿ 16ನೇ ದಿನಕ್ಕೆ ಮೃತದೇಹ ತವರಿಗೆ ರಾವಾನೆಯಾಗಿದ್ದು, ನಾಳೆ ದಾವಣಗೆರೆಯ ಸ್ವಗ್ರಾಮ ಪುಣಬಘಟ್ಟದಲ್ಲಿ ಸಂತೋಷ ಅಂತ್ಯಕ್ರಿಯೆ ನೆರವೇರಲಿದೆ. ಇನ್ನು ಮಗನನ್ನು ಕಳೆದುಕೊಂಡ ಪೋಷಕರು ಹಾಗು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ನವೆಂಬರ್ 30 ರಂದು ಈ ಘಟನೆ ಜರುಗಿದೆ ಎಂದು ಜರ್ಮನ್ ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಾಕಷ್ಟು ಕನಸು ಕಟ್ಟಿಕೊಂಡು ದಾವಣಗೆರೆ ತೊರೆದು ಜರ್ಮನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ. ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಘಟನೆ ನಡೆದಿದ್ದು ಹೇಗೆ?
ನವೆಂಬರ್ 30 ರ ಬುಧವಾರದಂದು ತಡರಾತ್ರಿ ಅವಘಡ ನಡೆದಿದೆ. ಬೆಳಗ್ಗೆ 7.35 ರ ಸಮಯದಲ್ಲಿ ಕೆಮ್ನೀಟ್ಜ್ ಸಿಟಿಯ ಅಪಾರ್ಟ್‌ಮೆಂಟ್‌ನ 6 ನೇ ಮಹಡಿಯಲ್ಲಿನರುವ ವಿದ್ಯಾರ್ಥಿ ರೂಂನಲ್ಲಿ ದಟ್ಟವಾದ ಹೊಗೆ ಹಾಗು ಸ್ವಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ, ರಕ್ಷಣಾ ಸೇವೆಗಳು ಹಾಗು ಪೊಲೀಸರಿಗೆ ಕರೆ ಮಾಡಿದ್ದಾರೆ. ಘಟನ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಸಂತೋಷ್ ಸುಟ್ಟು ಕರಕಲಾಗಿದ್ದನೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮದುವೆ ಮನೆಯಲ್ಲಿ ಭೀಕರ ಅವಘಡ, ಸಿಲಿಂಡರ್ ಸ್ಫೋಟಕ್ಕೆ ಐವರು ಸಾವು, 52 ಮಂದಿ ಗಾಯ!
ಸಂತೋಷ್ ಸಾವು ಅನುಮಾನಕ್ಕೆಡೆ ಮಾಡಿಕೊಟ್ಟಿದ್ದರಿಂದ ಪೋಲಿಸರು ತನಿಖೆ ನಡೆಸುತ್ತಿದ್ದಾರೆಂದು ಬ್ಲಿಕ್ ಡಾಟ್ ಡಿ ಎಂಬ ವೆಬ್ ಸೈಟ್ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ