ಜೆನ್ಶಿಯಾ ಮತ್ತು ಆಕೆಯ ಪೋಷಕರು ಬೇಸಿಗೆ ರಜೆಯನ್ನು ಕಳೆಯಲು ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಮೊಬೈಲ್ ಹೆಚ್ಚು ಬಳಸಬೇಡ ಎಂದು ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜಾಮ್‌ನಗರ (ಗುಜರಾತ್) (ಮೇ 31, 2023): ಗುಜರಾತ್‌ನ ಜಾಮ್‌ನಗರದಲ್ಲಿ ಹದಿಹರೆಯದ ಬಾಲಕಿಗೆ ಮೊಬೈಲ್ ಚಟ ಮಾರಕವಾಗಿದೆ. 13 ವರ್ಷದ ಬಾಲಕಿಯೊಬ್ಬಳು ತನ್ನ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಸಮಯ ಕಳೆದಿದ್ದಕ್ಕಾಗಿ ತಾಯಿ ಗದರಿಸಿದ್ದಕ್ಕೆ ನೊಂದುಕೊಂಡು ತನ್ನ ಜೀವನವನ್ನೇ ಅಂತ್ಯಗೊಳಿಸಿದ್ದಾಳೆ ಅಂದರೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಬಾಲಕಿಯನ್ನು ಜೆನಿಶಾ ಅಭಂಗಿ ಎಂದು ಗುರುತಿಸಲಾಗಿದ್ದು, ಆಕೆ ಸೂರತ್ ಮೂಲದವಳು ಎಂದು ತಿಳಿದುಬಂದಿದೆ. ಜಾಮ್‌ನಗರದ ಧ್ರೋಲ್ ತಾಲೂಕಿನ ಪಿಪರ್ತೋಡ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಚಿಕ್ಕಪ್ಪನ ಮನೆಯಲ್ಲಿ ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಜೆನ್ಶಿಯಾ ಮತ್ತು ಆಕೆಯ ಪೋಷಕರು ಬೇಸಿಗೆ ರಜೆಯನ್ನು ಕಳೆಯಲು ಬಾಲಕಿಯ ತಾಯಿಯ ಸೋದರನ ಮನೆಗೆ ಬಂದಿದ್ದರು. ಬಾಲಕಿ 7ನೇ ತರಗತಿ ಪರೀಕ್ಷೆ ಬರೆದ ಬಳಿಕ ಸಂಬಂಧಿಕರ ಮನೆಗೆ ಬಂದಿದ್ದಳು ಎಂದು ತಿಳಿದುಬಂದಿದೆ.
ಇದನ್ನು ಓದಿ: ಅಪ್ರಾಪ್ತ ಬಾಲಕಿ ಮೇಲೆ ಹಲವು ಬಾರಿ ಗ್ಯಾಂಗ್ ರೇಪ್: ಕೃತ್ಯ ಸೆರೆ ಹಿಡಿದು ಕಾಮುಕರ ಬ್ಲ್ಯಾಕ್‌ಮೇಲ್
ಇನ್ನು, ಈ ಬಗ್ಗೆ ಮಾಹಿತಿ ನೀಡಿದ ಮೃತ ಬಾಲಕಿ ಜೆನ್ಶಿಯಾ ಅವರ ತಾಯಿ ಊರ್ಮಿಳಾ, ತಾನು ಮತ್ತು ತನ್ನ ಸಹೋದರ ಶುಕ್ರವಾರ ಫೋನ್‌ನಲ್ಲಿ ಹೆಚ್ಚು ಸಮಯ ಕಳೆದಿದ್ದಕ್ಕಾಗಿ ಗದರಿಸಿದ್ದೆವು. ಬಳಿಕ, ಆಕ ಕೋಣೆಯೊಳಗೆ ಹೋಗಿದ್ದಾಳೆ. ಆದರೆ, ಅದನ್ನು ಗಮನಿಸದೆ ಆಕೆ ಹೊರಗೆ ಆಟವಾಡುತ್ತಿದ್ದಾಳೆ ಎಂದು ಕುಟುಂಬದವರು ಭಾವಿಸಿದ್ದರು. ಆಕೆ ವಾಪಸ್ ಬಾರದೆ ಇದ್ದಾಗ ಕುಟುಂಬದವರು ಹುಡುಕಾಟ ಆರಂಭಿಸಿದ್ದರು.
ಕೆಲ ಸಮಯದ ಬಳಿಕ ಕೊಠಡಿಯ ಬಾಗಿಲು ತೆರೆದಾಗ, ಜೆನ್ಷಿಯಾ ಸೀಲಿಂಗ್ ಫ್ಯಾನ್‌ಗೆ ತನ್ನ ದುಪಟ್ಟಾದೊಂದಿಗೆ ನೇಣು ಹಾಕಿಕೊಂಡಿರುವುದನ್ನು ಕುಟುಂಬ ಸದಸ್ಯರು ಕಂಡಿದ್ದಾರೆ ಎಂದು ಬಾಲಕಿಯ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಬಳಿಕ, ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗೆ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: Honour Killing: ಪ್ರೀತಿ ಮಾಡಿದ್ದೇ ತಪ್ಪಾಯ್ತಾ..? ಯುವತಿಗೆ ಕುಟುಂಬಸ್ಥರಿಂದ ತೀವ್ರ ಚಿತ್ರಹಿಂಸೆ, ಸಜೀವ ದಹನ
ಇನ್ನು, ಈ ಘಟನೆ ಬಗ್ಗೆ ಲಾಲ್‌ಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾತನಾಡಿದ್ದು, "ನಾವು ಕುಟುಂಬದ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಹುಡುಗಿ ಇಡೀ ದಿನವನ್ನು ಮೊಬೈಲ್‌ನಲ್ಲೇ ಕಳೆದಿದ್ದಾಳೆ. ಈ ಹಿನ್ನೆಲೆ ಪೋಷಕರು ಮತ್ತು ಸಂಬಂಧಿ ಆಕೆಯ ಮೊಬೈಲ್ ಚಟಕ್ಕೆ ಅವಳಿಗೆ ಬೈದಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ, ಈ ಸಂಬಂಧ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮತ್ತೊಂದು ಲವ್ ಜಿಹಾದ್ ಕೇಸ್: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!