ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ವಾಮೀಜಿ ಪೊಲೀಸ್ರು ತೀವ್ರ ವಿಚಾರಣೆ ನಡೆಸಿದ್ದು, ಇದೀಗ ಸ್ಥಳ ಮಹಜರ್ ಶುರು ಮಾಡಿದ್ದಾರೆ.
ಚಿತ್ರದುರ್ಗ, (ಸೆಪ್ಟೆಂಬರ್.04): ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜುನ್ಯ ಎಸಗಿದ ಆರೋಪದ ಮೇಲೆ ಮುರುಘಾ ಮಠದ ಶರಣರು ಬಂಧಿತರಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರವ ಶ್ರೀಗಳನ್ನು ಪೊಲೀಸರು ನಿನ್ನೆ(ಸೆ.01) ಹಾಗೂ ಇಂದು(ಭಾನುವಾರ) ಫುಲ್ ವಿಚಾರಣೆ ನಡೆಸಿದ್ದು, ಮುರುಘಾ ಶ್ರೀಗಳಿಂದ ಸಾಕಷ್ಟು ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರ ಪ್ರಯತ್ನಿಸಿದ್ದಾರೆ. ಆದ್ರೆ, ಕೆಲವೊಂದು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದು, ಇನ್ನುಳಿದ ಪ್ರಶ್ನೆಗಳಿಗೆ ಮುರುಘಾ ಶ್ರೀ ಮೌನವೇ ಉತ್ತರವಾಗಿದೆ.
ಹೊಸಬರ ಎಂಟ್ರಿ: ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸ್ಫೋಟಕ ತಿರುವು
ಪೊಲೀಸರಿಂದ ಸ್ಥಳ ಮಹಜರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರನ್ನ ಮಠಕ್ಕೆ ಕರೆತಂದು ಸ್ಥಳ ಮಹಜರು ಮಾಡಿದ್ದಾರೆ. ಇದೀಗ ವಿಚಾರಣೆ ಬಳಿಕ ಸ್ವಾಮೀಜಿಯನ್ನು ಮುರುಘಾ ಮಠಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡುತ್ತಿದ್ದಾರೆ. ತನಿಖಾಧಿಕಾರಿ ಅನಿಕ್ ಕುಮಾರ, ಎಸ್ಪಿ ಕೆ. ಪರಶುರಾಮ ನೇತೃತ್ವದಲ್ಲಿ ಮಹಜರ್ ಪ್ರಕ್ರಿಯೆ ನಡೆಯುತ್ತಿದ್ದು, ಮಹಜರ್ ಗೂ ಮುನ್ನ ಪೊಲೀಸರು ಮುರುಘಾ ಶ್ರೀಗೆ ಮೊದಲು ಗದ್ದುಗೆ ದರ್ಶನ ಮಾಡಿಸಿದರು.
ಅಲ್ಲಿಂದ ಮೊದಲು ಪೊಲೀಸರು, ಮುರುಘಾ ಶ್ರೀಗಳ ಬೆಡ್ ರೂಮ್ ಗೆ ತೆರಳಿ ಮಹಜರ್ ಶುರು ಮಾಡಿದರು. ಮುರುಘಾ ಶ್ರೀಗಳು ಕೂರ್ತಿದ್ದ ಚೇಂಬರ್ ಹಾಗೂ ದರ್ಬಾರ್ ಹಾಲ್‌ನಲ್ಲೂ ಮಹಜರು ಮಾಡುತ್ತಿದ್ದು, ಏನಾದರೂ ಸಿಗುತ್ತಾ ಎಂದು ಸಾಕ್ಷಿ ಕಲೆ ಹಾಕುವ ಯತ್ನ ನಡೆಸಿದ್ದಾರೆ. ಇದರಿಂದ ಮಠವನ್ನು ಕಳೆದ ಒಂದು ಗಂಟೆಯಿಂದ ಜಾಲಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.